Breaking News
Home / ಬೆಳಗಾವಿ / *ಎನ್ಎಸ್ಎಫ್ ಕಚೇರಿಯಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ*

*ಎನ್ಎಸ್ಎಫ್ ಕಚೇರಿಯಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ*

Spread the love

*ಗೋಕಾಕ;* ಮಹರ್ಷಿ ಭಗೀರಥರಂತಹ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರತಿ ದಿನವೂ ಮಹಾನ್ ಪುರುಷರನ್ನು ಸ್ಮರಿಸಬೇಕಾದ ಅಗತ್ಯತೆಯನ್ನು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪ್ರತಿಪಾದಿಸಿದರು.

ನಗರದಲ್ಲಿರುವ ತಮ್ಮ ಗೃಹ ಕಛೇರಿಯಲ್ಲಿ ಗುರುವಾರದಂದು ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಗೀರಥ ಸಮಾಜವು ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ತಮ್ಮ ಮೂಲ ವೃತ್ತಿ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅಂದಾಗ ಮಾತ್ರ ನಮ್ಮ ಸಮಾಜವು ಸುಧಾರಣೆಯಾಗಲಿಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಮ್ಮ ಸರಕಾರವು ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ನಿರ್ಣಯಿಸಿತು. ಅಂದಿನಿಂದ ಭಗೀರಥ ಮಹಾರಾಜರ ಜಯಂತಿಯು ಇಂದು ರಾಜ್ಯದಾದ್ಯಂತ ಸಡಗರದಿಂದ ನಡೆಯುತ್ತಿದೆ. ಭಗೀರಥ ಉಪ್ಪಾರ ಸಮಾಜದ ಅಭಿವೃದ್ಧಿಗೆ ನಾವು ಸದಾ ಸಿದ್ಧರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಕಹಾಮ ನಿರ್ದೇಶಕರೂ ಆಗಿರುವ ಜನಪ್ರಿಯ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಹರ್ಷಿ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಭಾ ಶುಗರ್ಸ ನಿರ್ದೇಶಕರಾದ ಭೂತಪ್ಪ ಗೊಡೇರ, ವಿನಿತ್ ಪಾಟೀಲ, ಮಂಡಲ ಪ್ರಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಬಸಲಿಂಗ ತೆಳಗಡೆ, ಮುತ್ತೆಪ್ಪ ಕುಳ್ಳೂರ, ಬಸು ಹಿಡಕಲ್, ಲಕ್ಷ್ಮಣ ಕೆಳಗಡೆ, ಉದ್ದಪ್ಪ ಮಾದರ, ಅಡಿವೆಪ್ಪ ಕಂಕಾಳಿ, ಭರಮಪ್ಪ ಪಾಶ್ಚಾಪೂರ, ಸಿದ್ದು ದುರದುಂಡಿ, ಶಿವರೆಡ್ಡಿ ಹುಚರೆಡ್ಡಿ, ಯಲ್ಲಪ್ಪ ಕಟ್ಟಿಕಾರ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಏ.20ರಂದು ಬೆಟಗೇರಿಯಲ್ಲಿ ಅದ್ದೂರಿ ಬಸವ ¸ ಜಯಂತಿ ಆಚರಣೆ

Spread the loveಏ.20ರಂದು ಬೆಟಗೇರಿಯಲ್ಲಿ ಅದ್ದೂರಿ ಬಸವ ¸ ಜಯಂತಿ ಆಚರಣೆ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ