Breaking News
Home / ಬೆಳಗಾವಿ / ಬಸವಣ್ಣ ಸಾಮಾಜಿಕ ಸಮಾನತೆಯ ಹರಿಕಾರ : ರಮೇಶ ಅಳಗುಂಡಿ

ಬಸವಣ್ಣ ಸಾಮಾಜಿಕ ಸಮಾನತೆಯ ಹರಿಕಾರ : ರಮೇಶ ಅಳಗುಂಡಿ

Spread the love

ಬಸವಣ್ಣ ಸಾಮಾಜಿಕ ಸಮಾನತೆಯ ಹರಿಕಾರ :
ರಮೇಶ ಅಳಗುಂಡಿ

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಬಸವಣ್ಣನವರು ಭಾರತ ಇತಿಹಾಸದಲ್ಲಿ ಸಾಮಾಜಿಕ ಸಮಾನತೆ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ಕಾಯಕ ತತ್ವ ಬೋಧಿಸಿದ ಮಹಾನ ಚೇತನರಾಗಿದ್ದರು ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಏ.20ರಂದು ನಡೆದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರ ಬದುಕಿನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸ್ಥಳೀಯ ಪ್ರೌಢ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಕಾರ್ಯಕ್ರಮದ ನೇತೃತ್ವ ವಹಿಸಿ ಬಸವಣ್ಣನವರ ಭಾವಚಿತ್ರಕ್ಕೆ ಮಹಾಪೂಜೆ, ಪುಷ್ರ್ಪಾಪನೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು.
ಬಸವರಾಜ ಪಣದಿ, ಮಂಜುನಾಥ ದಾವಣೆ, ದುಂಡಪ್ಪ ದೇಯಣ್ಣವರ, ರಮೇಶ ಕತ್ತಿ, ರಮೇಶ ನೀಲಣ್ಣವರ, ಮಲ್ಹಾರಿ ಪೋಳ, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಇಲ್ಲಿಯ ಬಸವ ಅಭಿಮಾನಿಗಳು, ಶಾಲೆಯ ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.


Spread the love

About inmudalgi

Check Also

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ

Spread the loveಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ ವರದಿ: ಅಡಿವೇಶ ಮುಧೋಳ. ಬೆಟಗೇರಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ