Breaking News
Home / Recent Posts / ಡಾ ಬಾಬಾಸಾಹೇಬ ಅಂಬೇಡ್ಕರ ಅವರ ತತ್ವಾದರ್ಶಗಳು ಹಾಗೂ ಅವರು ನಡೆದುಕೊಂಡ ಜೀವನ ಶೈಲಿ ನೀಜಕ್ಕೂ ಮಾದರಿಯಾಗಿದೆ

ಡಾ ಬಾಬಾಸಾಹೇಬ ಅಂಬೇಡ್ಕರ ಅವರ ತತ್ವಾದರ್ಶಗಳು ಹಾಗೂ ಅವರು ನಡೆದುಕೊಂಡ ಜೀವನ ಶೈಲಿ ನೀಜಕ್ಕೂ ಮಾದರಿಯಾಗಿದೆ

Spread the love

ಮೂಡಲಗಿ : ಪ್ರಪಂಚದಲ್ಲಿ ಅಭೂತ ಪೂರ್ವ ಕೊಡೆಗೆಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಯಶಸ್ವಿಯಾದ ಸಂವಿಧಾನ ನಿರ್ಮಾತೃ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ತತ್ವಾದರ್ಶಗಳು ಹಾಗೂ ಅವರು ನಡೆದುಕೊಂಡ ಜೀವನ ಶೈಲಿ ನೀಜಕ್ಕೂ ಮಾದರಿಯಾಗಿದೆ ಎಂದು ಜಿಲ್ಲಾ ಡಿ.ಎಸ್.ಎಸ್ ಸಂಚಾಲಕ ಹಾಗೂ ಮಾಜಿ ಪುರಸಭೆ ಸದಸ್ಯ ರಮೇಶ ಸಣ್ಣಕ್ಕಿ ಹೇಳಿದರು.
ಪಟ್ಟಣದ ರಾಜೀವಗಾಂಧಿ ನಗರದ ಅಂಬೇಡ್ಕರ್ ಭವನದಲ್ಲಿ ಮಹಾಪರಿನಿರ್ವಾಣ ದಿನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾಂದ್ಯಂತ ಸಂವಿಧಾನ ನಿರ್ಮಾತೃ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಶ್ರೀಸಾಮಾನ್ಯರು ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಾರೆ. ಅಂಬೇಡ್ಕರ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ದೇಶದ ಬಗ್ಗೆ ಇಟ್ಟಿರುವ ಕನಸುಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಬೇಕೆಂದು ಹೇಳಿದರು.

ವಿಲ್ಸನ್ ಖಾನಟ್ಟಿ ಮಾತನಾಡಿ, ಮೌಡ್ಯತೆ, ದಾರಿದ್ರ್ಯ, ಅನಿಷ್ಠ ಪದ್ದತಿಗಳು ಸಮಾಜದಲ್ಲಿರದೆ ಪ್ರತಿಯೊಬ್ಬರು ಶ್ರೇಷ್ಠಮಯವಾಗಿ ಬದುಕ ಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಪ್ರತಿಯೊಂದನ್ನು ನಾವು ಪಡೆಯಲು ಸಾದ್ಯವಾಗುವದು ಎಂದರು.
ಈ ಸಂzರ್ಭದಲ್ಲಿ ಟಿಎಪಿಎಮ್‍ಸಿ ಸದಸ್ಯ ಪ್ರಭು ಭಂಗೆನ್ನವರ, ಪುರಸಭೆ ಮಾಜಿ ಸದಸ್ಯ ಮರೆಪ್ಪ ಮರೆಪ್ಪಗೋಳ, ವಿಲಾಸ ಸಣ್ಣಕ್ಕಿ ಅಶೋಕ ಮರೆನ್ನವರ, ಹಣಮಂತ ಹವಳೇವ್ವಗೋಳ, ರಾಜು ಪರಸನ್ನವರ, ಚನ್ನಪ್ಪ ಢವಳೇಶ್ವರ, ಜಯವಂತ ನಾಗನ್ನವರ, ಸುಂದರ ಬಾಲಪ್ಪನ್ನವರ, ಸುಂದರ ಹವಳೇವ್ವಗೋಳ, ಬಾಬು ಮೇತ್ರಿ ಮತ್ತು ದಲಿತ ಸಂಘರ್ಷ ಸಮೀತಿಯ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಛೇರಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿಯ(ಸಂಯೋಜಕ) ಇಲ್ಲಿಯ ಜಿಲ್ಲಾ ಕಚೇರಿಯಲ್ಲಿ ರವಿವಾರದಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದಂದು ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಮೀತಿಯ ಜಿಲ್ಲಾ ಅದ್ಯಕ್ಷ ಯಶವಂತ ಮಂಟೂರ ಪೂಜೆ ಸಲ್ಲಿಸಿ ಮಾತನಾಡಿದರು.

ಸಮೀತಿಯ ತಾಲೂಕಾ ಸಂಚಾಲಕ ದುರ್ಗಪ್ಪ ದಂಡಿನ್ನವರ, ಚಿಂತಪ್ಪ ಭರಮನ್ನವರ, ಶಿವಾನಂದ ಹುಣಶಿಗಿಡ್ಡದ, ಶಿವಾಜಿ ಸಾವಳಂಕಿ, ಪವನ ಮಾದರ, ಸಂಜು ಶಿಡ್ಲೆಪ್ಪಗೋಳ, ಮಹಾದೇವ ಕೊಳವಿ, ಮಲೀಕ್ ಬಾಗವಾನ ಮತ್ತಿತರರು ಇದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ