ಮೂಡಲಗಿ: ಯುಗಾವತಾರಿ ಭಗವಾನ ಶ್ರೀ ಸತ್ಯಸಾಯಿಬಾಬಾರವರ ಪರಮಪಾವನ ಸಾನಿಧ್ಯದಲ್ಲಿ 14 ನೇ ವಾರ್ಷಿಕೋತ್ಸವ ಸಮಾರಂಭವು ಮಾ. 14 ರವಿವಾರದಂದು ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜರುಗಲಿದೆ ಎಂದು ಸಾಯಿ ಸೇವಾ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಮಹಾಸ್ವಾಮಿಗಳಾದ ಶ್ರೀ ಶ್ರೀ ದತ್ತಾತ್ರಯ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಮ.ನಿ.ಪ್ರ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಕಬ್ಬೂರ, ಮುಖ್ಯ ಅತಿಥಿಗಳಾಗಿ ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿಯವರು ವಹಿಸುತ್ತಾರೆ. ಅಂದು ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ, ಮಹಾನಾರಾಯಣ ಪೂಜಾ ಸಮಾರಂಭ, ಮಹಾನಾರಾಯಣ ಸೇವೆ, ಪ್ರಶಾಂತಿ ಧ್ವಜಾರೋಹನ, ನೋಂದಣಿ, ಉಪಹಾರ, ಶ್ರೀ ಸತ್ಯಸಾಯಿ ಭಜನೆ, ಮುಖ್ಯ ಸಮಾರಂಭ, ಬಾಲವಿಕಾಸ ವಿದ್ಯಾರ್ಥಿಗಳಿಂದ ಲಘು ಮನರಂಜನೆ, ಮಹಾಮಂಗಳಾರುತಿ, ಮಹಾಪ್ರಸಾದದೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗುವದಾಗಿ ತಿಳಿಸಿದ್ದಾರೆ.
