ಆರ್.ಡಿ.ಎಸ್. ಪಿಯು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬಾಲ್ ಬಾಡ್ಮಿಂಟನ್ ಮತ್ತು ಹ್ಯಾಂಡಬಾಲ್ ಕ್ರೀಡಾಕೂಟಗಳು

ಮೂಡಲಗಿ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಬಾಲ್ ಬಾಡ್ಮಿಂಟನ್ ಮತ್ತು ಹ್ಯಾಂಡಬಾಲ್ ಕ್ರೀಡಾಕೂಟಗಳನ್ನು ಸ್ಥಳೀಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿನಾಂಕ 15-09-2023 ರಂದು ಮುಂಜಾನೆ 9 ಘಂಟೆಗೆ ಉದ್ಘಾಟನೆ ಗೊಳ್ಳಲಿದ್ದು ಉದ್ಘಾಟಕರಾಗಿ ಕೆ ಎಂ. ಎಫ್ ಬೆಂಗಳೂರಿನ ನಿರ್ದೇಶಕರು ಮತ್ತು ಅರಬಾಂವಿಯ ಜನಪ್ರಿಯ ಶಾಸಕರಾದ ಬಾಲಚಂದ್ರ ಲ. ಜಾರಕಿಹೊಳಿ ಆಗಮಿಸುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ. ಸೊಸೈಟಿಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಳ್ಳುವರು ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಾಂಡುರಂಗ ಭಂಡಾರಿ. ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಸಿಪಿಆಯ್ ಶ್ರೀಶೈಲ್ ಬ್ಯಾಕೂಡ, ಪಿ.ಎಸ್.ಐ ಹಾಲಪ್ಪ ಬಾಲದಂಡಿ ಶ್ರೀಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೇಡಿಟ್ ಸೊಸಾಯಿಟಿಯ ಅಧ್ಯಕ್ಷರಾದ ಮಲ್ಲಪ್ಪ ಗಾಣಿಗೇರ ಕಾಶೀಮ್‍ಅಲಿ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿಯ ಅಧ್ಯಕ್ಷರಾದ ಅನ್ವರ ನದಾಫ ಕಮಲದಿನ್ನಿಯ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಚಿಕ್ಕೋಡಿ ಜಿಲ್ಲಾ ಕ್ರೀಡಾ ಸಂಯೋಜಕರಾದ ಅಜಯ ಮೋನೆ ತಾಲೂಕಾ ಕ್ರೀಡಾ ಸಂಯೋಜಕಾರದ ಸುಭಾಸ ಹುದ್ದಾರ ಭಾಗವಹಿಸುವರು ಎಂದು ಕಾಲೇಜು ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
IN MUDALGI Latest Kannada News