ಆರ್.ಡಿ.ಎಸ್. ಸಂಸ್ಥೆ ಆಯೋಜಿಸಿದ ಸದ್ಬಾವನಾ ದಿನಾಚರಣೆ
ಮೂಡಲಗಿ : ಅಖಂಡ ಭಾರತದ ಸೌರ್ಹಾದತೆ ವಿದ್ಯಾರ್ಥಿಗಳಲ್ಲಿ ಬೆಳಸುವ ಕಾರ್ಯ ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ ಭಾರತ ವಿಶ್ವದ ಶಕ್ತಿಯಾಗಿ ಬೆಳಯುವಲ್ಲಿ ನಮ್ಮ ಒಗಟ್ಟಿನ ಸಾಮರ್ಥ್ಯದ ಅಗತ್ಯತೆಯನ್ನು ತೋರಿಸುವದಕ್ಕಾಗಿ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡುವ ಸಲುವಾಗಿ ಮತ್ತು ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದಬಾವವಿಲ್ಲದೇ ಭಾರತದ ಸಮಗ್ರತೆಗೆ ಆಧ್ಯತೆ ನೀಡಬೇಕೆಂದು ಉಪನ್ಯಾಸಕ ಸಂಗಮೇಶ ಕುಂಬಾರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಪದವಿ ಮಹಾವಿದ್ಯಾಲಯ, ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ ಆಯೋಜಿಸಿದ ಸದ್ಬಾವನಾ ದಿನಾಚರಣೆಯಲ್ಲಿ ಮಾತನಾಡಿ ದೇಶದಲ್ಲಿ ಶಾಂತಿ ಐಕ್ಯತೆ ಮತ್ತು ರಾಷ್ಟದ ಉಳಿವಿಗಾಗಿ ಭಾವನಾತ್ಮಕತೆಯನ್ನು ಹಾಗೂ ವಿಚಾರಶೀಲತೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸುವುದು ಅಗತ್ಯವಿದೆ ಎಂದರು.
ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರಧಾನ ಗುರುಗಳಾದ ಸಂಗಮೇಶ ಹಳ್ಳೂರ ಮಾತನಾಡಿ ಮಕ್ಕಳಲ್ಲಿ ಸತ್ಯ ಶಾಂತಿ ಸಹಬಾಳ್ವೆ ಭಾರತದ ಸಾರ್ವಭೌಮತ್ವ ಮುಂತಾದ ತಾತ್ವಿಕ ಚಿಂತನೆಗಳ ಬೆಳವಣಿಗೆಗೆ ಆಧ್ಯತೆ ನೀಡಬೇಕೆಂದರು.
ಪದವಿ ಕಾಲೇಜಿನ ಎನ್.ಎಸ್.ಎಸ್. ಸಂಯೋಜಕ ಪ್ರಕಾಶ ಚೌಡಕಿ ಮಾತನಾಡಿ ದೇಶ ಕಟ್ಟುವ ಸಾಮೂಹಿಕ ಜವಾಬ್ದಾರಿಗಳು ವಿದ್ಯಾರ್ಥಿಗಳಲ್ಲಿ ಬೆಳದು ಬರುವಂತಹ ಚಟುವಟಿಕೆಗಳಲ್ಲಿ ತೊಡುಗುವಂತೆ ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸದ್ವಾವನಾ ದಿನಾಚರಣೆ ಪ್ರತಿಜ್ಞೆ ಬೋದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕರಾದ ಸಂಜೀವ ವಾಲಿ, ಹಣಮಂತ ಚಿಕ್ಕೋಡಿ, ಮಲ್ಲಪ್ಪ ಜಾಡರ, ಎಂ.ಬಿ. ಸಿದ್ನಾಳ, ರವಿ ಕಟಗೇರಿ, ಎಸ್.ಬಿ.ಬೆಳವಿ, ವಾಣಿಶ್ರೀ ಕಾಪಶೆ, ಎಂ.ಎಲ್. ಪೂಜೇರಿ ಅಶ್ವೀನಿ ಬಡಿಗೇರ ಜಿ.ಎಚ್. ಕಡಪಟ್ಟಿ ಮಾಳಪ್ಪ ಕೇದಾರಿ ಹಾಜರಿದ್ದರು.