Breaking News
Home / ಬೆಳಗಾವಿ / ಇನ್ನೂ ಮೂರು ವಾರದ ದಿನ ಬೆಟಗೇರಿ¸ ಸಂಪೂರ್ಣ ಬಂದ್.! *ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ*ಸುತ್ತಲಿನ ಹಳ್ಳಿಗಳ ಸಾರ್ವಜನಿಕರಲ್ಲಿ ಮಾಯಪ್ಪ ಬಾಣಸಿ ಮನವ

ಇನ್ನೂ ಮೂರು ವಾರದ ದಿನ ಬೆಟಗೇರಿ¸ ಸಂಪೂರ್ಣ ಬಂದ್.! *ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ*ಸುತ್ತಲಿನ ಹಳ್ಳಿಗಳ ಸಾರ್ವಜನಿಕರಲ್ಲಿ ಮಾಯಪ್ಪ ಬಾಣಸಿ ಮನವ

Spread the love

ಇನ್ನೂ ಮೂರು ವಾರದ ದಿನ ಬೆಟಗೇರಿ¸
Àಂಪೂರ್ಣ ಬಂದ್.!
*ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ*ಸುತ್ತಲಿನ
ಹಳ್ಳಿಗಳ ಸಾರ್ವಜನಿಕರಲ್ಲಿ ಮಾಯಪ್ಪ ಬಾಣಸಿ ಮನವ

ವರದಿ: ಅಡಿವೇಶ ಮುಧೋಳ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಮಂಗಳವಾರ ಜು.28ರಂದು ವಾರದ ದಿನ ಸಂಜೆ 6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ
ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವ
ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ,
ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು
ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ
ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ
ಎನ್ನುತ್ತಿದ್ದವು. ಇಡೀ ಊರಲ್ಲಿ ಬಂದ್ ಆಚರಣೆ ವಾತಾವರಣ ಇತ್ತು.
ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮುಂದೆ ಬರುವ ವಾರದ ಶುಕ್ರವಾರ ಜು.31ರಂದು, ಮಂಗಳವಾರ ಆ.4 ಮತ್ತು ಮಂಗಳವಾರ ಆಗಸ್ಟ್ 11ರಂದು ಸೇರಿ ಇನ್ನೂ ಮೂರು ದಿನÀವನ್ನು ಗ್ರಾಮದಲ್ಲಿ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.

ಇನ್ನೂ ಮೂರು ವಾರದ ದಿನ ಕಟ್ಟಾ ವಾರ ಆಚರಣೆ : ಬೆಟಗೇರಿ ಗ್ರಾಮದ ರೈತರ್ಯಾರೂ ವಾರದ ಇನ್ನೂ ಮೂರು ವಾರದ ದಿನ ನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ,
ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ
ತಯಾರಿಸುವಂತಿಲ್ಲ, ಊರಿನಲ್ಲಿರುವ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.

ಸುತ್ತಲಿನ ಹಳ್ಳಿಗಳ ಸಾರ್ವಜನಿಕರಲ್ಲಿ ಮನವಿ : ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರು ಹಳ್ಳಿಗಳಿಗೆ ಸಾರ್ವಜನಿಕರಿಗೆ ವ್ಯಾಪಾರ ವಹಿವಾಟದ ವಾಣಿಜ್ಯ ಕೇಂದ್ರ ಸ್ಥಳವಾಗಿದ್ದರಿಂದ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಾರ್ವಜನಿಕರು ಗಮಸಿಸಬೇಕು. ಇನ್ನೂ ಮೂರು ವಾರದ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ. ಬೆಟಗೇರಿ ಮತ್ತು ಸುತ್ತಲಿನ ಹತ್ತೂರಿನ ಸಾರ್ವಜನಿಕರು ಸಹಕರಿಸಬೇಕೆಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ಈ ವೇಳೆ ಮನವಿ ಮಾಡಿಕೊಂಡರು. ಸುಭಾಷ ಕರೆಣ್ಣವರ, ಸಿದ್ಧಬೀರಪ್ಪ ಧರ್ಮಟ್ಟಿ, ಗುರಪ್ಪ ಮಾಕಾಳಿ, ಬಸು ಕೆಂಪನಿಂಗಪ್ಪಗೋಳ, ಮುದಕಪ್ಪ ಚಂದರಗಿ, ಮಾಯಪ್ಪ ನೀಲಜಗಿ, ಬಸು ಮಾಕಾಳಿ, ವಿನಾಯಕ ನಾಯ್ಕರ, ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯಸದಸ್ಯರು, ಸ್ಥಳೀಯರು ಇದ್ದರು.


Spread the love

About client

Check Also

ಬೆಟಗೇರಿ: ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ದಿನವನ್ನು ಜು.25 ಮತ್ತುಜು.26ರಂದು ವಿಠ್ಠಲ-ರುಕ್ಮಿಣಿ ನಾಮಸ್ಮರಣೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ