*ಏ-11 ರಿಂದ ಬಾಗೋಜಿಕೊಪ್ಪ ಶ್ರೀ ಶಿವಯೋಗಿಶ್ವರ ಜಾತ್ರಾ ಮಹೋತ್ಸವ*
ಮೂಡಲಗಿ: ಬಾಗೋಜಿಕೊಪ್ಪದ ಶ್ರೀ ಶಿವಯೋಗೀಶ್ವರ ಜಾತ್ರಾ ಮತ್ತು ಶ್ರೀ ಗುರುಲಿಂಗ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಏ-11 ಮತ್ತು 12 ರಂದು ಶ್ರೀ ಶಿವಯೋಗೀಶ್ವರ ಹಿರೇಮಠ-ಬಾಗೋಜಿಕೊಪ್ಪ ಮಠದ ಪೀಠಾಧ್ಯಕ್ಷ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಲಿದೆ.
ಶುಕ್ರವಾರ ಏ 11 ರಂದು ಶ್ರೀ ಶಿವಯೋಗೀಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆಯೊಂದಿಗೆ ಜಾತ್ರೆ ಆರಂಭವಾಗಲಿದೆ
ಶನಿವಾರ 12 ರಂದು ಅಯ್ಯಾಚಾರ ಮತ್ತು ಲಿಂಗದೀಕ್ಷೆ, ಬೆಳಿಗ್ಗೆ 6:30 ಕ್ಕೆ ಕರ್ತೃಗದ್ದುಗೆಗೆ ಮಹಾ ರುದ್ರಾಭಿಷೇಕ, 8 ಗಂಟೆಗೆ ಅಯ್ಯಾಚಾರ ನಡೆಯಲಿದೆ. ನಂತರ ಹನುಮಜಯಂತಿ, ಅಕ್ಕಮಹಾದೇವಿ ಜಯಂತಿಯ ಅಂಗವಾಗಿ ಭಾವಚಿತ್ರಗಳೊಂದಿಗೆ ಶ್ರೀ ಶಿವಯೋಗೀಶ್ವರ ಪಲ್ಲಕ್ಕಿ ಉತ್ಸವವು ಗ್ರಾಮದಲ್ಲಿ ಸುಮಂಗಲಿಯರ ಆರತಿ ಕುಂಭಮೇಳದೊಂದಿಗೆ ಮೆರವಣಿಗೆ ನಡೆಯಲಿದೆ.
ಅಂದು ಶನಿವಾರ ಸಂಜೆ 6ಕ್ಕೆ ಹಚ್ಚೇವು ಕನ್ನಡದ ದೀಪ ಖ್ಯಾತಿಯ ಪ್ರಸಿದ್ಧ ಸಾಹಿತಿ ಡಾ.ಡಿ.ಎಸ್. ಕರ್ಕಿ ಅವರ ಸವಿ ನೆನಪಿಗಾಗಿ ಬಾಗೋಜಿಕೊಪ್ಪದ ಗುರುವರೇಣ್ಯ ಗ್ರಾಮೀಣ ವಿದ್ಯಾಪೀಠದ 2025ನೇ ಸಾಲಿನ ರಾಜ್ಯಮಟ್ಟದ ಕನ್ನಡ ದೀಪ ಪ್ರಶಸ್ತಿ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಪ್ರದಾನವಾಗಲಿದೆ. ಈ ಸಂದರ್ಭದಲ್ಲಿ ನೂರೊಂದು ಶಿಕ್ಷಕ ಮತ್ತು ಸೈನಿಕ ದಂಪತಿಗಳಿಗೆ ಸತ್ಕಾರ ನಡೆಯಲಿದೆ.ಎಂದು ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.