Breaking News
Home / Recent Posts / ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್ ಭಜರಂಗದಳ ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್ ಭಜರಂಗದಳ ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್
ಭಜರಂಗದಳ ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಈ ಭಾಗದಲ್ಲಿ ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನವು ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಸಗುಪ್ಪಿ ಮಹಾಲಕ್ಷ್ಮೀದೇವಿ ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದರು.
ಮಹಾಲಕ್ಷ್ಮೀದೇವಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಹೊಸ ಕೊಟ್ಟಡ ನೋಡುಗ ಭಕ್ತರನ್ನು ಕಂಗೊಳಿಸುತ್ತಿದೆ. 2.50 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಹೊಸ ಕಟ್ಟಡ, ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸಿಖರ, 50 ಲಕ್ಷ ರೂ. ವೆಚ್ಚದಲ್ಲಿ ಯಾತ್ರಾ ನಿವಾಸ, ಭಕ್ತಾಧಿಗಳ ಊಟದ ಅನುಕೂಲಕ್ಕಾಗಿ ಭೋಜನಾಲಯ ಸೇರಿದಂತೆ ಅನೇಕ ಕೆಲಸಗಳು ನಡೆದಿದ್ದು, ಭಕ್ತರಿಗೆ ಸಕಲ ಮೂಲ ಸೌಕರ್ಯಗಳನ್ನು ಇಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಒದಗಿಸುತ್ತಿರುವುದು ಶ್ಲಾಘನೀಯವೆಂದು ಹೇಳಿದರು.
ಶೃದ್ಧೆ, ಭಕ್ತಿ ಪೂರ್ವಕವಾಗಿ ನಡೆದುಕೊಂಡರೆ ದೇವರು ತಮ್ಮೆಲ್ಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಪೂಜೆ, ಪುನಸ್ಕಾರಗಳಿಂದ ಆತ್ಮಕ್ಕೆ ಮನಃಶಾಂತಿ ದೊರೆಯುತ್ತದೆ. ಭಾರತೀಯ ಸಂಸ್ಕøತಿ ಇತಿಹಾಸ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಫೆ. 22 ರಿಂದ 24 ರವರೆಗೆ ಮಸಗುಪ್ಪಿಯಲ್ಲಿ ನಡೆಯಲಿರುವ ಮಹಾಲಕ್ಷ್ಮೀದೇವಿ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮದ ಹಿರಿಯರು ಸತ್ಕರಿಸಿದರು.
ಭಜರಂಗದಳ ಉದ್ಘಾಟನೆ : ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಸಗುಪ್ಪಿಯ ಭಜರಂಗದಳ ಶಾಖೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕಲ್ಲಪ್ಪ ಉಪ್ಪಾರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಗ್ರಾಪಂ ಅಧ್ಯಕ್ಷೆ ಶಾಂತಪ್ಪ ತಿಗಡಿ, ಸಾತಪ್ಪ ಕೊಳದುರ್ಗಿ, ಕೆಂಚಪ್ಪ ಶಿಂತ್ರಿ, ಭರಮಪ್ಪ ಆಶಿರೊಟ್ಟಿ, ಸಂಜು ಹೊಸಕೋಟಿ, ಬಸವರಾಜ ಭುಜನ್ನವರ, ಭರಮಪ್ಪ ಗಂಗನ್ನವರ, ವೆಂಕಣ್ಣಾ ಮಳಲಿ, ಕಲ್ಲೋಳೆಪ್ಪ ಬಡ್ನಿಂಗಗೋಳ, ಅಶೋಕ ಮಳಲಿ, ಆನಂದ ಹೊಸಕೋಟಿ, ಬಾಳಪ್ಪ ತಿಗಡಿ, ಗ್ರಾಪಂ ಉಪಾಧ್ಯಕ್ಷ ದುಂಡಪ್ಪ ಫಂತೋಜಿ, ಮೂಡಲಗಿಯ ಪ್ರಕಾಶ ಮಾದರ, ಭಜರಂಗದಳದ ಜಿಲ್ಲಾ ಸಂಚಾಲಕ ಲಕ್ಷ್ಮಣ ಮಾಶ್ಯಾಳೆ, ಶಿವಾನಂದ ಗೋಟೂರ, ಕುಮಾರ ಗಿರಡ್ಡಿ, ಭಜರಂಗದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ