ಕುಲಗೋಡ ಕರೋನಾ ವಾರಿಯರ್ಸ ಗೆ ಪುಷ್ಪವೃಷ್ಠಿ
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಕರೋನಾ ವಾರಿಯರ್ಸಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ ಮಾಡಿ,ಹೂ ಗುಚ್ಚ ನೀಡಿ, ಕರೋನಾ ಜಾಗೃತಿ ಪಥ ಸಂಚಲನ ಕಾರ್ಯಕ್ರಮಕ್ಕೆ ಗ್ರಾಮದ ಜನತೆ ಹೂ ಮಳೆ ಸೂರಿಸಿ ಅಭಿನಂದನೆ ಸಲ್ಲಿಸಿದರು.
ಗ್ರಾಮದಲ್ಲಿ ಕೊರೊನಾ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಪೋಲಿಸ್, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾಕಾರ್ಯಕರ್ತರು ಹಾಗೂ ಹೆಸ್ಕಾಂ ಸಿಬ್ಬಂದಿಗೆ ಮಂಗಳವಾರ ಸಂಜೆ ಪುಷ್ಪವೃಷ್ಠಿಗರೆದು ಗ್ರಾಮಸ್ಥರು ಧನ್ಯತೆಯನ್ನು ಸಲ್ಲಿಸಿದರು.
ಗೋಕಾಕ ಡಿವೈಎಸ್‍ಪಿ ಡಿ.ಟಿ.ಪ್ರಭು ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಎಚ್.ಕೆ. ನೇರಳೆಯವರ ನೇತೃತ್ವದಲ್ಲಿ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಹೊರಟ್ಟಿ, ಪಿ.ಡಿ.ಓ. ಸದಾಶಿವ ದೇವರ ಅವರುಗಳ ಸಹಕಾರದೊಂದಿಗೆ ಎಲ್ಲ ಇಲಾಖೆಯ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಕರೋನಾ ಜಾಗೃತಿ ಪಥ ಸಂಚಲನ ಮಾಡಿದರು.
ಪಥ ಸಂಚಲನದುದ್ದಕ್ಕೂ ಕೊರೊನಾ ತಡೆಗಟ್ಟಲು ಪ್ರಾಣದ ಹಂಗು ತೊರೆದು ಅವಿರತ ಶ್ರಮಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ರಂಗವಲ್ಲಿ ಹಾಕಿ ಸ್ವಾಗತ ಕೋರುವ ದೃಶ್ಯಗಳು ಕಂಡು ಬಂದವು. ಗ್ರಾಮದ ಬೀದಿಗಳಲ್ಲಿ ಕೊರೊನಾ ಹಿಮ್ಮೆಟ್ಟಿಸುವ ಉದ್ಘೋಷಗಳನ್ನು ರಂಗೋಲಿ ಮೂಲಕ ಮನಕ್ಕೆ ತಟ್ಟುವಂತೆ ಚಿತ್ರಿಸಲಾಗಿತ್ತು. ತಮ್ಮ ತಮ್ಮ ಓಣಿಗಳಲ್ಲಿ ಮನೆಯ ಮುಂದೆ ಸಿಬ್ಬಂದಿ ವರ್ಗ ಬರುತ್ತಿದ್ದಂತೆ ಮಹಿಳೆಯರು, ಮಕ್ಕಳು, ನಾಗರಿಕರು ಹೂಮಳೆಗರೆದು ಹೃತ್ಪೂರ್ವಕ ಧನ್ಯತಾ ಭಾವವನ್ನು ಸಮರ್ಪಿಸಿದರು. ಸಾರ್ವಜನಿಕರಿಂದ ವ್ಯಕ್ತವಾದ ಧನ್ಯತಾ ಭಾವವನ್ನು ಕಣ್ಣಾರೆ ಕಂಡ ಮನಸಾರೆ ಅನುಭವಿಸಿದ ಪೋಲಿಸ್, ಆರೋಗ್ಯ, ಅಂಗನವಾಡಿ, ಆಶಾ, ಹೆಸ್ಕಾಂ ಸಿಬ್ಬಂದಿ ತಮ್ಮ ಕರ್ತವ್ಯದ ಬಗ್ಗೆ ಅಭಿಮಾನ ಪಟ್ಟು ಮುನ್ನಡೆಯುತ್ತಿರುವುದು ವ್ಯಕ್ತವಾಯಿತು.
ಕೊರೊನಾ ವಾರಿಯರ್ಸಗೆ ಸಲ್ಲಿಸಿದ ಧನ್ಯತಾ ಭಾವ ಸಮರ್ಪಣೆಯ ಪಥಸಂಚಲನದಲ್ಲಿ ಗ್ರಾಮದ ಡಿವೈಎಸ್‍ಪಿ ಡಿ.ಟಿ.ಪ್ರಭು.್ಲ ಪಿಎಸ್‍ಐ ಎಚ್.ಕೆ. ನೇರಳೆ. ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಹೊರಟ್ಟಿ, ಪಿ.ಡಿ.ಓ. ಸದಾಶಿವ ದೇವರ. ಸುನೀಲ ವಂಟಗೋಡಿ. ತಮ್ಮಣ್ಣಾ ದೇವರ. ಚೇತನ ಯಕ್ಸಂಬಿ. ಶಂಕರ ಹಾದಿಮನಿ. ಮಹೇಶ ತಿಪ್ಪಿಮನಿ.ಸುರೇಶ ಭೋಸಲೆ. ರಾಜು ಹೊಸಮನಿ. ಮಯೂರ ಜಾಧವ. ಬಸು ಸಮಗಾರ. ಹಾಗೂ ಬಲಭೀಮ ಯುವಕ ಮಂಡಳ, ಶ್ರೀರಾಮ ಸ್ಪೋಟ್ಸ ಕ್ಲಬ್, ಕುಲಗೋಡ ಮೇಮ್ಸ ಸಂಘಟನೆ ಸೇರಿದಂತೆ ಹಲವಾರು ಯುವಕರು ದಾರಿಯುದ್ದಕ್ಕೂ ಪುಷ್ಪವೃಷ್ಠಿಗರೆದರು.