Breaking News
Home / ಬೆಳಗಾವಿ / ಮೇ.9ರಿಂದ ಬೆಟಗೇರಿ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ

ಮೇ.9ರಿಂದ ಬೆಟಗೇರಿ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ

Spread the love

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭ ಇದೇ ಶನಿವಾರ ಮೇ.9ರಿಂದ ರವಿವಾರ ಮೇ.11ರವರೆಗೆ ವಿಜೃಂಭನೆಯಿಂದ ನಡೆಯಲಿದೆ.
ಮೇ.9ರಂದು ಬೆಳಗ್ಗೆ 8ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕದ ಬಳಿಕ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 5 ಗಂಟಗೆ ಪುರದೇವರ ಹಾಗೂ ಪರಸ್ಥಳದ ವಿವಿಧ ದೇವರ ವಾಲಗ ಕೂಡುವ ಕಾರ್ಯಕ್ರಮ ಜರುಗಿ, ಮಮದಾಪುರ ಮತ್ತು ಗೋಸಬಾಳದ ಬೀರಸಿದ್ದೇಶ್ವರ ಪಲ್ಲಕ್ಕಿ, ಮುಗಳಿಹಾಳದ ಮಾಳಿಂಗರಾಯ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವ ಕಾರ್ಯಕ್ರಮ ಸಡಗರದಿಂದ ಜರುಗಿದವು.
ಮೇ.10ರಂದು ಬೆಳಗ್ಗೆ 6 ಗಂಟಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕ ನಡೆದು, ಮುಂಜಾನೆ 7 ಗಂಟಗೆ ಪಲ್ಲಕ್ಕಿ ಉತ್ಸವ, ಮುಂಜಾನೆ11:30 ಗಂಟೆಗೆ ದಾನಿಗಳಿಗೆ ಸತ್ಕಾರ, ಮಹಾಪ್ರಸಾದ ನಡೆಯಿತು.
ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ ಸಾನಿಧ್ಯ, ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ ನೇತೃತ್ವ, ಶಾಸಕ ಬಾಲಚಂದ್ರ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಉದ್ಘಾಟನೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಜ್ಯೋತಿ ಪ್ರಜ್ವಲಿಸಿದ್ದಾರೆ. ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮುತ್ತೆಪ್ಪ ವಡೇರ, ಹನುಮಂತ ವಡೇರ ಸಮ್ಮುಖ ವಹಿಸಲಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷೆ ಯಲ್ಲವ್ವ ಚಂದರಗಿ ಅಧ್ಯಕ್ಷತೆ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಸಾಂವಕ್ಕಾ ಬಾಣಸಿ, ಶಿವನಪ್ಪ ಮಾಳೇದ, ಬೀರಸಿದ್ಧೇಶ್ವರ ಕಮೀಟಿ ಅಧ್ಯಕ್ಷ ಸುಭಾಷ ಕರೆಣ್ಣವರ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸಂತ-ಶರಣರು, ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅನ್ನಸಂತರ್ಪನೆ ನೆರವೇರಿಸಲಿದ್ದಾರೆ.
ರಾತ್ರಿ 9:30ಗಂಟೆಗೆ ಮುತ್ತೊರು ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಮತ್ತು ಸೋಲ್ಲಾಪೂರ ಗೇನಸಿದ್ಧ ಗಾಯನ ಸಂಘದವರಿಂದ ಡೊಳ್ಳಿನ ಗಾಯನ ನಡೆಯಲಿದೆ. ಮೇ.11ರಂದು ಮುಂಜಾನೆ 8ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಪೂಜೆ, ಅಭಿಷೇಕ, ಭಂಢಾರ ಒಡೆಯುವ ಕಾರ್ಯಕ್ರಮದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಸ್ಥಳೀಯ ಬೀರಸಿದ್ಧೇಶ್ವರ ಕಮೀಟಿ ಕಾರ್ಯದರ್ಶಿ ಮಾಯಪ್ಪ ಬಾಣಸಿ, ಸದಾಶಿವ ಕುರಿ ಪ್ರಕಟನೆಯಲ್ಲಿ
ತಿಳಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ

Spread the loveಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ