ಎಪಿಎಂಸಿ ಆವರಣದಲ್ಲಿ ಅಥಿತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ
ಮೂಡಲಗಿ: ಇಲ್ಲಿಯ ಕೃಷಿ ಉತ್ಪನ ಮಾರುಕಟ್ಟೆ ಆವರಣದಲ್ಲಿ 2020-21ನೇ ಸಾಲಿನ ವಾರ್ಷಿಕ ಕ್ರೀಯಾ ಯೋಜನೆಯಲ್ಲಿ ಸೂಮಾರು 40 ಲಕ್ಷ ರೂಗಳ ಅನುದಾನದಲ್ಲಿ ಅಥಿತಿ ಗೃಹ ನಿರ್ಮಾಣಕ್ಕೆ ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ ಮತ್ತು ಎಪಿಎಂಸಿ ಉಪಾಧ್ಯಕ್ಷ ಕೆ.ಕೆ.ಸಂಕ್ರೆಪ್ಪಗೋಳ ಭೂಮಿ ಪೂಜೆ ನೆರೆವೇರಿಸಿದರು.
ಭೂಮಿ ಪೂಜೆ ನೆರವೇರಿಸಿದ ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ ಮಾತನಾಡಿ, ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮತ್ತು ವಿಷೇಶ ಕಾಳಜೀಯಿಂದ ಜನ ಸಮಾನ್ಯರಿಗೆ ಮತ್ತು ರೈತರಿಗೆ ಅನುಕೂಲಕ್ಕಾಗಿ ಅಥಿತಿ ಗೃಹವನ್ನು ನಿರ್ಮಿಸಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಎಪಿಎಂಸಿ ನಿರ್ದೇಶಕರಾದ ಶಿವುದುಂಡು ಕೊಂಗಾಲಿ, ಮಾರುತಿ, ಹರಿಜನ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಮೂಡಲಗಿ ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕ, ನಿಂಗಪ್ಪ ಪಿರೋಜಿ, ಪುರಸಭೆ ಸದಸ್ಯ ಜಯಾನಂದ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಬಿ.ಆರ್.ಜಾಲಿಬೇರಿ, ಆರ್.ಎಮ್.ದೊಡಮನ್ನಿ, ಗುತ್ತಿಗೇದಾರ ಆರ್.ಎನ್.ಮುಶೆನ್ನವರ ಮತ್ತಿತರರು ಇದ್ದರು.