Breaking News
Home / ತಾಲ್ಲೂಕು / ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಬಸವೇಶ್ವರ ಪುತ್ಥಳಿ ನಿರ್ಮಿಸಿದ ಕಾರ್ಯ ಶ್ಲಾಘನೀಯ : ಕಡಾಡಿ

ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಬಸವೇಶ್ವರ ಪುತ್ಥಳಿ ನಿರ್ಮಿಸಿದ ಕಾರ್ಯ ಶ್ಲಾಘನೀಯ : ಕಡಾಡಿ

Spread the love

ಮೂಡಲಗಿ : ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ನಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಸಂಸ್ಥೆಯ ಗುರಿಯಾಗಲಿ ಎಂದು ವಿರಕ್ತ ಮಠ ಬೆಂಡವಾಡ ಶ್ರೀ ಶ್ರೀ ಮ.ನಿ.ಪ್ರ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ನಡೆದ

ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ ಸೊಸಾಯಿಟಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸುಮಾರು 9 ಲಕ್ಷದ ರೂ, ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜಕ್ಕೆ ಬೇಕಾಗಿರುವುದು ಜಾತಿ, ಬೇಧ ಅಲ್ಲ, ಆರ್ಥಿಕ ಸಮಾನತೆ. ಶ್ರೀಮಂತರಲ್ಲಿರುವ ಹಣ ಬಡ ಜನರ ಸಹಕಾರಕ್ಕೆ ನೆರವು ಆಗಬೇಕಾದರೆ ಇಂತಹ ಸಹಕಾರ ಸಂಘಗಳ ಪಾತ್ರ ಬಹುದೊಡ್ಡದು ಆದರೆ ಸಾಲದ ರೂಪದಲ್ಲಿ ಪಡೆದುಕೊಂಡ ಹಣವನ್ನು ರೈತರು ತಮ್ಮ ಸಮಸ್ಯೆಗಳಿಗೆ ಬಳಸದೇ ವಿನಾಕಾರಣ ಖರ್ಚು ಮಾಡಬಾರದು. ಸಾಲ ನೀಡಿದ ಸಂಸ್ಥೆಗಳಿಗೆ ಮರಳಿಸುವಂತ ದಾರಿಯಲ್ಲಿ ಕೆಲಸವಾಗಬೇಕು ಆಗಲೇ ಸಂಘ, ಸಂಸ್ಥೆಗಳು ಬೆಳವಣಿಗೆ ಪತದತ್ತ ಸಾಗುತ್ತವೆ ಎಂದು ಹೇಳಿದರು.

ರಾಜ್ಯಸಭಾ ಈರಣ್ಣ ಕಡಾಡಿ ಮಾತನಾಡಿ, ಮನುಷ್ಯನಿಗೆ ಕೈ, ಮನಸ್ಸು, ಬಾಯಿ, ಜ್ಞಾನ ಇವು ನಾಲ್ಕು ಪ್ರಮುಖ ಅಂಗ ಇವು ಒಳ್ಳೆಯ ಮಾರ್ಗದಲ್ಲಿ ನಡೆದರೆ ಗ್ರಾಮೀಣ ಕ್ಷೇತ್ರದಲ್ಲಿ ಇಂತಹ ಸಂಘ ಸಂಸ್ಥೆಗಳು ಇನ್ನೂ ಹುಟ್ಟಬಹುದು ಹಾಗೂ ಈ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ತನ್ನ ಶಾಖೆ ಪ್ರಾರಂಭಿಸಲಿ ಹಾಗೂ ಈ ಸಂಸ್ಥೆ ಮಾಡಿರುವ ಒಂದು ಕಾರ್ಯ ಜನ್ಮ ಜನ್ಮಾಂತರ ನೆನಪು ಉಳಿಯುವಂತೆ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಆದರೆ ಪುತ್ಥಳಿ ನಿರ್ಮಾಣ ಮಾಡಿದರೆ ಅಷ್ಟೇ ಸಾಲದು ಆ ವೇದಾಂತ ಪುರುಷ, ಭಕ್ತಿ ಭಂಡಾರಿ ಬಸವಣ್ಣನವರು ವಚನಗಳ ಮೂಲಕ ಹೇಳಿರುವ ವ್ಯಾಕ್ತದಂತೆ ಪ್ರಾಮಾಣಿಕವಾಗಿ ನಡೆದುಕೊಂಡರೆ ನಮ್ಮ ಜನ್ಮ ಪಾವನವಾಗುವುದು ಎಂದು ಹೇಳಿದರು.

ಮೂಡಲಗಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ, ಪ್ರಪಂಚದಲ್ಲಿ ಕಣ್ಣೀರ ಹನಿಗಿಂತ, ಬೆವರ ಹನಿ ಶ್ರೇಷ್ಟ. ಕಣ್ಣೀರು ಬರುವ ಹಾಗೆ ನಟಿಸಬಹುದು, ಬೆವರ ಹನಿ ಬರುವ ಹಾಗೆ ನಟಿಸಲಾಗುದು ಎಂಬ ಮಾತಿನಲ್ಲಿ ಎಷ್ಟು ಅರ್ಥಗರ್ಭಿತವಾಗಿದೆ ಎಂಬುವುದು ನಾವುಗಳು ತಿಳಿಯಬೇಕು. ಒಬ್ಬ ರೈತನ ಬೆವರು ಹನಿಯ ಹಿಂದೆ ಎಷ್ಟೋ ಜನರ ಬಾಳಿನಲ್ಲಿ ಅನ್ನದಾತನಾಗಿದ್ದಾನೆ ಹಾಗೆ ಸಂಘ ಸಂಸ್ಥೆಗಳು ಸಹ ಕಷ್ಟದಲ್ಲಿರುವವರಿಗೆ ಸಹಕಾರವಾಗಿ ರೈತನ ಕಣ್ಣೀರು ಒರೆಸುವಂತಾಗಬೇಕು ಅವಾಗಲೇ ಆ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಹೇಳಿದರು.

ಸಂಸ್ಥೆಯ ಸಾಧನೆ ಹಾಗೂ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಸೊಸಾಯಿಟಿಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ಬಸಪ್ಪ ಸಂತಿ ವಿವರಿಸಿದರು, ನಿಲಕಂಠ ಕಪ್ಪಲಗುದ್ದಿ, ಸಿಪಿಐ ವೆಂಕಟೇಶ ಮುರನಾಳ, ಸುಭಾಷ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯೆ ವಾಸಂತಿ ತೇರದಾಳ, ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ಮ, ಸೊಸೈಟಿ ಅಧ್ಯಕ್ಷ ಕುಮಾರ ಲೋಕನ್ನವರ, ಸದಸ್ಯರಾದ ಹಣಮಂತ ತೇರದಾಳ, ಶಂಕರ ಬೋಳನ್ನವರ, ನಿಂಗಪ್ಪ ಸುಣಧೋಳಿ, ಶಂಕ್ರಯ ಹಿರೇಮಠ, ಮಹೇಶ ನಾಶಿ, ಅಪ್ಪಾಸಾಬ ಮುಜಾವರ, ಬಸಪ್ಪ ತಳವಾರ, ಗಣಪತಿ ದಾಸರ ಹಾಗೂ ಮಲ್ಲಿಕಾರ್ಜುನ ಕಬ್ಬೂರ, ಸುಭಾಷ ಢವಳೇಶ್ವರ, ಸಂಜು ಅಗ್ನೇಪ್ಪಗೋಳ, ನಾಗಪ್ಪ ಒಡೆಯರ್, ನಾಗಪ್ಪ ಮೋರೆ, ಸುರೇಶ ಡಬ್ಬನ್ನವರ, ಮತ್ತು ಸೊಸೈಟಿಯ ಸಿಬ್ಬಂದಿ ವರ್ಗ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ