Breaking News
Home / ಬೆಳಗಾವಿ / ಮನುಷ್ಯ ಉದಾರಿಯಾಗಿ ಬದುಕಬೇಕು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

ಮನುಷ್ಯ ಉದಾರಿಯಾಗಿ ಬದುಕಬೇಕು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the love

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಮನುಷ್ಯ ಎಷ್ಟು ವರ್ಷ ಬದುಕಿದ ಅಂಬುವುದು ಮುಖ್ಯವಲ್ಲಾ. ನಿನ್ನ ಬದುಕು ಹೇಗೆ ಇತ್ತು ಅಂಬುವದು ಬಹಳ ಮುಖ್ಯ. ಬಂಗಾರದಂತಹ ಮನಸ್ಸು ಇರುವವರು ದಾನ ಮಾಡುತ್ತಾರೆ. ಮನುಷ್ಯ ತಾನು ಗಳಿಸಿದ ಸಂಪತ್ತಿನಲ್ಲಿ ಒಂದಿಷ್ಟು ದಾನವಾಗಿ ನೀಡಬೇಕು ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಇದೇ ಏ.26ರಿಂದ ಏ.30ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ನಾಲ್ಕನೇಯ ದಿನ ಏ.29ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ನಡೆದ ಪ್ರವಚನದಲ್ಲಿ ಮಾತನಾಡಿದ ಅವರು, ನರಮಾನವ ಸುಂದರವಾಗಿ ಬದುಕಬೇಕು. ಮನುಷ್ಯ ಬದುಕಿನಲ್ಲಿ ಒಂದಿಷ್ಟು ದಾನಿಯಾಗಿ ಬದುಕಬೇಕು ಎಂದರು.
ಆಸ್ತಿ, ಅಂತಸ್ತು ಇರಬೇಕು, ಅವೆಲ್ಲಾ ಒಂದು ದಿನ ಇಲ್ಲಾಗುತ್ತವೆ ಅಂಬುವುದು ಗೊತ್ತಿರಬೇಕು. ನೀವು ದಾನ ಮಾಡಿದ್ದು ಮರೆತುಬಿಡಬೇಕು. ಜೀಪುಣ ತಾನು ತಿನ್ನವುದಿಲ್ಲಾ, ಮತ್ತೊಬ್ಬರಿಗೊ ತಿನ್ನಲಿಕ್ಕೆ ಬಿಡುವುದಿಲ್ಲಾ, ದಾನಿ ತಾನು ತಿನ್ನುತ್ತಾನೆ ಮತ್ತೊಬ್ಬರಿಗೂ ತಿನ್ನಲಿಕ್ಕೆ ಕೊಡುತ್ತಾನೆ. ಹಸಿದವರಿಗೆ ಒಂದು ತುತ್ತು ಅನ್ನಕೊಟ್ಟರೆ ನಿಮಗೆ ಪುಣ್ಯ ಬರುತ್ತದೆ. ಮನುಷ್ಯ ಉದಾರಿಯಾಗಿ ಬದುಕಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಉಪನಿಷತ್ತು ನಾವು ಬದುಕುವ ಕಲೆಯನ್ನು ಹೇಳುತ್ತದೆ. ದುಡಿದು ತಿನ್ನುವವನು ಬಡವನಾಗಿದ್ದರೂ ಶ್ರೀಮಂತನು, ದುಡಿಯದೇ ತಿನ್ನುವವನು ಶ್ರೀಮಂತನಾಗಿದ್ದರೂ ಬಡವನು. ಮತ್ತೂಬ್ಬರನ್ನು ಕರೆದುಕೊಂಡು ತಿನ್ನುವದು ದಾಸೋಹ ಎಂದು ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು.
ಇಂಚಲ ಭಾರತಿ ಶ್ರೀಗಳ ಸಾನಿಧ್ಯದಲ್ಲಿ 42 ವರ್ಷದಿಂದ ಸತ್ಸಂಗ ಮಾಡಿಕೊಂಡು ಬರುತ್ತಿರುವದು ಶ್ಲಾಘನೀಯ. ಬೆಟಗೇರಿ ಜನರು ಪುಣ್ಯವಂತರು. ಇಸ್ಲಾಂ ಧರ್ಮಕ್ಕೆ ಸೇರಿದ ಫಕೀರ ಕಾದರಲಿಂಗನಿಗೆ ಒಬ್ಬ ತಾಯಿ ರೊಟ್ಟಿ ಕೊಟ್ಟಿದ್ದಕ್ಕೆ ಈ ನಾಡು ಕೊಂಡಾಡುವ ಮಹಾನ್ ಮಗು ಶಿಶುನಾಳ ಷರೀಪರು ಹುಟ್ಟಿದರು ಅಂತಾ ಷರೀಪರ ಸೇರಿದಂತೆ ಹಲವಾರು ದೃಷ್ಟಾಂತಗಳನ್ನು ಹೇಳುವುದರ ಮೂಲಕ ದಾನ ಎಂಬ ವಿಷಯದ ಮೇಲೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಪ್ರವಚನ ಹೇಳಿದರು.
ಸ್ಥಳೀಯ ಪ್ರವಚನ ಕಾರ್ಯಕ್ರಮಕ್ಕೆ ತನು, ಮನ,
ಧನ ಸಹಾಯ, ಸಹಕಾರ ನೀಡಿದ ದಾನಿಗಳನ್ನು, ಗಣ್ಯರನ್ನು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರು ಸತ್ಕರಿಸಿದರು. ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸಾಥದೊಂದಿಗೆ ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ ಸೇವೆ ನಡೆಯಿತು. ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರನ್ನು ಬೆಟಗೇರಿ ಗ್ರಾಮಸ್ಥರ ಪರವಾಗಿ ಈ ವೇಳೆ ಸತ್ಕರಿಸಿದರು.
ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಎಂ.ಐ.ನೀಲಣ್ಣವರ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ, ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತ, ಶರಣರು, ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ಸತ್ಸಂಗದ ದಾರಿ ತೋರಿಸುವವನೇ ಗುರು: ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ:ಮನುಷ್ಯ ಜನ್ಮ ಶ್ರೇಷ್ಠವಾಗಿದೆ. ಒಳ್ಳೆಯವನಾಗಿ ಒಳ್ಳೆಯ ಕಾಯಕ ಮಾಡಿ, ಭಗವಂತನ ನಾಮಸ್ಮರಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ