Breaking News
Home / Recent Posts / ಡಿ. 19ರಿಂದ ಉಚಿತ ಯೋಗ ಶಿಬಿರ

ಡಿ. 19ರಿಂದ ಉಚಿತ ಯೋಗ ಶಿಬಿರ

Spread the love

ಡಿ. 19ರಿಂದ ಉಚಿತ ಯೋಗ ಶಿಬಿರ

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮಹಾಲಿಂಗಪೂರದ ಮೈಂಡ್ ಸೈನ್ಸ್ ಫೌಂಡೇಶನ ಇವರ ಸಹಯೋಗದಲ್ಲಿ ದೇಹ, ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಪುರುಷ ಮತ್ತು ಮಹಿಳೆಯರಿಗೆ ‘ಬಸವ ಚೈತನ್ಯ ಉಚಿತ ಯೋಗ ಶಿಬಿರ’ವನ್ನು ಡಿ. 19ರಿಂದ ಡಿ. 23ರ ವರೆಗೆ 5 ದಿನಗಳ ಬೆಳಿಗ್ಗೆ 6ರಿಂದ ಬೆಳಿಗ್ಗೆ 8 ಗಂಟೆ ವರೆಗೆ ಸ್ಥಳೀಯ ಶ್ರೀ ಶಿವಬೋಧರಂಗ ಕೋ.ಆಪ್.ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಏರ್ಪಡಿಸಿರುವರು.
ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ, ಉದ್ವೇಗತೆ, ಖಿನ್ನತೆ, ರೋಗ ನಿರೋಧಕ ಶಕ್ತಿ ಕ್ಷೀಣತೆಗಳಿಗೆ ಶಿಬಿರದಲ್ಲಿ ಪರಿಹಾರ ದೊರೆಯಲಿದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಲಹೆಗಾರರಾದ ಚನ್ನಬಸವ ಗುರೂಜಿ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರುಗುವುದು. ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶ ಸೋನವಾಲಕರ ತಿಳಿಸಿದ್ದಾರೆ. ಹೆಸರು ನೊಂದಾಯಿಸಲು ಮೊ. 9448636226, 9448839086 ಸಂಪರ್ಕಿಸಲು ತಿಳಿಸಿದ್ದಾರೆ.


Spread the love

About inmudalgi

Check Also

ಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ

Spread the love ಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ ವರದಿ *ಅಡಿವೇಶ ಮುಧೋಳ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ