ಮೂಡಲಗಿ: ‘ಮನಸ್ಸು ಹಾಗೂ ಅಂತ:ಕರಣವನ್ನು ಅರಳಿಸುವ ಶಕ್ತಿ ಕಾವ್ಯ ಇರಬೇಕು’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಇಲ್ಲಿಯ ಬೀರೇಶ್ವರ ದೇವಸ್ಥಾನದ ಪಟಾಂಗಣದಲ್ಲಿ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತು ಹಾಗೂ ಗುರ್ಲಾಪುರದ ಗೆಳೆಯರ ಬಳಗ ಜಂಟಿಯಾಗಿ ಏರ್ಪಡಿಸಿದ್ದ ಸಿದ್ದು ಶಾಬನ್ನವರ ಚೊಚ್ಚಲ ಕೃತಿ ಸಿರಿನಾಡು ಕರುನಾಡು ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಕಾವ್ಯ ರಚನೆಯು ಕವಿಯ ಪರಿಪೂರ್ಣತೆಯನ್ನು ಸಾಕಾರಗೋಳಿಸುತ್ತದೆ ಎಂದರು.
ಸಿದ್ದು ಶಾಬನ್ನವರ ಕವನ ಸಂಕಲನದಲ್ಲಿ ರಾಷ್ಟ್ರ ಭಕ್ತಿ, ಆಧ್ಯಾತ್ಮಿಕತೆ, ಹಬ್ಬ, ಹರಿದಿನಗಳ ಕುರಿತು ರಚಿಸಿರುವ ಕವನಗಳು ಅರ್ಥಪೂರ್ಣವೆನಿಸುತ್ತವೆ
ಎಂದರು.
ಸಾಹಿತಿ ಮಹಾದೇವ ಪೋತರಾಜ ಸಿರಿನಾಡು ಕರುನಾಡು ಕೃತಿ ಪರಿಚಯ ಮಾಡುತ್ತಾ ಸಿದ್ದು ಶಾಬಣ್ಣವರ ಭವರಸೆಯ ಕವಿಯಾಗಿದ್ದಾರೆ ಎಂದರು.
ಹಿಡಕಲ್ ಸಾಹಿತಿ ಟಿ.ಎಸ್. ಒಂಟಗೋಡಿ, ಬಾಲಶೇಖರ
ಬಂದಿ, ಶಬ್ಬಿರ ಡಾಂಗೆ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ನಿವೃತ್ತ ಪ್ರಾಚಾರ್ಯ ಎಸ್.ಎಂ. ಕಮದಾಳ ಮಾತನಾಡಿ ಮೊಬೈಲ್ ಬಂದು ಓದುವ ಸಂಸ್ಕøತಿಯನ್ನು ಹಾಳು ಮಾಡಿದೆ.
ಇದು ಅಪಾಯದ ಸಂಗತಿಯಾಗಿದೆ ಎಂದರು.
ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಮಹಾದೇವ ಜಿಡ್ಡಿಮನಿ, ಡಾ. ಶಿವಾ ಹೊಸೂರ ಅತಿಥಿಯಾಗಿ ವೇದಿಕೆಯಲ್ಲಿದ್ದರು. ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ, ಪ್ರಶಾಂತ ನಿಡಗುಂದಿ, ಲಕ್ಕಪ್ಪ ಶಾಬನ್ನವರ,ಮಹಾದೇವ ನಡುವಿನಕೇರಿ, ಸಿದ್ದಪ್ಪ ದುರದುಂಡಿ, ಶಿವಾಜಿ ಮೇತ್ರಿ, ಎ.ಎಚ್. ಒಂಟಗೂಡಿ,
ಬಿ.ವೈ. ಶಿವಾಪುರ, ಅಡಿವೆಪ್ಪ ದುರದುಂಡಿ,
ಪ್ರತಾಪ ಶಾಬನ್ನವರ, ಸಂಗೀತಾ ಎಸ್. ಪಾಟೀಲ,
ಸಾಂವಕ್ಕ ಶಾಬನ್ನವರ, ಶಾಂತಕ್ಕ ಕೌಜಲಗಿ,
IN MUDALGI Latest Kannada News