Breaking News
Home / Recent Posts / ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ ಡಿ.ಜೆ ಮಹಾತ ಅವರು ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ

ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ ಡಿ.ಜೆ ಮಹಾತ ಅವರು ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ

Spread the love

ಮೂಡಲಗಿ :- ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ ಡಿ.ಜೆ ಮಹಾತ ಅವರು ತಾಲೂಕಿನ ಹಣಮಾಪೂರ ಗ್ರಾಮದ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮ ವಾಸ್ತವ್ಯ ಹಾಗೂ ಸಾರ್ವಜನಿಕರ ಕುಂದು ಕೊರತೆ ಸಭೆ ಜರುಗಿತು


ಕಾರ್ಯಕ್ರಮವನ್ನು ತಹಶೀಲ್ದಾರ ಡಿ.ಜಿ.ಮಾಹತ ಸಸಿಗಳಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಸರಕಾರದ ಆದೇಶದಂತೆ ಅಧಿಕಾರಿಗಳೇ ಹಳ್ಳಿಗೆ ಆಗಮಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಲು ಬಂದಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಸಾರ್ವಜನಿಕರು ಗ್ರಾಮ ಸಮಸ್ಯೆಗಳ ಬಗ್ಗೆ ಅನೇಕ ಅಹವಾಲು, ಅರ್ಜಿಗಳನ್ನು ಸಲ್ಲಿಸಿ ಮಾತನಾಡಿದರು ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಮಾತನಾಡಿದರು ಪಿಂಚಣಿ, ಸ್ಮಶಾನ ಭೂಮಿ ಹಾಗೂ ಪಡಿತಿರ ಚೀಟಿಯ ಬಗ್ಗೆ ಅರ್ಜಿಗಳ ಕುರಿತು ಅಹವಾಲು ಸ್ವೀಕರಿಸಿ ಇತ್ಯರ್ಥ ಪಡಿಸಲು ಕ್ರಮ ಕೈಗೊಂಡರು.
ತಾಲೂಕಾ ಶಿರಸ್ತೇದಾರರಾದ ಪರುಶರಾಮ ನಾಯಿಕ ಪ್ರಾಸ್ತಾವಿಕ ಮಾತನಾಡಿದರು
ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ಸಂವಾದ ನಡೆಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅದ್ಯಕ್ಷೆ ಕಾಶವ್ವಾ ಸೊಂಟನ್ನವರ ವಹಿಸಿದ್ದರು ಮುಖ್ಯ ಅತಿಥಿಗಳಾದ ಮಾಜಿ ಜಿ.ಪಂ. ಅದ್ಯಕ್ಷರಾದ ಶ್ರೀ ಬಸಗೌಡ ಶಿವಗೌಡ ಪಾಟೀಲ, ಊರಿನ ಪ್ರಮುಖರಾದ ಶ್ರೀ ಬಸವಂತ ದಾಸನಾಳ ಸದಸ್ಯರುಗಳಾದ ಬಸವರಾಜ ಕಣ್ಣಪ್ಪ ಯಾದಗೂಡ ಹಾಗೂ ಶ್ರೀಮತಿ ಮಾಯವ್ವ ಬಸವಂತ ದಾಸನಾಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ಉಪತಹಶೀಲ್ದಾರ ಎಲ್.ಎಚ್. ಭೋವಿ, ಕಂದಾಯ ನಿರೀಕ್ಷಕ ಎಸ್.ಬಿ.ಹೊಸಮನಿ, ಗ್ರಾ.ಲೇಕಾಧಿಕಾರಿ ಹಂಚಿನಾಳ, ತಾ.ಪಂ. ನಿಂದ ಎಸ್.ಎಸ್.ರೊಡ್ಡನವರ,ಕ್ಷೇತ್ರ ಶಿಕ್ಷಣಾದೀಕಾರಿ ಎ. ಸಿ. ಮನ್ನಿಕೇರಿ, ಪ.ಪಂ ಮುಖ್ಯಾಧಿಕಾರಿ ಅರುಣಕುಮಾರ, ಸಿ.ಡಿ.ಪಿ.ಓ ವಾಯ್.ಎಮ್.ಗುಜನಟ್ಟಿ, ಸಹಾಯಕ ಕೃಷಿ ಅಧಿಕಾರಿ ಪರಸಪ್ಪಾ ಹುಲಗಬಾಳ, ಸರ್ವೆ ಇಲಾಖೆಯ ಬಿ.ವಾಯ್.ಉಪ್ಪಾರ, ಎಸ್.ಕೆ.ಅಳಗೊಂಡ , ಸಮಾಜ ಕಲ್ಯಾಣ ಇಲಾಖೆಯ ಆರ್.ವಿ.ತಳವಾರ, ಪರಿಶೀಷ್ಠ ವರ್ಗಗಳ ಇಲಾಖೆಯ ಅದೀಕಾರಿ ಎಸ್.ಎ. ಆಸನಗಿ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಬಾಗ ಗೋಕಾಕ , ಪಶು ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶೀಕ್ಷಕ ಗಣಪತಿ ಉಪ್ಪಾರ ಸ್ವಾಗತಿಸಿ ನಿರೂಪಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ