ಬೆಳಗಾವಿ: ಜಿಲ್ಲೆಯಲ್ಲಿ ಇಂದು ಸೋಮವಾರ ಮದ್ಯಾಹ್ನ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಎಂದು ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಪ್ರಕಟಿಸಿದೆ. ರಾಜ್ಯ ದಲ್ಲಿ ಕೊರೊನಾ ಪ್ರಕರಣ ಒಟ್ಟು 511ಕ್ಕೆ ಏರಿದೆ. ಒಂದೇ ದಿನ ಎಂಟು ಕೇಸ್ ಏರಿಕೆಯಾಗಿವೆ.
ಮಂಗಳೂರಿನಲ್ಲಿ 80 ವರ್ಷದ ತಾಯಿ ಹಾಗೂ 45 ವರ್ಷದ ಮಗನಿಗೆ ಸೋಂಕು ತಗುಲಿದೆ.
ಬಾಗಲಕೋಟೆ -ವಿಜಯಪುರದಲ್ಲಿ ತಲಾ ಎರಡು, ದಕ್ಷಿಣ ಕನ್ನಡ ಕನ್ನಡ ಎರಡು, ನಾಗಮಂಗಲ ಒಂದು, ಬೆಂಗಳೂರು ಒಂದು ಪ್ರಕರಣ ದಾಖಲಾಗಿದೆ .
ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 54 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಈ ಪೈಕಿ ಗುಣಮುಖರಾಗಿರುವ 6 ಜನರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ.