Breaking News
Home / ಬೆಳಗಾವಿ / ಹಡಪದ ಅಪ್ಪಣ್ಣ ಬಸವಣ್ಣನವರ ನಿಕಟವರ್ತಿಯಾಗಿದ್ದರು:ರಮೇಶ ಅಳಗುಂಡಿ

ಹಡಪದ ಅಪ್ಪಣ್ಣ ಬಸವಣ್ಣನವರ ನಿಕಟವರ್ತಿಯಾಗಿದ್ದರು:ರಮೇಶ ಅಳಗುಂಡಿ

Spread the love

ಬೆಟಗೇರಿ:ಹಡಪದ ಅಪ್ಪಣ್ಣನವರು ಹನ್ನೆರಡನೆಯ
ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ
ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.29 ರಂದು ನಡೆದ ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಕ್ಷೌರಿಕ ವೃತ್ತಿಯ ಶಿವ ಶರಣ ಹಡಪದ ಅಪ್ಪಣ್ಣ ಅನುಭವ ಮಂಟಪದ ಸಭಿಕರಾಗಿ, ತಾಂಬೂಲ ಸೇವೆ ಮಾಡುತ್ತಿದ್ದರು ಎಂದು ಶಿವ ಶರಣ ಹಡಪದ ಅಪ್ಪಣ್ಣನವರ ಕುರಿತು ಈ ವೇಳೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು
ಶಿವಶರಣ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಿಹಿ ವಿತರಿಸಿದರು.ಸದಾನಂದ ತೆರಣಿ, ಈರಣ್ಣ ಪಟಗುಂದಿ, ರಾಕೇಶ ನಡೋಣೆ,ವೈ.ಎಮ್.ವಗ್ಗರ, ಶುಭಾ ಬಿ,.ಪ್ರಕಾಶ ಕುರಬೇಟ, ಭಾಗ್ಯಶ್ರೀ ನಾಯಕ, ಮಲ್ಹಾರಿ ಪೋಳ, ಗಣಪತಿ ಭಾಗೋಜಿ, ಸೌಮ್ಯಾಶ್ರೀ ಗಂಗಾ, ಮಂಜುನಾಥ ಸವತಿಕಾಯಿ, ಸಿರಾಜಅಹ್ಮದ ಜಿಡಿಮನಿ, ನಾಗರಾಜ ಅರಳಿಮಟ್ಟಿ, ಬಸವರಾಜ ಭೋಸಲೆ, ಭೀಮಶಿ ನರಸನ್ನವರ, ದೀಪಾ ದಾಸಂಗಳಿ, ಕಿರಣ ಕಮತ, ಶಾಲೆಯ ಸಹಶಿಕ್ಷಕರು, ಅತಿಥಿ ಶಿಕ್ಷಕರು, ಬಿಸಿಯೂಟದ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು,ಶಿಕ್ಷಣಪ್ರೇಮಿಗಳು, ಇತರರು ಇದ್ದರು.


Spread the love

About client

Check Also

ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ,

Spread the loveನಮ್ಮಮ್ಮ ಮಹಾಲಕ್ಷ್ಮೀ ಬಾರಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದಪ್ರಯುಕ್ತ 2 ನೇ ವಾರದ ದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ