ಬೆಟಗೇರಿ ಪ್ರೌಢ ಶಾಲೆಯ
ವಿದ್ಯಾರ್ಥಿಗಳ ಅಮೋಘ ಸಾಧನೆ.!
*ಈ ಬಾರಿ ಬಾಲಕಿಯರದು ಮೇಲುಗೈ* ಸ್ಥಳೀಯ
ಶಿಕ್ಷಣಪ್ರೇಮಿಗಳಿಂದ ಮೆಚ್ಚುಗೆ
ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಕೇಂದ್ರ ಸರಕಾರವು ನೀಡುವ ವಿದ್ಯಾರ್ಥಿ ವೇತನದ ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ 6 ಜನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿ ಶಿಷ್ಯವೇತನ ಪಡೆಯಲು ಅರ್ಹತೆಗೆ
ಪಾತ್ರರಾಗಿದ್ದಾರೆ.
ಸನ್ 2025-26ನೇ ಸಾಲಿನಲ್ಲಿ ನಡೆದ ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ
ಸ್ವಾತಿ ಪಾಟೀಲ(107)ಅಂಕ,
ಮಹಾದೇವಿ ಕೋಣಿ(102)ಅಂಕ,
ಪಲ್ಲವಿ ಪಾಟೀಲ(101)ಅಂಕ,
ಅನುಶ್ರೀ ಐದುಡ್ಡಿ(89) ಅಂಕ,
ಶಾಜಿಯಾ ಮಿರ್ಜಾನಾಯ್ಕ (86)ಅಂಕ,
ಕಾವೇರಿ ಯರಕನ್ನವರ(84)ಅಂಕ
ಪಡೆದು ಉತ್ತೀರ್ಣರಾಗಿ ಶಿಷ್ಯವೇತನ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಬಾರಿ ಶಾಲೆಯ 6 ಜನ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಪ್ರತಿ ವರ್ಷಕ್ಕೂಮ್ಮೆ ಸರ್ಕಾರಿ ಮತ್ತು ಅನುದಾನಿತ ಪ್ರೌಢ
ಶಾಲೆಯ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಡೆಸುವ ಸನ್ 2023-24ನೇ ಸಾಲಿನಲ್ಲಿ ನಡೆದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಎಕ್ಸಾಮ್ನಲ್ಲಿ ಬೆಟಗೇರಿ ವಿವಿಡಿ ಸರಕಾರಿ
ಪ್ರೌಢ ಶಾಲೆಯ 21 ಜನ ವಿದ್ಯಾರ್ಥಿಗಳು ಪಾಸಾಗಿ ಶಿಷ್ಯ ವೇತನಕ್ಕೆ ಅರ್ಹರಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು ಇತಿಹಾಸದ ಸಂಗತಿ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಜೀವಿನಿ: ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಈ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಅರ್ಹತೆ ಪಡೆದ ವಿದ್ಯಾರ್ಥಿಗೆ 8
ನೇ ತರಗತಿಯಿಂದ ಪಿಯುಸಿ ದ್ವಿತೀಯ ವರ್ಷದ ತನಕ ಒಟ್ಟು ಸುಮಾರು 6 ಲಕ್ಷ ರೂಪಾಯಿವರೆಗೆ ಶಿಷ್ಯ ವೇತನ ನೀಡುತ್ತದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಆರ್ಥಿಕ ಸಬಲತೆಗೆ ಕೇಂದ್ರ ಸರಕಾರ ಸಹಾಯ ಮಾಡುತ್ತಿದೆ. ಹೀಗಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿದೆ ಈ ಶಿಷ್ಯ ವೇತನ.
ಈ ಪರೀಕ್ಷೆ ಹೈಸ್ಕೂಲ್ ಮಕ್ಕಳಿಗೆ ಮಿನಿ ಐಎಎಸ್ ಮತ್ತು ಕೆಎಎಸ್ ಪರೀಕ್ಷೆವಿದ್ದಂತೆ. ಪ್ರತಿ ವರ್ಷ ನಮ್ಮ ಶಾಲೆಯ ಹಲವಾರು ಜನ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಷ್ಯವೇತನ ಪಡೆಯಲು ಅರ್ಹರಾಗುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ
ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ 8 ನೇ ತರಗತಿಯ ಹಲವಾರು ಜನ ವಿದ್ಯಾರ್ಥಿಗಳು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಎಕ್ಸಾಮ್ನಲ್ಲಿ ಪ್ರತಿ ವರ್ಷ ಉತ್ತೀರ್ಣರಾಗಿ ಶಿಷ್ಯವೇತನ ಪಡೆಯಲು ಅರ್ಹರಾಗುತ್ತಿರುವ ಸಂಗತಿಯು ಸ್ಥಳೀಯ ವಿವಿಡಿ
ಸರ್ಕಾರಿ ಪ್ರೌಢ ಶಾಲೆಯ ಹಾಗೂ ಬೆಟಗೇರಿ ಗ್ರಾಮದ ಘನತೆ ಮತ್ತು ಗೌರವ ಹೆಚ್ಚಿಸಿದೆ.
ಇಲ್ಲಿಯ ವಿವಿಡಿ ಸರಕಾರಿ ಪ್ರೌಢ ಶಾಲೆಯ 8ನೇ ತರಗತಿ
ವಿದ್ಯಾರ್ಥಿಗಳು ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಷ್ಯ ವೇತನ ಪಡೆಯಲು ಅರ್ಹರಾದ ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾರ್ಗದರ್ಶನ ನೀಡಿದ ಶಾಲೆಯ
ಗುರು ಬಳಗಕ್ಕೆ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಹಾಗೂ ಸದಸ್ಯರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸಾಧನೆ ಶ್ಲಾಘಿಸಿದ್ದಾರೆ.
ಪೋಟೊ : 12 ಬಿಟಿಜಿ-1: ಸ್ವಾತಿ ಪಾಟೀಲ
ಪೋಟೊ : 12 ಬಿಟಿಜಿ-1ಅ: ಮಹಾದೇವಿ ಕೋಣಿ
ಪೋಟೊ : 12 ಬಿಟಿಜಿ-1ಬಿ : ಪಲ್ಲವಿ ಪಾಟೀಲ
ಪೋಟೊ : 12 ಬಿಟಿಜಿ-1ಸಿ: ಅನುಶ್ರೀ ಐದುಡ್ಡಿ
ಪೋಟೊ : 12 ಬಿಟಿಜಿ-1ಡಿ:ಶಾಜಿಯಾ ಮಿರ್ಜಾನಾಯ್ಕ
ಪೋಟೊ : 12 ಬಿಟಿಜಿ-1ಇ: ಕಾವೇರಿ ಯರಕನ್ನವರ
IN MUDALGI Latest Kannada News