ಡಾ.ಬಿ.ಆರ್.ಅಂಬೇಡ್ಕರ ಮಹಾ ಮಾನವತಾವಾದಿ: ಬಸವಂತ ಕೋಣಿ
ಬೆಟಗೇರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರ ತತ್ವಾರ್ದಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ ಅಭಿಮಾನಿ ಬಳಗದ ಸಹಯೋಗದಲ್ಲಿ ಬುಧವಾರ ಏ.14ರಂದು ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ ಅವರು ಭಾರತ ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಮಹಾ ಮಾನವತಾವಾದಿಯಾಗಿದ್ದಾರೆ ಎಂದರು.
ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿ ಡಾ.ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚಣೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು.
ಈ ವೇಳೆ ರಾಜಕೀಯ ಮುಖಂಡರಾದ ಲಕ್ಷ್ಮಣ ನೀಲಣ್ಣವರ, ಬಸವರಾಜ ಪಣದಿ, ಸುರೇಶ ಬಾಣಸಿ, ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ ಅಧ್ಯಕ್ಷ ಸುಭಾಷ ಜಂಬಗಿ, ರವಿ ದಾನವ್ವಗೋಳ, ಮಲ್ಲಪ್ಪ ತೆರದಾಳ, ಆನಂದ ತಳವಾರ, ಮೆಳೆಪ್ಪ ಹರಿಜನ, ವಿಠಲ ದಾನವ್ವಗೋಳ, ಅಶೋಕ ಹರಿಜನ, ವಿವೇಕ ದೊಡ್ಡಮನಿ, ಚಾಯಪ್ಪ ಗಜಾಕೋಶ, ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ ಸದಸ್ಯರು, ಡಾ.ಬಿ.ಆರ್.ಅಂಬೇಡ್ಕರ ಅಭಿಮಾನಿ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.