Breaking News
Home / ಬೆಳಗಾವಿ / ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

Spread the love

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

ಮೂಡಲಗಿ: ಬರುವ ಏಪ್ರಿಲ್ ೨೭ ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಪಟ್ಟಣದ ಶ್ರೀ ಶಿವಬೋಧರಂಗ ಮಠದಲ್ಲಿ ಮೂಡಲಗಿ ತಾಲೂಕಿನ ಅಭಿಯಾನಕ್ಕೆ ಶ್ರೀ ದತ್ತಾತ್ರಬೋಧ ಸ್ವಾಮಿಜಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಶ್ರೀ ದತ್ತಾತ್ರಬೋಧ ಶ್ರೀಗಳು ಮಾತನಾಡಿ, ಗೋಮಾತೆಯ ಗೌರವ ದಿನ ಎಂದು ಸರಕಾರ ಘೋಷಿಸಲು ಆಗ್ರಹಿಸಿ ಹಮ್ಮಿಕೊಂಡಿರು ಅಭಿಯಾನ ಸ್ವಾಗತಾರ್ಹ, ದೇಶಾದ್ಯಾಂತ ಮಾಸಹಾರಿ ಸೇವಿಸುವ ಜನರು ತಮ್ಮ ತಮ್ಮ ಮನೆಯಲ್ಲಿ ಗೌರವಯುತ್ತವಾಗಿ ಸೇವಿಸುತ್ತಿದ್ದಾರೆ. ಆದರೆ ಮಾಸಹಾರಿ ಸೇವಿಸದ ಜನರು ಇಂದು ರಾಜಾರೋಷವಾಗಿ ಮಾಸಹಾರಿ ಅಂಗಡಿಗಳಲ್ಲಿ ಮಾಸಹಾರಿ ಸೇವಿಸುತ್ತಿರುವದು ಖೇದಕರ ಸಂಗತಿ ಎಂದ ಅವರು ಎಪ್ರಿಲ್ ೨೭ ರಂದು ಗೋಮಾತಾ ಗೌರವ ದಿನ ಮತ್ತು ರಾಷ್ಟಿçÃಯ ಪ್ರಾಣಿ ಎಂದು ಘೋಷನೆಗೆ ಹಾಗೂ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಹಮ್ಮಿಕೊಂಡಿರುವ ಚಳುವಳಿಗೆ ಮೂಡಲಗಿ ತಾಲೂಕಿನ ಎಲ್ಲ ಗೋಮಾತೆಯ ಭಕ್ತರು ಅಭಿಯಾನದ ಪತ್ರಕ್ಕೆ ಸಹಿ ಮಾಡುವ ಮೂಲಕ ಬೆಂಬಲಿಸ ಬೇಕೆಂದರು.
ಅಭಿಯಾನದ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಾರುತಿ ಕೋಳಿ ಮಾತನಾಡಿ, ಎಪ್ರೀಲ್ ೨೭ ರಂದು ದೇಶಾದ್ಯಂತ ಎಲ್ಲ ತಹಶೀಲ್ದಾರ ಮತ್ತು ಬ್ಲಾಕ್ ಅಧಿಕಾರಿಗಳ ಮೂಲಕ ಸಹಿ ಸಂಗ್ರದ ಪತ್ರದೊಂದಿಗೆ ಗೋಮಾತೆಯ ಗೌರವ ದಿನಎಂದು ಘೋಷಿಸಬೇಕೆಂದು ಆಗ್ರಹಿಸಿ ರಾಷ್ಟçಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ರಾಜ್ಯ ಪಾಲರಿಗೆ ಮತ್ತು ರಾಜ್ಯ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದ ಅವರು ಈ ಅಭಿಯಾನ ಯಾವುದೇ ರಾಜಕೀಯ ಪಕ್ಷಕ್ಕೆ ಮತ್ತು ಸಂಘಟನೆಗೆ ಸಂಭದಿಸಿಲ್ಲ ಎಂದರು.
ಈ ಸಮಯಾದಲ್ಲಿ ರಘುವೀರ ಕಪ್ಪಲಗುದ್ದಿ, ರಾಜು ನೇಸೂರ, ಕಲ್ಮೇಶ ಗೋಕಾಕ, ಶಂಕರ ತುಪ್ಪದ, ಕೃಷ್ಣಾ ಗಿರೆಣ್ಣವರ, ಸಚಿನ ತಳವಾರ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ರಕ್ಷಾ ಬಂಧನ ಹಬ್ಬದ ಸಡಗರ ಸಂಭ್ರಮ

Spread the loveಬೆಟಗೇರಿ: ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಶುಕ್ರವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ