ಸಹಕಾರ ಕ್ಷೇತ್ರ ಭಾರತದ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಿದೆ: ಕಡಾಡಿ
ಮೂಡಲಗಿ: ಭಾರತದ ಮಣ್ಣಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದ ಸಹಕಾರ ಗುಣ ಭಾರತದ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಿ ಬೆಳೆದಿದೆ ಎಂದು ಸಹಕಾರಿ ಹಾಗೂ ದಿ. ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.ಕಲ್ಲೋಳಿ ಇದರ ಸನ್ 2019-20 ನೇ ಸಾಲಿನ 18ನೇ ಸರ್ವ ಸಾಮಾನ್ಯ ಸಭೆಯನ್ನು ಭಾರತ ಮಾತೆಗೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಸಹಾಯವನ್ನು ಪಡೆದುಕೊಂಡು ಕೃಷಿರಂಗದ ಅಭಿವೃದ್ಧಿಗಾಗಿ ಬಳಸಿಕೊಂದು ಈ ದೇಶದ ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆಂದರು.
ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಸಹಕಾರಿಯು ರೂ-53.55 ಲಕ್ಷ ಲಾಭಗಳಿಸಿದೆ ಎಂದು ಸಹಕಾರಿ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಸಹಕಾರಿಯ ಎಲ್ಲ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ಘೋಷಿಸಿದ ಅವರು ಸಂಘವು ಸ್ವಂತ ಕಟ್ಟಡ ಹೊಂದಿ, 3657 ಸದಸ್ಯರ ರೂ-11.83 ಲಕ್ಷ ಶೇರ ಬಂಡವಾಳ, ಗ್ರಾಹಕರಿಂದ ರೂ-12.35 ಕೋಟಿ ಠೇವಣಿ ಹೊಂದಿದ್ದು, ರೂ-2.57 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಏಂದರಲ್ಲದೇ ಗಾಹ್ರಕರಿಗೆ ರೂ-13.53 ಕೋಟಿ ವಿವಿಧ ಸಾಲ ವಿತರಿಸಲಾಗಿದೆ ಎಂದರು.
ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೋಸಬಾಳ ಅಧ್ಯಕ್ಷತೆ ವಹಿಸಿದ್ದರು, ನಿರ್ದೆಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ವ್ಯಾಪರಿ, ಮಾರುತಿ ಮಕ್ಕಳಗೇರಿ, ಮ್ಲಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ. ಮತ್ತು ನಿಂಗಪ್ಪ ಮಿಡಕನಟ್ಟಿ ಉಪಸ್ಥಿತರಿದ್ದರು.
ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಈರಪ್ಪ ದೇಯನ್ನವರ, ಉಪಾಧ್ಯಕ್ಷರಾದ ಮಾಯಪ್ಪ ಬಾಣಸಿ, ಶ್ರೀಕಾಂತ ಕರೆಪ್ಪಗೋಳ, ಗಂಗಯ್ಯ ಹಿರೇಮಠ, ಬಾಳಪ್ಪ ತಡಸಿ, ಅಜ್ಜಪ್ಪ ಪೆದನ್ನವರ ಭಾಗವಹಿಸಿದ್ದರು.
ಸಹಕಾರಿಯ ಪ್ರಮುಖ ಗ್ರಾಹಕರಾದ ಮಲ್ಲಪ್ಪ ಖಾನಗೌಡ್ರ, ವಕೀಲ ಮಲ್ಲಪ್ಪ ಕಡಾಡಿ, ಅಪ್ಪಾಸಾಬ ಮಳವಾಡ, ಶಂಕರ ಖಾನಗೌಡರ, ಜಿ. ಬಿ ಪಾಟೀಲ ಮುಂತಾದವರು ಭಾಗವಹಿಸಿದರು.
ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ವಾರ್ಷಿಕ ವರದಿ ಓದಿದರು, ಲೆಕ್ಕಾಧಿಕಾರಿ ಶಂಕರ ಕೌಜಲಗಿ ಸ್ವಾಗತಿಸಿದರು, ಶಾಖಾ ಕಾರ್ಯದರ್ಶಿ ಪರಪ್ಪ ಗಿರೆಣ್ಣವರ ಕಾರ್ಯಕ್ರಮ ನಿರೂಪಿಸಿದರು, ಪ್ರಶಾಂತ ಪಟ್ಟಣಶೆಟ್ಟಿ ವಂದಿಸಿದರು.
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …