Breaking News
Home / ಬೆಳಗಾವಿ / ಬೆಟಗೇರಿ ಪ್ರೌಢ ಶಾಲೆ ಮಕ್ಕಳಿಗೆ ನಿತ್ಯ ಜಾಗೃತ ಹನುಮನ ದರ್ಶನ ಭಾಗ್ಯ.!

ಬೆಟಗೇರಿ ಪ್ರೌಢ ಶಾಲೆ ಮಕ್ಕಳಿಗೆ ನಿತ್ಯ ಜಾಗೃತ ಹನುಮನ ದರ್ಶನ ಭಾಗ್ಯ.!

Spread the love

ವರದಿ * ಅಡಿವೇಶ ಮುಧೋಳ.
ಬೆಟಗೇರಿ: ನಿತ್ಯ ಶಾಲೆಯಲ್ಲಿ ಹನುಮಂತ ದೇವರ
ದರ್ಶನ… ಇಲ್ಲಿಯ ಪ್ರೌಢ ಶಾಲೆಯ ಮಕ್ಕಳಿಗೆ
ದೊರೆತ ಭಾಗ್ಯ..! ಇದೇನು..? ಎಲ್ಲಿ ಅನ್ನುತ್ತೀರಾ… ಇದು
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಇತ್ತೀಚೆಗೆ ವೀರಾಂಜನೇಯ ನೂತನ ಮೂರ್ತಿ ನಿರ್ಮಿಸಲಾಗಿದೆ. ಹೀಗಾಗಿ ನಿತ್ಯ ಈ ಶಾಲೆಯ ಮಕ್ಕಳಿಗೆ, ಶಿಕ್ಷಕರಿಗೆ ಹನುಮಂತ ದರ್ಶನ ಭಾಗ್ಯ ನೀಡುತ್ತಿದ್ದಾನೆ.
ಪ್ರಾಣ ತ್ಯಾಗ ಮಾಡಿದ ಮಂಗ: ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ಶಾಲೆಯ ಮುಂದೆ ಇರುವ ಗಿಡಗಳ ಮೇಲೆ ಕುಳಿತ ಮಂಗಗಳಲ್ಲಿ ಒಂದು ಮಂಗ
ಯಾವುದೇ ಅವಘಡ ನಡೆಯದೆ ಆಕಸ್ಮಿಕ ಪ್ರಾಣ ತ್ಯಾಗ
ಮಾಡಿದ ಪ್ರಸಂಗ ನಡೆದಿದ್ದು ಒಂದು ವಿಶೇಷವಾಗಿದೆ. ಈ
ಮಂಗನ ಪಾರ್ಥಿವ ಶರೀರ ಅಂತ್ಯ ಸಂಸ್ಕಾರ ಮಾಡಿದ
ಸ್ಥಳದಲ್ಲಿ ನೂತನ ಹನುಮನ ಮೂರ್ತಿ ನಿರ್ಮಿಸಿ, ಪ್ರಾಣ
ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಶಾಲೆಯ
ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
ಮೂರ್ತಿ ಕೊಡುಗೆ: ಮೂಡಲಗಿ ಶೈಕ್ಷಣಿಕ ವಲಯ
ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶಾಲೆಯ
ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರ
ಸುಪುತ್ರ ದಿ.ಕಿರಣ ರಮೇಶ ಅಳಗುಂಡಿ ಸ್ಮರಣಾರ್ಥ
ಇವರ ಸಹೋದರ ಚೇತನ ರಮೇಶ ಅಳಗುಂಡಿ
ಅವರು ಸುಮಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಶ್ರೀವೀರಾಂಜನೇಯ ನೂತನ ಮೂರ್ತಿ ಶಾಲೆಗೆ
ಕೊಡುಗೆಯಾಗಿ ಸಮರ್ಪಿಸಿದ್ದಾರೆ.
ಶಿಕ್ಷಣಪ್ರೇಮಿ ಚೇತನ ಅಳಗುಂಡಿ ಅವರು ನಮ್ಮೂರಿನ
ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಈ
ವೀರಾಂಜನೇಯ ನೂತನ ಮೂರ್ತಿ ನಿರ್ಮಿಸಿದ ಕಾರ್ಯಕ್ಕೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಸದಸ್ಯರು, ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಾಲೆಯ ಸಹಶಿಕ್ಷಕರು, ಅತಿಥಿಶಿಕ್ಷಕರು, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ ಜಾಗೃತ ಹನುಮಂತ ದೇವರು ಭಕ್ತರ ಇಷ್ಟಾರ್ಥ
ಪೂರೈಸುವ ಮಹಾನ್ ಶಕ್ತಿಯುಳ್ಳ ದೇವರು.
ಹನುಮನು ಇಂದಿನ ಯುವಕರಿಗೆ ಆದರ್ಶಪ್ರಾಯ.
ಶ್ರೀರಾಮನ ಮೇಲೆ ಇದ್ದ ಹನುಮನ ಭಕ್ತಿ, ತತ್ವ
ಸಿದ್ದಾಂತದ ಸ್ಪೂರ್ತಿ ಈ ಶಾಲೆಯ ಮಕ್ಕಳಲ್ಲಿ ಬೆಳೆಯಲಿ
ಎಂಬ ಉದ್ಧೇಶದಿಂದ ಹನುಮಂತನ ಮೂರ್ತಿ ಈ ಶಾಲೆಯಲ್ಲಿ ನನ್ನ ಸಹೋದರನ ಸ್ಮರಣಾರ್ಥ ನಿರ್ಮಿಸಿ ಕೊಟ್ಟಿದ್ದೇನೆ.

ಚೇತನ ರಮೇಶ ಅಳಗುಂಡಿ

ಬೆಟಗೇರಿ, ತಾ.ಗೋಕಾಕ


Spread the love

About inmudalgi

Check Also

ಮನಸ್ಸು ನಿಗ್ರಹ ಮಾಡಿದರೆ ಈ ಜಗತ್ತು ಗೆಲ್ಲಬಹುದು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನನ್ನದು ಎನ್ನುವುದು ಯಾವುದು ಇಲ್ಲಾ, ಮನಸ್ಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ