Breaking News
Home / Recent Posts / ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‍ಗೆ ರೂ. 42 ಲಕ್ಷ ಲಾಭ – ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ

ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‍ಗೆ ರೂ. 42 ಲಕ್ಷ ಲಾಭ – ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ

Spread the love

ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‍ನ 70ನೇ ವಾರ್ಷಿಕ ಸಭೆಯನ್ನು ಬ್ಯಾಂಕ್ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ ಉದ್ಘಾಟಿಸಿದರು.

70ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಸುಭಾಷ ಢವಳೇಶ್ವರ ಹೇಳಿಕೆ ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‍ಗೆ ರೂ. 42 ಲಕ್ಷ ಲಾಭ

ಮೂಡಲಗಿ: ‘ಮೂಡಲಗಿ ಕೋ. ಆಪರೇಟಿವ್ ಬ್ಯಾಂಕ್‍ವು ಪ್ರಸಕ್ತ ಹಣಕಾಸಿನ ವರ್ಷದ ಕೊನೆಯಲ್ಲಿ ರೂ. 42 ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಬ್ಯಾಂಕ್‍ನ ಅಧ್ಯಕ್ಷ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ ಹೇಳಿದರು.
ಇಲ್ಲಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‍ನ 70ನೇ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬರುವ ವರ್ಷದಲ್ಲಿ ಎರಡು ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಬ್ಯಾಂಕ್‍ನ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದರು.
ಸದ್ಯ ಬ್ಯಾಂಕು ರೂ. 1.84 ಕೋಟಿ ಶೇರು ಬಂಡವಾಳ, ರೂ. 79.86 ಕೋಟಿ ದುಡಿಯುವ ಬಂಡವಾಳ, ರೂ. 3.79 ಕೋಟಿ ವಿವಿಧ ನಿಧಿಗಳು, ರೂ. 71.28 ಕೋಟಿ ಠೇವುಗಳನ್ನು ಹೊಂದಿದೆ. ರೂ. 51.16 ಕೋಟಿ ವಿವಿಧ ಕ್ಷೇತ್ರಗಲ್ಲಿಯ ಗ್ರಾಹಕರಿಗೆ ಸಾಲವನ್ನು ನೀಡಿದೆ ಎಂದರು.
ಬ್ಯಾಂಕು ಚಿಕ್ಕ ಉದ್ದಿಮೆ, ಕೃಷಿ ಉದ್ಯಮ, ವ್ಯಾಪಾರ, ವಾಣಿಜ್ಯ ವೃತ್ತಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಈ ಹಿಂದೆ ರೂ. 20 ಲಕ್ಷ ಇದ್ದ ಸಾಲದ ಮೊತ್ತವನ್ನು ರೂ. 30 ಲಕ್ಷಕ್ಕೆ ಹಾಗೂ ವ್ಯಾಪಾರಿ, ವಾಣಿಜ್ಯ ಸರಕುಗಳಿಗೆ ಕೊಡುವ ಸಾಲದ ಮೊತ್ತ ಹಿಂದೆ ಇದ್ದ ರೂ.10 ಲಕ್ಷದಿಂದ ರೂ. 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗ್ರಾಹಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.
ಬ್ಯಾಂಕು ಪ್ರತಿ ವರ್ಷ ಅಡಿಟ್‍ದಲ್ಲಿ ‘ಅ’ ವರ್ಗದ ಮಾನ್ಯತೆ ಪಡೆದು ಜನರ ವಿಶ್ವಾಸವನ್ನು ಪಡೆದುಕೊಂಡಿದ್ದು, ಕೋರ್ ಬ್ಯಾಂಕಿಂಗ, ನೆಪ್ಟ್‍ದಂತ ಎಲ್ಲ ಆಧುನಿಕ ಸೌಲಭ್ಯಗಳನ್ನು ಬ್ಯಾಂಕ್‍ನಲ್ಲಿ ಅಳವಡಿಸಲಾಗಿದೆ ಎಂದು ಢವಳೇಶ್ವರ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್‍ದ ಲೆಕ್ಕಪರಿಶೋಧಕ ಬೆಳಗಾವಿಯ ರಾಜ ಬೋಳಮಾಳ ಮಾತನಾಡಿ ಆರ್‍ಬಿಐ ನಿಯಂತ್ರಣದಲ್ಲಿರುವ ಬ್ಯಾಂಕ್‍ಗಳಲ್ಲಿಯ ಠೇವುಗಳು ಹೆಚ್ಚು ಸುರಕ್ಷತೆಯನ್ನು ಹೊಂದಿರುತ್ತವೆ. ಠೇವಣಿದಾರರ ಠೇವು ಹಣದ ಶೇ. 90ರಷ್ಟು ಭದ್ರತೆಯನ್ನು ಆರ್‍ಬಿಐ ಹೊಂದಿರುವುದರಿಂದ ಠೇವಣಿದಾರರು ನಿಶ್ಚಿಂತವಾಗಿರಬಹುದಾಗಿದೆ ಎಂದರು.
ಆರ್‍ಬಿಐದಿಂದ ಅನುಮತಿ ಪಡೆದಿರುವ ಮೂಡಲಗಿ ಕೋ.ಆಪರೇಟಿವ ಬ್ಯಾಂಕ್‍ವು ಠೇವುದಾರರಿಗೆ ಹೆಚ್ಚು ಸುರುಕ್ಷಿತವಾದ ಬ್ಯಾಂಕ್‍ವಾಗಿದೆ ಎಂದರು.
ಅತಿಥಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ ಮೂಡಲಗಿ ಪಟ್ಟಣವು ಸಹಕಾರಿ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಸಹಕಾರಿ ಸಂಸ್ಥೆಗಳು ಬೆಳವಣಿಗೆಯಾಗಬೇಕಾದರೆ ಸಂಸ್ಥೆಯವರ ಶ್ರದ್ಧಾಪೂರ್ವಕ ಸೇವೆ ಮಾಡಬೇಕು, ಸದಸ್ಯರು ಸಹ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗುತ್ತದೆ ಎಂದರು.
ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕ್‍ವು ಈಗಾಗಲೇ ಮೂರು ಶಾಖೆಗಳನ್ನು ಹೊಂದಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಬ್ಯಾಂಕ್‍ನ ಉಪಾಧ್ಯಕ್ಷ ನವೀನ ಎಂ. ಬಡಗಣ್ಣವರ, ನಿರ್ದೇಶಕರಾದ ಶಿವಲಿಂಗಪ್ಪ ಗಾಣಿಗೇರ, ರಾಚಯ್ಯಾ ನಿರ್ವಾಣಿ, ರುದ್ರಪ್ಪಾ ವಾಲಿ, ವೀರಪ್ಪ ಬೆಳಕೂಡ, ಹರೀಶ ಅಂಗಡಿ, ಮಹ್ಮದರಫೀಕ ತಾಂಬೋಳಿ, ಬಸವೇಶ್ವರ ಸೊಸೈಟಿ ಅಧ್ಯಕ್ಷ ಬಸವರಾಜ ತೇಲಿ ವೇದಿಕೆಯಲ್ಲಿದ್ದರು.
ಹಳ್ಳೂರ ಶಾಖಾ ವ್ಯವಸ್ಥಾಪಕ ಸಿ.ಬಿ. ಢವಳೇಶ್ವರ ಸ್ವಾಗತಿಸಿದರು, ಪ್ರಧಾನ ಕಚೇರಿ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ವಿ. ಬುದ್ನಿ ಪ್ರಾಸ್ತಾವಿಕ ಮಾತನಾಡಿ ಅಡಾವೆ ಪತ್ರಿಕೆ ಓದಿದರು, ಸಹಾಯಕ ವ್ಯವಸ್ಥಾಪಕ ಎಂ.ಬಿ. ಮಡಿವಾಳರ ನಿರೂಪಿಸಿದರು, ಬ್ಯಾಂಕ್ ಲೆಕ್ಕಾಧಿಕಾರಿ ಎಸ್.ಎಂ. ಹಿರೇಮಠ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ