‘ಬಚ್ಚಲು ಗುಂಡಿ’ ಗ್ರಾಮೀಣ ಪ್ರದೇಶದ ಸ್ವಚ್ಛತೆ ಮತ್ತು ಆರೋಗ್ಯದ ಸಂಕೇತ-ತಾಪಂ ಇಒ ಬಸವರಾಜ ಹೆಗ್ಗನಾಯಕ
ಮೂಡಲಗಿ: ಭಾರತ ದೇಶ ಪ್ರಾಚೀನ ಕಾಲದಿಂದಲೂ ಶುಚಿತ್ವ, ನೈರ್ಮಲ್ಯೀಕರಣ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಹೆಸರುವಾಸಿ, ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಇವುಗಳ ಮೌಲ್ಯ ಕುಸಿಯುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದ್ದಾರೆ.
ಅವರು ಸಮೀಪದ ಮುಸಗುಪ್ಪಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಫಲಾನುಭವಿಗಳ ‘ಬಚ್ಚಲು ಗುಂಡಿ’ ವಿಕ್ಷೀಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನರೇಗಾ ಯೋಜನೆಯಡಿ ನಿರ್ಮಿಸಲಾಗುವ ಬಚ್ಚಲು ಗುಂಡಿಯಿಂದ ಗ್ರಾಮದ ಸೌಂದರ್ಯ ಹೆಚ್ಚುತ್ತದೆ. ಅನೇಕ ರೋಗ ರುಜಿನಗಳನ್ನು ತಡೆಗಟ್ಟಬಹುದು. ಅಲ್ಲದೆ ಪ್ರತಿ ಮನೆಗೆ ಕೂಲಿಯಿಂದ ಹಣಕಾಸಿನ ಸಹಾಯ ದೊರಕುತ್ತದೆ.ನಿರೂಪಯುಕ್ತ ನೀರನ್ನು ಭೂಮಿಯಲ್ಲಿ ಇಂಗಿಸುವದರಿಂದ ಭೂ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಮಹತ್ಮಾಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಮನೆಗೆ ಅಂದಾಜು ವೆಚ್ಚ 14000 ರೂ. ಗಳಲ್ಲಿ ಬಚ್ಚಲು ಗುಂಡಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಆಸಕ್ತ ಫಲಾನುಭವಿ ಆಧಾರ ಕಾರ್ಡ್, ರೇಶನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸಪುಸ್ತಕಜೊತೆಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ನಿರ್ಧೇಶಕ ಎಸ್.ಎಸ್ ರೊಡ್ಡನವರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಆರ್.ಎನ್ ಗುಜನಟ್ಟಿ, ಕಾರ್ಯದರ್ಶಿ ಎಸ್.ಆರ್ ಮುರಗೋಡ ಉಪಸ್ಥಿತರಿದ್ದರು.