Breaking News
Home / ಬೆಳಗಾವಿ / ಏ.20ರಂದು ಬೆಟಗೇರಿಯಲ್ಲಿ ಅದ್ದೂರಿ ಬಸವ ¸ ಜಯಂತಿ ಆಚರಣೆ

ಏ.20ರಂದು ಬೆಟಗೇರಿಯಲ್ಲಿ ಅದ್ದೂರಿ ಬಸವ ¸ ಜಯಂತಿ ಆಚರಣೆ

Spread the love

ಏ.20ರಂದು ಬೆಟಗೇರಿಯಲ್ಲಿ ಅದ್ದೂರಿ ಬಸವ ¸
ಜಯಂತಿ ಆಚರಣೆ

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಬಸವ ಜಯಂತಿಯ ಆಚರಣೆ ಕಾರ್ಯಕ್ರಮ  ಏ.20ರಂದು ಅದ್ಧೂರಿಯಾಗಿ ನಡೆಯಲಿದೆ.
ಬೆಟಗೇರಿ ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿ ಮುಂಜಾನೆ 8 ಗಂಟೆಗೆ ಅಶ್ವಾರೊಢ ಬಸವಣ್ಣನವರ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ, ಷಟಸ್ಥಲ್ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ಥಳೀಯ ಸಂಗಯ್ಯ ಹಿರೇಮಠ ಸಮ್ಮುಖ, ಈರಯ್ಯ ಹಿರೇಮಠ ನೇತೃತ್ವ ವಹಿಸಲಿದ್ದಾರೆ.
ಬಳಿಕ ಮುಂಜಾನೆ 10 ಗಂಟೆಗೆ ಸ್ಥಳೀಯ ಅಶ್ವಾರೊಢ ಬಸವೇಶ್ವರ ವೃತ್ತದಿಂದ ಇಲ್ಲಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಮಹಿಳೆಯರಿಂದ ಆರತಿ, ಕುಂಭ ಸಕಲ ವಾದ್ಯಮೇಳಗಳೊಂದಿಗೆ ವಿಶ್ವಗುರು ಬಸವೇಶ್ವರರ ಭಾವ ಚಿತ್ರÀ, ಶೃಂಗರಿಸಿದ ಜೋಡೇತ್ತುಗಳ ಭವ್ಯ ಮೆರವಣಿಗೆ ಬಳಿಕ ಪ್ರಸಾದ ವಿತರಣೆ, ಮೆರವಣಿಗೆಯಲ್ಲಿ ಪಾಲ್ಗೊಂಡ ಜೋಡೇತ್ತುಗಳ ರೈತರಿಗೆ ಕಿರು ಕಾಣಿಕೆ, ಸನ್ಮಾನ ಜರುಗಲಿದೆ.

 ಶೃಂಗಾರಗೊಂಡ ಬೆಟಗೇರಿ ಬಸವೇಶ್ವರ ವೃತ್ತ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಏ.20ರಂದು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸ್ಥಳೀಯ ಬಸವ ಅಭಿಮಾನಿ ಬಳಗದವರ ಸಹಯೋಗದಲ್ಲಿ ಬೆಟಗೇರಿ ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಮೂರ್ತಿಗೆ ರಂಗುರಂಗಿನ ವಿದ್ಯುತ್ ದೀಪಗಳ ಅಲಂಕಾರ, ವೃತ್ತದ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯುವ ಕಾರ್ಯ ನಡೆದು, ಕೆಲವು ದಿನಗಳ ಕಾಲ ಇಲ್ಲಿಯ ಅಶ್ವಾರೊಢ ಬಸವೇಶ್ವರ ವೃತ್ತ ಶೃಂಗಾರಮಯವಾಗಿ ಕಂಗೊಳಿಸಲಿದೆ.
ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳ ಮುಖಂಡರು, ಗಣ್ಯರು, ಸಂತ ಶರಣರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇಲ್ಲಿಯ ಬಸವ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಬಸವಣ್ಣನ ಅಭಿಮಾನಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಬೆಟಗೇರಿ ಬಸವ ಅಭಿಮಾನಿ ಬಳಗದ ಸಂಚಾಲಕ ಈಶ್ವರ ಬಳಿಗಾರ ಪತ್ರಿಕಾ
ಪ್ರಕಟನೆಗೆ ತಿಳಿಸಿದ್ದಾರೆ.


Spread the love

About inmudalgi

Check Also

ಡಾ.ಬಿ.ಆರ್.ಅಂಬೇಡ್ಕರ ತತ್ವಾರ್ದಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಚಿದಾನಂದ ತಳವಾರ

Spread the loveಬೆಟಗೇರಿ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾರ್ದಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ