
ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನನ್ನದು
ಎನ್ನುವುದು ಯಾವುದು ಇಲ್ಲಾ, ಮನಸ್ಸು ನಿಗ್ರಹ
ಮಾಡುವವರು ಈ ಜಗತ್ತನ್ನು ಗೆಲ್ಲುತ್ತಾರೆ. ಮನಸ್ಸು ಆ ಕಡೆ, ಈ ಕಡೆ ಹರಿಯದಂತೆ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಇದೇ ಏ.26ರಿಂದ ಏ.30ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮೂರನೇಯ ದಿನ ಏ.28ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ನಡೆದ ಪ್ರವಚನದಲ್ಲಿ ಮಾತನಾಡಿದ ಅವರು, ಮನಸ್ಸು ಹರಿಯುವಾಗ ಭಗವಂತನ ಸ್ಮರಣೆ ಮಾಡಿ, ಮನಸ್ಸು ನಿಗ್ರಹ ಮಾಡಿದರೆ ಮಹಾದೇವನನ್ನಾಗಿಸುತ್ತದೆ ಎಂದರು.
ಒಂದು ಕ್ಷಣದಲ್ಲಿ ಮನಸ್ಸು ಪಾಪ ಮತ್ತು ಪುಣ್ಯ ಮಾಡಲಿಕ್ಕೆ ಹಚ್ಚುತ್ತದೆ. ಮನಸ್ಸಿಗೆ ಸಂಸ್ಕಾರದ ಬಲದಿಂದ ನಿಗ್ರಹ ಮಾಡಬೇಕಾಗಿದೆ. ಹಲವು ಜನ ಮಹಾತ್ಮರು ಹುಚ್ಚರಂತೆ ಕಾಣುತ್ತಾರೆ, ಆದರೆ ಹುಚ್ಚರಲ್ಲಾ, ಜಗತ್ತಿನ ಜನರ ಅಜ್ಞಾನದ ಹುಚ್ಚು ಬಿಡಿಸಲಿಕ್ಕೆ ಅವತರಿಸಿ ಬಂದವರು. ಚಂಚಲ ಮನಸ್ಸು ಸೃಷ್ಠಕರ್ತನನ್ನೇ ಬಿಟ್ಟಿಲ್ಲ. ಮಹಾನ್ ಸಾಧನೆ ಮಾಡಿ ಶಿಖರಕ್ಕೇರಿದವರೆಲ್ಲಾ ಒಂದು ಕ್ಷಣದಲ್ಲಿ ಕೆಳಗೆ ಬಿದ್ದಿದ್ದಾರೆ ಅಂತಾ ಅದ್ಭುತ ಶಕ್ತಿಯುಳ್ಳ ರಾವಣನ ಕ್ಷಣ ಮಾತ್ರದಲ್ಲಿ ಚಂಚಲ ಮನಸ್ಸು ಮಾಡಿ ಕೆಟ್ಟ. ರಾವಣ ಸೇರದಂತೆ ಹಲವಾರು ದೃಷ್ಟಾಂತಗಳನ್ನು ಹೇಳುವುದರ ಮೂಲಕ ಮನಸ್ಸು ಎಂಬ ವಿಷಯದ ಮೇಲೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಪ್ರವಚನ ಹೇಳಿದರು.
ಸ್ಥಳೀಯ ಪ್ರವಚನ ಕಾರ್ಯಕ್ರಮಕ್ಕೆ ತನು, ಮನ, ಧನ
ಸಹಾಯ, ಸಹಕಾರ ನೀಡಿದ ದಾನಿಗಳನ್ನು, ಗಣ್ಯರನ್ನು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರು ಸತ್ಕರಿಸಿದರು. ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸಾಥದೊಂದಿಗೆ ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ ಸೇವೆ ನಡೆಯಿತು.
ಕೊಪ್ಪಳ ಶ್ರೀಗಳಿಂದ ಪ್ರವಚನ :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಏ.30 ರಂದು ಪ್ರವಚನ ಮಂಗಲ ಕಾರ್ಯಕ್ರಮ, ಮುಂಜಾನೆ 8 ಗಂಟೆಗೆ ಗ್ರಾಮದ ವಿವಿಧ ಬೀದಿಗಳಲ್ಲಿ ಬಳಗಾನೂರದ ಶಿವಶಾಂತವೀರ ಶರಣರಿಂದ ಶಿವಭಜನೆ ಮೂಲಕ ಸದ್ಭಾವನಾ ಪಾದಯಾತ್ರೆ, ಮುಂಜಾನೆ 10 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ ಎಂದು ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳ ಪ್ರವಚನ ಆಯೋಜನೆ ಸ್ಥಳೀಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಎಂ.ಐ.ನೀಲಣ್ಣವರ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ,ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ, ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತ, ಶರಣರು, ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
IN MUDALGI Latest Kannada News