Breaking News
Home / ಬೆಳಗಾವಿ / ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಅವಶ್ಯವಿದೆ ಉಪನ್ಯಾಸಕಿ : ಕವಿತಾ ಹಳ್ಳೂರ.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಅವಶ್ಯವಿದೆ ಉಪನ್ಯಾಸಕಿ : ಕವಿತಾ ಹಳ್ಳೂರ.

Spread the love

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಅವಶ್ಯವಿದೆ
ಉಪನ್ಯಾಸಕಿ : ಕವಿತಾ ಹಳ್ಳೂರ.

ಮೂಡಲಗಿ : ಮಾತೃಸ್ವರೂಪಿಯಾದ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಸಾಮಾನ್ಯವಾಗಿದ್ದು ಮಹಿಳೆಯನ್ನು ಗೌರವಿಸುವಂತಹ ನಮ್ಮ ದೇಶದಲ್ಲಿ ತಾಯಿ ಗರ್ಭದಲ್ಲಿಯೇ ಅವೈಜ್ಞಾನಿಕ ವೈಧ್ಯಕೀಯ ತಪಾಸನೆ ಮಾಡಿ ಹೆಣ್ಣು ಮಗು ಎಂದು ತಿಳಿದ ನಂತರ ಭ್ರೂಣ ಹತ್ಯೆ ಮಾಡುವುದು ಇಂದು ಯಥೇಚ್ಚವಾಗಿ ನಡೆಯುತ್ತಿದ್ದು ಭ್ರ್ರೂಣ ಹತ್ಯೆ ಮಾಡುವುದು ನಮ್ಮ ಕಾನೂನಲ್ಲಿ ಅಪರಾಧವಾಗಿದ್ದು ಕಾನೂನು ತಿಳಿವಳಿಕೆ ಇಲ್ಲದೇ ಭ್ರೂಣ ಹತ್ಯೆ ಮಾಡುತ್ತೀರುವುದು ಸರ್ವೇಸಾಮಾನ್ಯವಾಗಿರುವುದು ಭಾರತೀಯ ದಂಡಸಹಿತೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಮಹಾಅಪರಾಧವಾಗಿದೆ ಎಂದು ಮೂಡಲಗಿ ಆರ್.ಡಿ.ಎಸ್. ಕಾಲೇಜಿನ ಉಪನ್ಯಾಸಕಿ ಕವಿತಾ ಹಳ್ಳೂರ ಹೇಳಿದರು.
ಮೂಡಲಗಿ ಸಮೀಪದ ಪಟಗುಂದಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಮಹಿಳೆಯನ್ನು ತಾಯಿಯಾಗಿ ಸಹೋದರಳಾಗಿ ಹೆಂಡತಿಯಾಗಿ ಸ್ವೀಕರಿಸುವ ಸಮಾಜ ಅವಳನ್ನು ಅಮಾನವೀಯ ರೂಪದಲ್ಲಿ ನಡೆಸಿಕೊಳ್ಳುವದಲ್ಲದೇ ಭೂಮಿಗೆ ಕಾಲಿಡುವ ಮುಂಚೆನೇ ತಾಯಿಯ ಗರ್ಭದಲ್ಲಿ ಹತ್ಯೆ ಮಾಡುವುದು ಮಾನವ ಕುಲಕ್ಕೆ ಕಂಟಕ ತರುವಂತಿದೆ ಎಂದರು.
ಪಟಗುಂದಿಯ ಗ್ರಾಮಪಂಚಾಯತ ಲೆಕ್ಕಾಧಿಕಾರಿ ಮಂಜುನಾಥ ಕೋಹಳ್ಳಿ ಮಾತನಾಡಿ ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರನ್ನು ಅಗೌರವದಿಂದ ಕಾಣುತ್ತಿರುವ ನಮ್ಮ ಸಮಾಜ ಇಂದು ತಾಯಿಯ ಗರ್ಭದಲ್ಲಿಯೇ ಹತ್ಯೆ ಮಾಡುತ್ತಿರುವುದು ಖೇದಕರ ವಿಷಯವಾಗಿದ್ದು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಜನಸಂಖ್ಯೆ ಬಹಳಷ್ಟು ಕುಸಿಯುತ್ತಿದೆ ಇದಕ್ಕೆ ಮಹಿಳೆಯರ ಭ್ರೂಣಹತ್ಯೆ ಕಾರಣವಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ಮಹಿಳಾ ಸಮಾನತೆ ಬಗ್ಗೆ ಮೊದಲಿನಿಂದಲು ಹೋರಾಟಗಳು ಮತ್ತು ಸಾಹಿತ್ಯದ ವಿಮರ್ಶೆಗಳು ಬುದ್ದ ಬಸವಣ್ಣರವರ ಕಾಲದಿಂದಲು ನಡೆಯುತ್ತಿದ್ದು ಮಹಿಳೆಯರಿಗೆ ಇಂದಿನವರೆಗೊ ಸಂರಕ್ಷಣೆ ಆಗುತ್ತಿಲ್ಲ ಮಹಿಳಾ ಸಂರಕ್ಷಣೆಗೆ ಪ್ರಭಲವಾದ ಕಾನೂನಿನ ಅವಶ್ಯಕತೆ ಇದೆ ಎಂದರು.


ಪಟಗುಂದಿ ಗ್ರಾಮದ ಹಿರಿಯರಾದ ಸುರೇಶ ನಾಯ್ಕ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಸ್ವಾಭಿಮಾನದ ಚಿಂತನೆಯಲ್ಲಿ ಸಮಾನತೆ ಒದಗಿಸುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಪಟಗಂದಿಯ ಹಿರಿಯರಾದ ಚನ್ನಗೌಡ ಪಾಟೀಲ, ಬಸಗೌಡ ಪಾಟೀಲ, ಶಿವಾನಂದ ಪಾಟೀಲ, ಹೊಳೆವ್ವ ಪೂಜೇರಿ, ಚಂದ್ರಶೇಖರ ತುಬಾಕಿ, ಪ್ರಧಾನ ಗುರುಗಳಾದ ರಾಜು ಕೊಳದೂರ, ಶಿವಬಸು ಗುಡ್ಲಿ ಉಪನ್ಯಾಸಕ ಎಸ್.ಎನ್.ಕುಂಬಾರ ಅಕ್ಷತಾ ಹೊಸಮನಿ, ಮಲ್ಲಪ್ಪಾ ಪಾಟೀಲ ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ಮತ್ತಿತ್ತರರು ಹಾಜರಿದ್ದರು.
ಸಾದಿಯಾ ಖಾಜಿ ನಿರೂಪಿಸಿದರು ತಸ್ಮೀಯಾ ಹಲಗಲಿ ಸ್ವಾಗತಿಸಿದರು ಲಕ್ಷ್ಮೀ ಇಟ್ನಾಳ ವಂದಿಸಿದರು.


Spread the love

About inmudalgi

Check Also

ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಬರದಂತೆ ಕೆಲಸ ಮಾಡುವಂತೆ ಕರೆ :ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ : ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಬಾಲಚಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ