Breaking News
Home / ಬೆಳಗಾವಿ / ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ

ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ

Spread the love

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಬಸವಣ್ಣನವರು ಶತ ಶತಮಾನದ ಹಿಂದೆ ಕಲ್ಯಾಣದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ಆಸ್ಥಾನದಲ್ಲಿ
ಮಂತ್ರಿಯಾಗಿದ್ದರು. ಬಿಜ್ಜಳ ಮಹಾರಾಜನ ಬಿಟ್ಟು, ಮಂತ್ರಿ
ಮಹಾತ್ಮ ಬಸವಣ್ಣನ ಶತಮಾನಗಳಾದರೂ ಯಾಕೆ ಇಂದಿಗೂ ನೆನಸುತ್ತಾರೆ ಅಂದರೆ ಬಿಜ್ಜಳ ರಾಜ ಮಣ್ಣಿನ ಸಾಮ್ರಾಟನಾಗಿದ್ದರೆ, ಬಸವಣ್ಣ ಹೃದಯ ಸಾಮ್ರಾಟನಾಗಿದ್ದರು. ಬಸವಣ್ಣ ಜಗತ್ತಿನ ಜನರ
ಹೃದಯ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಕಾಲ ಕೆಟ್ಟತೆ
ಅಂದರೆ ಕಾಲ ಕೆಟ್ಟಿಲ್ಲ, ಕಟ್ಟೆಯ ಮೇಲೆ ಕುಳಿತು
ಮಾತನಾಡುವವರ ತಲೆ ಕೆಟ್ಟತಿ ಎಂದು ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನದ ಐದನೇಯ ದಿನ ಏ.30ರಂದು ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡಿದ ಅವರು, ನಾವು ಬದುಕಿನ ಕುರಿತು ಒಳ್ಳೆಯ ಚಿಂತನೆ ಮಾಡಬೇಕು. ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು ಎಂದರು. ಧನ ಮತ್ತು ಕೀರ್ತಿ ಸಂಪತ್ತು ಉಳಿಯುವುದಿಲ್ಲಾ. ಸಂಪತ್ತು ಯಾರ ಹತ್ತಿರ ಉಳಿಯುವುದಿಲ್ಲಾ. ಜೀವನ ಕ್ಷಣಿಕವಾಗಿದೆ. ಉಸಿರು
ತೆಗೆದುಕೊಂಡರೆ ಹುಟ್ಟು, ಉಸಿರು ಬಿಟ್ಟರೆ ಸಾವು. ಯಾರ
ಹೃದಯ ಸ್ವಚ್ಛವಿದೆ ಅವರ ಹೃದಯದೊಳಗೆ ದೇವರು
ಇರುತ್ತಾನೆ. ಕೃರ್ತನೊಬ್ಬನೇ ದೇವ. ಭೂಮಿ ಮೇಲಿನ
ಮೂರು ರತ್ನಗಳು ಅನ್ನ, ನೀರು ಒಳ್ಳೆಯ ಎರಡು ಮಾತು,
ಧರ್ಮ ಎಂದರೆ ಕೈಯೊಳಗೆ ಚಲೂ ಕೆಲಸ, ನಾಲಿಗೆ ಮೇಲೆ ಎರಡು ಚಲೂ ಮಾತು, ಹೃದಯದೊಳೆಗೆ ದೇವರ ನೆನೆಪು ಇರಬೇಕು.

ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ, ಬಳಗಾನೂರ
ಶಿವಶಾಂತವೀರ ಸ್ವಾಮೀಜಿ ಪ್ರವಚನ ಕಾರ್ಯಕ್ರಮದಲ್ಲಿ
ಮಾತನಾಡಿದರು. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸಾಥದೊಂದಿಗೆ ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ ಸೇವೆ ನಡೆಯಿತು. ಶ್ರೀಗಳನ್ನು  ಸ್ಥಳೀಯ  ಗ್ರಾಮಸ್ಥರ ಪರವಾಗಿ ಈ ವೇಳೆ ಸತ್ಕರಿಸಿದ ಬಳಿಕ ಮಹಾಪ್ರಸಾದ ನಡೆಯಿತು.
ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ,
ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ, ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತ, ಶರಣರು, ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ ಪ್ರವಚನ ಆಯೋಜನೆ ಸಮಿತಿ
ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಸಿಬಿಎಸ್‍ಇ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ “

Spread the loveಆರ್.ಡಿ.ಎಸ್. ಸಿಬಿಎಸ್‍ಇ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ “ ಮೂಡಲಗಿ : “ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ