ಬೆಳಗಾವಿ: ಬೆಳಗಾವಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಒಂದು ಮಾದರಿ ರೈಲ್ವೆ ನಿಲ್ದಾಣ ಮಾಡುವುದು ದಿ. ಸುರೇಶ ಅಂಗಡಿ ಅವರ ಕನಸಾಗಿತ್ತು. ಹೀಗಾಗಿ ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವದಿಯೊಳಗೆ ಕೆಲಸ ಪೂರೈಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ (ಜ.25) ರಂದು ನಗರದ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಬೆಳಗಾವಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಒಟ್ಟು 190.02 ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ, ಅದರಲ್ಲಿ ಹೊಸ ರೈಲ್ವೆ ನಿಲ್ದಾಣದ ಕಟ್ಟಡಕ್ಕೆ 44.90 ಕೋಟಿ ರೂ, ಕೋಚಿಂಗ್ ಡಿಪೋ ಮತ್ತು ಸರ್ವಿಸ ಕಟ್ಟಡಕ್ಕೆ 46.67 ಕೋಟಿ ರೂ, ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್ ಮತ್ತು ಟೆಲಿಕಾಂ ಸಂಬಂಧಿತ ಕೆಲಸಗಳಿಗೆ 79.76 ಕೋಟಿ ರೂ. ಎರಡನೆಯ ಪ್ರವೇಶ ಕಟ್ಟಡಕ್ಕೆ 18.69 ಕೋಟಿ ರೂ, ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದÉ ಎಂದರು.
ಒಪ್ಪಂದದ ಪ್ರಕಾರ ಕಾಮಗಾರಿ ಪೂರ್ಣಗೊಳ್ಳಲು ಮಾರ್ಚ್ 2021 ಆಗಿದ್ದು, ಏಪ್ರೀಲ್‍ನ ಯುಗಾದಿ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುವುಮಾಡಿಕೊಂಡಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ರೈಲ್ವೆ ವಿಭಾಗದ ಹುಚ್ಚುವರಿ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ಸ್ಟೇಶನ್ ಮಾಸ್ಟರ್ ಎಸ್. ಗಿರೀಶ, ವಾಸ್ತು ಶಿಲ್ಪಿ ಅಭಿಯಂತರ ಬಕುಲ್ ಜೋಶಿ, ಎ.ಡಿ.ಇ.ಎನ್ ಹಸನುದ್ದಿನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
