ಸಹಕಾರಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಸುಭಾಸ ಢವಳೇಶ್ವರ ಆಯ್ಕೆ
ಮೂಡಲಗಿ: ಇಲ್ಲಿಯ ಮೂಡಲಗಿ ಕೋ.ಆಪ್‌ರೇಟಿವ್ ಬ್ಯಾಂಕ್‌ಗೆ ಮುಂದಿನ ಐದು ವರ್ಷಗಳ ಅವಧಿಗೆ ಗುರುವಾರ ಜರುಗಿದ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಭಾಸ ಜಿ. ಢವಳೇಶ್ವರ ಮತ್ತು ಉಪಾಧ್ಯಕ್ಷರಾಗಿ ನವೀನ ಎಂ. ಬಡಗಣ್ಣವರ ಇವರು ಅವಿರೋಧವಾಗಿ ಆಯ್ಕೆಯಾಗಿರುವರು ಎಂದು ಚುನಾವಣಾಧಿಕಾರಿಗಳಾದ ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶಾಹೀನ ಅಖತರ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶಿವಲಿಂಗಪ್ಪ ಗಾಣಿಗೇರ, ಕೃಷ್ಣಾಜಿ ದಂತಿ, ರಾಚಯ್ಯ ಬಸಯ್ಯ ನಿರ್ವಾಣಿ, ರುದ್ರಪ್ಪ ವಾಲಿ, ಮಹಮದರಫಿಕ ತಾಂಬೋಳಿ, ಹರೀಶ ಅಂಗಡಿ, ರಾಚಪ್ಪ ಬೆಳಕೂಡ, ಮಲಬಾಯಿ ಪೋಳ, ಪ್ರಭಾವತಿ ಮುಧೋಳ, ದಾನೇಶ್ವರಿ ಸತರಡ್ಡಿ, ಅಂಬಿ, ಪ್ರಧಾನ ವ್ಯವಸ್ಥಾಪಕ ಜಿ. ವಿ. ಬುದ್ನಿ ಮತ್ತಿತರರು ಇದ್ದರು.