Breaking News
Home / Recent Posts / ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ : ಕುದರಿ

ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ : ಕುದರಿ

Spread the love

ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ : ಕುದರಿ

ಘಟಪ್ರಭಾ : ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ. ದೇಶಕ್ಕೆ ವಿಶ್ವದಲ್ಲಿಯೇ ದೊಡ್ಡ ಸಂವಿಧಾನ ನೀಡಿರುವ ಅಂಬೇಡ್ಕರ ಅವರನ್ನು ಗೌರವಿಸಿ ಪೂಜಿಸಬೇಕಾದ ಅಗತ್ಯವಿದೆ ಎಂದು ಅರಭಾವಿ ಮಂಡಲ ಎಸ್‍ಸಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕುದರಿ ಹೇಳಿದರು.
ಭಾನುವಾರದಂದು ಇಲ್ಲಿಗೆ ಸಮೀಪದ ಅರಭಾವಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ ಅವರನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ. ಸರ್ವ ಜನಾಂಗದ ಏಳ್ಗೆಗಾಗಿ, ಒಳತಿಗಾಗಿ ಶ್ರಮಿಸಿದ್ದ ಡಾ. ಅಂಬೇಡ್ಕರ ಅವರು ಇಡೀ ವಿಶ್ವಕ್ಕೆ ರತ್ನ ಎಂದು ಅವರು ಹೇಳಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಬಿಜೆಪಿ ಪ್ರಮುಖರಾದ ಪ್ರಕಾಶ ಮಾದರ, ಪ್ರಶಾಂತ ದಳವಾಯಿ, ಸುನೀಲ ಜಮಖಂಡಿ, ಜಿಲ್ಲಾ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಯಮನಪ್ಪ ಮೇತ್ರಿ, ಎಸ್‍ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಮಹಿಳಾ ಮೋರ್ಚಾ ಅಧ್ಯಕ್ಷೆ ವಾಸಂತಿ ತೇರದಾಳ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಕ್ಬಾಲ್ ಸರ್ಕಾವಸ್, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ನಾಗನೂರ ಪಪಂ ಉಪಾಧ್ಯಕ್ಷೆ ಮಂಗಲಾ ಕೌಜಲಗಿ, ಕಮಲಾದೇವಿ ಬಡಗಾಂವಿ, ಇಂದಿರಾ ಅಂತರಗಟ್ಟಿ, ರೈತ ಮೋರ್ಚಾ ಭೀಮಶಿ ಬಂಗಾರಿ, ಮುಂತಾದವರು ಉಪಸ್ಥಿತರಿದ್ದರು.
ಎಲ್‍ಇಟಿ ಕಾಲೇಜಿನ ಉಪನ್ಯಾಸಕ ವಿಠ್ಠಲ ಕನೀಲ್ದಾರ ಡಾ.ಅಂಬೇಡ್ಕರ ಕುರಿತು ಉಪನ್ಯಾಸ ನೀಡಿದರು.


Spread the love

About inmudalgi

Check Also

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

Spread the loveಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ