ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಮನುಷ್ಯ ಬದುಕಿನಲ್ಲಿ ಏನೇನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ ಯಶಸ್ಸು ಖಂಡಿತಾ ಸಾಧ್ಯವಾಗುತ್ತದೆ ಅಂಬುವುದಕ್ಕೆ ಬೆಳಗಾವಿ ಜಿಲ್ಲೆಯ ನೂತನ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಡಾ.ಮಾಶಾಭಿ ನದಾಫ್ ಅವರೇ ಸಾಕ್ಷಿ.!
ನೂತನ ಮೂಡಲಗಿ ತಾಲೂಕಿನ ಸೈನಿಕರ ಗ್ರಾಮ ಎಂದು ಕರೆಯಲ್ಪಡುವ ಹೊನಕುಪ್ಪಿ ಎಂಬ ಪುಟ್ಟ ಹಳ್ಳಿಯ ನಿವೃತ್ತ ಯೋಧ, ಬೆಟಗೇರಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ತಂದೆ ಜಾಹೀರ ನದಾಫ್, ತಾಯಿ ಕುಲಸುಮಾ ಆದರ್ಶ ದಂಪತಿಗಳ ಜೇಷ್ಠ ಸುಪುತ್ರಿಯಾಗಿ ಸನ್1993 ಅಕ್ಟೊಬರ್.14 ರಂದು ಜನಸಿದ ಡಾ.ಮಾಶಾಭಿ ಜಾಹೀರ ನದಾಫ್ ವಿದ್ಯಾರ್ಥಿ ದಿಸೆಯಿಂದಲೇ ಶಾಲಾ-ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಾಗಲಕೋಟಿಯಲ್ಲಿ, ಗೋಕಾಕ ಕೆಎಲ್‍ಇ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಪೂರೈಸಿದ್ದಾರೆ.
ಶಿವಮೊಗ್ಗದ ಎಸ್‍ಎಚ್‍ಐಎಮ್‍ಎಸ್ ವೈದ್ಯಕೀಯ ಕಾಲೇಜಿನಲ್ಲಿ ಎಮ್‍ಬಿಬಿಎಸ್ ಶಿಕ್ಷಣಗೈದಿದ್ದಾರೆ. ಬೆಂಗಳೂರು ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಅರವಳಿಕೆ ತಜ್ಞ ವೈದ್ಯ (ಎಮ್‍ಡಿ) ಶಿಕ್ಷಣದ 2022ರ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.
ಎಮ್‍ಡಿ ಪದವಿ ಪಡೆದ ಹೊನಕುಪ್ಪಿ ಗ್ರಾಮದ ಪ್ರಥಮ ಯುವತಿ: ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಈ ಹಿಂದೆ ದೇಶ ಮತ್ತು ರಾಜ್ಯದ ವಿವಿಧ ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ. ಆದರೆ ಎಮ್‍ಬಿಬಿಎಸ್, ಎಮ್‍ಡಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿನಲ್ಲಿ ಪಾಸು ಮಾಡಿದ ಡಾ.ಮಾಶಾಭಿ ನದಾಫ್ ಅವರು ಹೊನಕುಪ್ಪಿ ಗ್ರಾಮದಲ್ಲಿ ಎಮ್‍ಬಿಬಿಎಸ್, ಎಮ್‍ಡಿ ಆದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿ ಹುಟ್ಟೂರಲ್ಲಿ ಇತಿಹಾಸದ ದಾಖಲೆ ಬರೆದಿದ್ದಾಳೆ.
ಗ್ರಾಮೀಣ ಪ್ರದೇಶದ ಪ್ರತಿಭೆಗಳು ಏನೆಲ್ಲಾ ಸಾಧಿಸಬಹುದು ಏನ್ನಲೂ ಡಾ.ಮಾಶಾಭಿ ನದಾಫ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೊನಕುಪ್ಪಿ ಹಾಗೂ ಸುತ್ತಲಿನ ಹಳ್ಳಿಗಳ ಶಿಕ್ಷಣ ಪ್ರೇಮಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಡಾ.ಮಾಶಾಭಿ ನದಾಫ್ ಸಾಧನೆಯನ್ನು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಮ್‍ಡಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು ಹೆಮ್ಮಯಾಗಿದೆ. ವೈದ್ಯಕೀಯ ವಲಯದಲ್ಲಿ ವಿಶೇಷ ವೈದ್ಯಕೀಯ ಸೇವೆ ಸಲ್ಲಿಸುವ ಒಂದು ಅವಕಾಶ ನನಗೆ ದೊರೆತಿದೆ ಅಂತಾ ಡಾ.ಮಾಶಾಭಿ ನದಾಫ್ ಅವರು ಹೇಳುವ ಮಾತು.
