ಸುಣಧೋಳಿ ಮಹಿಳಾ ಸಹಕಾರಿಯ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ
ಮೂಡಲಗಿ:ತಾಲೂಕಿನ ಸುಣಧೋಳಿ ಗ್ರಾಮದ ಸುಣಧೋಳಿ ಮಹಿಳಾ ಕ್ರೇಡಿಟ ಸೌಹಾರ್ದ ಸಹಕಾರಿ ಸಂಘÀದವರು ಐಸಿಐಸಿ ಬ್ಯಾಂಕ್ ಸಹಯೋಗದೊಂದಿಗೆ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ ಸಮಾರಂಭ ಜರುಗಿತು.
ಸಮಾರಂಭ ಸಾನ್ನಿಧ್ಯವಹಿಸಿದ್ದ ಸುಣಧೋಳಿ ಜಡಿಸ್ಧೇಶ್ವರ ಮಠದ ಪೀಠಾಧೀಪತಿ ಶ್ರೀ ಶಿವಾನಂದ ಸ್ವಾಮಿಜಿಗಳು ಐಎಫ್‍ಎಸ್‍ಸಿ ಕೋಡ್ ಬಿಡುಗಡೆಗೋಳಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನರು ವಿವಿಧ ಹಣಕಾಸಿನ ಸಂಸ್ಥೆಗಳೊಂದಿಗ ಹಣಕಾಸಿನ ವ್ಯವಹಾರ ಮಾಡಲು ಸುಣಧೋಳಿ ಮಹಿಳಾ ಸಹಕಾರಿಯವರು ಐಎಫ್‍ಎಸ್‍ಸಿ ಕೋಡ್ ಹೊಂದಿ ಅನೂಕ್ಕೂಲ ಮಾಡಿರುವುದನ್ನು ಸುಣಧೋಳಿ ಗ್ರಾಮಸ್ಥರು ಮತ್ತು ಸಹಕಾರಿಯ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಹಕಾರಿಯ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಹೊಟ್ಟಿಹೊಳಿ ಮಾತನಾಡಿ, ಸಹಕಾರಿಯ ಗ್ರಾಹಕರಿಗೆ ಮತ್ತು ಸುಣಧೋಳಿ ಮತ್ತಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ತ್ವರಿತ ಹಣಕಾಸಿ ವ್ಯವಹಾರಕ್ಕಾಗಿ ಶೀಘ್ರದಲ್ಲಿಯೇ ಎಟಿಎಮ್ ಮಶಿನ್ ಅಳವಡಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪ್ರಕಾಶ ಪತ್ತಾರ, ಸಹದೇವ ಕಮತಿ, ಶಿವಾನಂದ ಹೊಟ್ಟಿಹೊಳಿ, ರವೀಂದ್ರ ಸಂಕಣ್ಣವರ, ರಮೇಶ ಹೋಟ್ಟಿಹೊಳಿ, ರಾಜಕುಮಾರ ವಾಲಿ, ಹಣಮಂತ ಪಾಶಿ, ದುರಗಪ್ಪಾ ಮಾದರ ಮತ್ತು ಐಸಿಐಸಿ ಬ್ಯಾಂಕಿನ ತಂತ್ರಾಂಶ ತಂಡದ ಕೆ.ಆರ್ ಕಂಬಾರ, ಸಹಕಾರಿಯ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಚಿದಾನಂದ ಶಿರಗೂರ ಸ್ವಾಗತಿಸಿದರು, ಮಾನವ ಸಂಪನ್ಮೂಲ ಅಧಿಕಾರಿ ಪ್ರಕಾಶ ಗಿಡ್ಡಗೌಡರ ವಂದಿಸಿದರು.