ಬೆಟಗೇರಿ: ಸಹನಶೀಲತೆಗೆ ಮತ್ತೊಂದು ಹೆಸರು ಮಹಿಳೆಯಾಗಿದ್ದು, ಎಲ್ಲಾ ರಂಗದಲ್ಲಿ ಪುರುಷ ಪ್ರಧಾನಕ್ಕೆ ಸ್ತ್ರೀ ಸಮಾನಳಾಗಿದ್ದಾಳೆ ಎಂದು ಮಸಗುಪ್ಪಿ ವಲಯದ ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಗುಡದರಿ ಹೇಳಿದರು.
ಸಮೀಪದ ಮಸಗುಪ್ಪಿ ಗ್ರಾಮದ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿ, ಮಹಿಳೆ ಯಾವಾಗಲೂ ಅಬಲೆ ಅಲ್ಲಾ, ಸಬಲೆಯಾಗಿದ್ದಾಳೆ ಎಂದರು.
ಮಸಗುಪ್ಪಿ ಗ್ರಾಪಂ ಅಧ್ಯಕ್ಷೆ ಶಾಂತಾ ತಿಗಡಿ ಜ್ಯೋತಿ ಪ್ರಜ್ವಲಿಸಿದರು. ಸೈರಾಭಾನು ನದಾಫ್ ಅಧ್ಯಕ್ಷತೆ ವಹಿಸಿದ್ದರು.
ವಂಸತಾ ಕೊಳವಿ, ಮಾಯವ್ವ ಆಸಿರೊಟ್ಟಿ, ಯಲ್ಲವ್ವ ಉದಗಟ್ಟಿ, ಶಾಂತಾ ಮೆಣಶಿ, ಪ್ರಭಾವತಿ ಹುಚ್ಚನ್ನವರ, ಲಕ್ಷ್ಮೀ ಮಳಲಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಗಣ್ಯರು, ಇತರರು ಇದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …