ಮೂಡಲಗಿ: ‘ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಜೀವನದಲ್ಲಿ ಉತ್ಸಾಹ, ಕ್ರೀಯಾಶೀಲತೆ ಇರುತ್ತದೆ’ ಎಂದು ಪಿಎಸ್‍ಐ ಎಚ್.ವೈ. ಬಾಲದಂಡಿ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವರ ಇವರ ಸಹಯೋಗದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಶಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗ ಮತ್ತು ಲಘು ವ್ಯಾಯಾಮಗಳನ್ನು ರೂಢಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಮೂಡಲಗಿಯ ಲಯನ್ಸ್ ಕ್ಲಬ್‍ವು ಉಚಿತ ಆರೋಗ್ಯ ತಪಾಸಣೆ, ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನದಾಸೋಹ, ಸಂಚಾರ ನಿಯಮಗಳ ಜಾಗೃತಿ ಮೂಡಿಸುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕೋರೊನಾ ಸೋಂಕು ನಿಯಂತ್ರಣದಲ್ಲಿದ್ದರು ಸಹ ಮಾಸ್ಕ್ ಧರಿಸುವುದು, ಅಂತರ ಕಾಯುವುದು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ನಿಲ್ಲಿಸಬಾರದು. ಕೊರೊನಾ ಬಗ್ಗೆ ಎಚ್ಚರ ಇರಲಿ ಎಂದು ಸಲಹೆ ನೀಡಿದರು.
ಡಾ. ತಿಮ್ಮಣ್ಣ ಗಿರಡ್ಡಿ ಮಾತನಾಡಿ ಸಕ್ಕರೆ ಕಾಯಲೆಯನ್ನು ನಿಯಂತ್ರಿಸಲು ಆಹಾರ ಕ್ರಮ, ನಿತ್ಯ ವ್ಯಾಯಾಮ ಹಾಗೂ ನಿಯಮಿತವಾಗಿ ಮಾತ್ರೆ ಸೇವಿಸುವುದು ಇವು ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಲಯನ್ಸ್ ಕ್ಲಬ್‍ದಿಂದ ಕೆಲವು ದಿನಗಳ ನಂತರ ರೈತರಿಗೆ ಸಾವಯವ ಕೃಷಿ ಕುರಿತು ಬೃಹತ್ ವಿಚಾರ ಸಂಕಿರಣವನ್ನು ಮೂಡಲಗಿಯಲ್ಲಿ ಏರ್ಪಡಿಸಲಾಗುವುದು ಎಂದರು.
ಲಯನ್ಸ್ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಡಾ. ಪ್ರಶಾಂತ ಬಾಬಣ್ಣವರ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ರಾಜೇಂದ್ರ ಗಿರಡ್ಡಿ, ಡಾ. ಎಸ್.ಎಸ್. ಪಾಟೀಲ, ಡಾ. ಬನಶಂಖರಿ ಟಿ. ಗಿರಡ್ಡಿ ಪೊಲೀಸ್ ಇಲಾಖೆಯ ಅನಿಲ ಮಡಿವಾಳ, ಎಂ.ಎಸ್. ದೊಡ್ಡಮನಿ ಅತಿಥಿಯಾಗಿದ್ದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ಮೂಡಲಗಿ ಸೇರಿದಂತೆ ವಿವಿಧ ಗ್ರಾಮಗಳಿಂದ 210 ಜನರು ಭಾಗವಹಿಸಿದ್ದರು. ರಕ್ತ ತಪಾಸಣೆ, ಇಸಿಜಿ, ಬಿಪಿ ತಪಾಸಣೆ, ಸ್ಕ್ಯಾನಿಂಗ್ ಎಲ್ಲವೂ ಉಚಿತವಾಗಿ ಮಾಡಿದರು. ಮಾತ್ರೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಿದರು.
ಲಯನ್ಸ್ ಕ್ಲಬ್‍ನ ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಸುಪ್ರೀತ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಮಲ್ಲಿನಾಥ ಶೆಟ್ಟಿ, ಎಸ್.ಜಿ. ಮಿಲ್ಲಾನಟ್ಟಿ, ಕಲ್ಲೋಳಿಯ ಮಲ್ಲಪ್ಪ ಖಾನಗೌಡರ ಇದ್ದರು.
ಕಾರ್ಯದರ್ಶಿ ಸಂಜಯ ಮೋಕಾಶಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ಖಜಾಂಚಿ ಸಂಜಯ ಮಂದ್ರೋಳಿ ವಂದಿಸಿದರು.