ಬೆಟಗೇರಿ:ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಳೀಯ ರೈತರ ಜೀವನಾಡಿಯಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಸಂಜು ಪೂಜೇರಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರದಂದು ಪ್ರಸ್ತುತ ನಿಧನ ಹೊಂದಿದ ಸಂಘದ ಶೇರುದಾರÀರ ಕುಟುಂಬಸ್ಥರಿಗೆ ರೈತ ಕಲ್ಯಾಣ ನಿಧಿ ಅಡಿಯಲ್ಲಿ ಚೆಕ್ ವಿತರಿಸಿ ಮಾತನಾಡಿ, ಸ್ಥಳೀಯ ಹಾಉಸ ಸಂಘಕ್ಕೆ ಹಾಲು ನೀಡುವ ರೈತರು ಕೆಎಂಎಫ್ ಹಾಗೂ ಇಲ್ಲಿಯ ಸಂಘದಿಂದ ದೊರಕುವ ವಿವಿಧ ಸಹಾಯ, ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಕ್ಕೆ ಹಾಲು ನೀಡುವ ರೈತರು ಸಂಘದ ಶೇರುದಾರರಾಗಿದ್ದು, ಶೇರುದಾರರು ನಿಧನ ಹೊಂದಿದರೆ ಅವರ ಪತ್ನಿ-ಮಗ-ಸಂಬಂಧಿಕರಿಗೆ ಮರಣೋತ್ತರ ರೈತ ಕಲ್ಯಾಣ ನಿಧಿ ಅಡಿಯಲ್ಲಿ ಸಂಘದ ವತಿಯಿಂದ ಪ್ರತಿ ಫಲಾನುಭವಿಗೆ 10 ಸಾವಿರ ರೂ.ಗಳ ಮೊತ್ತ ನೀಡಲಾಗುತ್ತದೆ. ಪ್ರಸ್ತುತ 10 ಜನ ಫಲಾನುಭವಿಗಳಿಗೆ 10 ಸಾವಿರ ರೂ.ಗಳಂತೆ 10 ಚೆಕ್‍ಗಳನ್ನು ವಿತರಿಸಲಾಯಿತು ಎಂದು ತಿಳಿಸಿದರು.
ಆಡಳಿತ ಮಂಡಳಿ ಸದಸ್ಯರಾದ ವಿಜಯ ಮಠದ, ಹಾಲಪ್ಪ ಕೋಣಿ, ರಾಮಣ್ಣ ದೇಯಣ್ಣವರ, ದುಂಡಪ್ಪ ಕಂಬಿ, ರಾಚಪ್ಪ ಮುರಗೋಡ, ಮಲ್ಲಪ್ಪ ಕಂಬಾರ, ಬಸು ಸಿದ್ನಾಳ, ಸಿದ್ದು ಹೆಗಡೆ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಫಲಾನುಭವಿಗಳು, ರೈತರು, ಗ್ರಾಹಕರು ಇದ್ದರು.
