Breaking News
Home / ಬೆಳಗಾವಿ / ಬೆಟಗೇರಿಯಲ್ಲಿ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ

ಬೆಟಗೇರಿಯಲ್ಲಿ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ

Spread the love

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಇದೇ ಏ.26 ರಿಂದ ಏ.30 ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಏ.26 ರಿಂದ ಏ.29 ರವರೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ ಅವರಿಂದ ನಾಲ್ಕು ದಿನಗಳ ಕಾಲ ಪ್ರತಿ ದಿನ ಸಾಯಂಕಾಲ 7 ಗಂಟೆಯಿಂದ 8 ಗಂಟೆಯವರೆಗೆ ವಿವಿಧ ವಿಷಗಳ ಮೇಲೆ ಶ್ರೀ ಗಜಾನನ ವೇದಿಕೆ ಮೇಲೆ ಪ್ರವಚನ, ಏ.30 ರಂದು ಪ್ರವಚನ ಮಂಗಲ ಕಾರ್ಯಕ್ರಮ ಮುಂಜಾನೆ 10 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.
ಏ.26 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯ ಅಡವಿಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಗಜಾನನ ವೇದಿಕೆ ತನಕ ಸುಮಂಗಲೆಯರಿಂದ ಆರತಿ ಮತ್ತು ಕುಂಭಮೇಳ, ಸಕಲ ವಾಧ್ಯಮೇಳಗಳೊಂದಿಗೆ ಭವ್ಯ ಸ್ವಾಗತ ಜರುಗಲಿದೆ. ಏ.30ರಂದು ಮುಂಜಾನೆ 8 ಗಂಟೆಗೆ ಬಳಗಾನೂರದ ಶಿವಶಾಂತವೀರ ಶರಣರಿಂದ ಶಿವಭಜನೆ ಮೂಲಕ ಗ್ರಾಮದ ವಿವಿಧಡೆ ಪಾದಯಾತ್ರೆ ನಡೆಯಲಿದೆ.
ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ,
ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸೇವೆ ನಡೆಯಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು,
ಚರಮೂರ್ತಿಗಳು, ಸಂತ, ಶರಣರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ
ಪ್ರವಚನ ಆಯೋಜನೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.


Spread the love

About inmudalgi

Check Also

ಬಗರನಾಳದಲ್ಲಿ ಮಹಾ ಪರಿನಿರ್ವಾಣೋತ್ಸವ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬಗರನಾಳ ಗ್ರಾಮದ ಬಸವ ಪಿರಾಮಿಡ್ ಹಿಲ್ಸ್ ಧ್ಯಾನ ಕೇಂದ್ರದಲ್ಲಿ ಬುಧವಾರ ಜು.29ರಂದು ಸಾಯಂಕಾಲ 6ಗಂಟೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ