16ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಆಮಂತ್ರ ಪತ್ರಿಕೆ ಬಿಡುಗಡೆ
ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಜರುಗುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಸಾಹಿತಿಗಳೊಂದಿಗೆ ತಾಲೂಕಿನ ಸರ್ವವರು ಕೂಡಿಕೊಂಡು ಕೆಲಸ ಮಾಡಿ ಸಮ್ಮೇಳನವನ್ನು ಯಶಸ್ವಿಗೋಳಿಸೋಣ ಎಂದು ಸಮ್ಮೇಳನದ ದಿವ್ಯ ಸಾನ್ನಿಧ್ಯವಹಿಸುತ್ತಿರು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರಯಬೋಧ ಮಹಾಸ್ವಾಮೀಜಿ ಹೇಳಿದರು.
ಅವರು ರವಿವಾರ ಸಂಜೆ ಪಟ್ಟಣದ ಶ್ರೀ ಶಿವಬೋಧರಂಗ ಮಠದಲ್ಲಿ ಮೂಡಲಗಿಯಲ್ಲಿ ನ.23 ಮತ್ತು 24 ರಂದು ನಡೆಯುವ 16ನೇ ಬೆಳಗಾವಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೋಳಿಸಿ ಸಂಘಟಕರು ನೀಡಿದ ಅಂತ್ರಣ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಪರಿಷತ್ತ ಕೆಲಸ ಎಂದರೆ ದೇವರ ಕೆಲಸ ಇದ್ದಾಂಗೆ, ಪ್ರತಿಯೋಬ್ಬರು ಸಮ್ಮೇಳನದ ಯಶಸ್ವಿಗೆ ಜವಾಬ್ದಾರಿಯುತವಾಗಿ ಪ್ರತಿ ಫಲಾಪೇಕ್ಷ ಇಲ್ಲದೆ ಸ್ವ-ಇಚ್ಚೆಯಿಂದ ದೂಡಿಯಬೇಕು, ಎಲ್ಲರೂ ಸ್ವ-ಇಚ್ಚೆಯಿಂದ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದರು.
ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಮೂಡಲಗಿ ತಾಲೂಕಾಗಿ ಕೆಲವೇ ವರ್ಷಗಳಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳ ಸಂಘಟಿಸು ಸೌಭಾಗ್ಯ ಸಿಕ್ಕಿದು ತಾಲೂಕಿಗೆ ಹೆಮ್ಮೆಯ ವಿಷಯ, ಕನ್ನಡದ ಸೇವೆ ಮಾಡುವುದು ಬಹಳ ಅಪೂರ್ವವಾಗಿರತಕ್ಕಂತ ಕೆಲಸ, ಕನ್ನಡಕ್ಕಾಗಿ ದೂಡಿದರೆ ನಮ್ಮ ತನು-ಮನಗಳು ಬಹಳಷ್ಟು ಸಂತೃಪ್ತಿಗೋಳುತ್ತವೆ, ಬಹಳಷ್ಟು ಪ್ರೇರಣೆ ಸಿಗುತ್ತದೆ, ಜೀವನದಲ್ಲಿ ಹೆಚ್ಚಿನ ಆನಂದ ಕನ್ನಡ ಸೇವೆಯಿಂದ ಸಿಗುತ್ತದೆ, ಸಮ್ಮೇಳನ ಯಶಸ್ವಿ ಆಗಬೇಕಾದರೆ ನಮ್ಮಗೆ ಸಾಧ್ಯವಾದ ಕೆಲಸವನ್ನು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು, ಈ ಸಮ್ಮೇಳನ ಬಹುಕಾಲ ಬಹುಜನರಿಗೆ ಸ್ಪೂತ್ರ್ತಿಯನ್ನು ಕೊಡತಕ್ಕಂತ ಸಮ್ಮೇಳನ ಆದರ ಬಹಳಷ್ಟು ಸಾರ್ಥಕತೆ ಈ ನಾಡಿಗೆ ಸಿಗತ್ತದೆ ಎಂದರು.
ಸಮ್ಮೇಳನದಲ್ಲಿ ಅನೇಕ ಉದಯೋನಮುಖ ಕಾಲಾವಿದರೂ, ಸಾಹಿತಿಗಳು, ಬೇರೆ ಬೇರೆ ರೀತಿ ಪ್ರತಿಭೆ ಹೊಂದಿದವರು ಇರುತ್ತಾರೆ ವೇದಿಕೆಯಲ್ಲಿ ಅವಕಾಶ ಸಿಕ್ಕಿಲದವರು ವೇದಿಕೆಯ ಮುಂಬಾಗದಲ್ಲಿ ಪ್ರೇರಣೆ ಕೊಡಲಿಕ್ಕೆ ಸಾಕಷ್ಟು ಅವಕಾಶಗಳು ಇರುತ್ತವೆ ಎಂದ ಅವರು ಕನ್ನಡಕ್ಕಾಗಿ ದುಡಿಯಲ್ಲು ಬಹಳಷ್ಷು ಸೂಕ್ತ ಸಮಯವನ್ನು ಆಯ್ದುಕೊಂಡಿದ್ದಾರೆ ಎಂದರು.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಸಿ.ಪಿ.ಯಕ್ಸಂಬಿ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳವನ್ನು ಪೂಜ್ಯರ ಸಾನ್ನಿಧ್ಯದಲ್ಲಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯ ಸಹಕಾರದಿಂದ ಎಲ್ಲರೂ ಕೂಡಿ ಸಡಗರ ಸಂಭ್ರಮದಿಂದ ಸಮ್ಮೇಳನವನ್ನು ಯಶಸ್ವಿ ಮಾಡೋಣ ಎಂದರು.
ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಮಾತನಾಡಿ, ಸಮ್ಮೇಳ ಯಶಸ್ವಿಗೆ ಪೂರ್ವ ಭಾವಿ ಸಭೆಯನ್ನು ಏರ್ಪಡಿಸಿ ಕಾರ್ಯಕ್ರಮವನ್ನು ಕಡಿಮೆ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಮ್ಮಿಕೊಂಡಿದು. ಎಲ್ಲ ಕನ್ನಡಾಭಿಮಾನಿಗಳು ತಮ್ಮ ಪ್ರೀತಿಯನ್ನು ಕನ್ನಡ ಭಾಷೆ ಮೇಲೆ ಇಟ್ಟು ನಿಸ್ವಾರ್ಥ ಮನೋಭಾವದಿಂದ ಸಹಾಯ ಸಹಕಾರ ನೀಡಬೇಕು ಎಂದರು ಎಂದರು.
ಈ ಸಂಧರ್ಭದಲ್ಲಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ಶ್ರೀಧರಬೋಧ ಸ್ವಾಮೀಜಿ, ಕಸಾಪ ಪದಾಧಿಕಾರಿಗಳು, ಸಾಹಿತ್ಯಗಳು, ಗಣ್ಯರು, ಶಿಕ್ಷಕರು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಮತ್ತಿತರರು ಇದ್ದರು.