Breaking News
Home / Recent Posts / ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ಮನವಿ -ಸಂಸದ ಈರಣ್ಣ ಕಡಾಡಿ

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ಮನವಿ -ಸಂಸದ ಈರಣ್ಣ ಕಡಾಡಿ

Spread the love

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ಮನವಿ -ಸಂಸದ ಈರಣ್ಣ ಕಡಾಡಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಸಲ್ಲಿಸಲಾಯಿತು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಜುಲೈ 30 ರಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿ, ರಾಜ್ಯದ ಸಂಸದರ ಜೊತೆ ನಡೆಸಿದ ಸಭೆಯ ನಂತರ ಭೇಟಿಯಾಗಿ ಗೋಕಾಕ ತಾಲೂಕು ಅತ್ಯಂತ ಜನನಿಬಿಡ ಮತ್ತು ಅತಿ ಹೆಚ್ಚು ವಾಹನ ಸಂಚಾರ ಹೊಂದಿರುವ ತಾಲೂಕು ಆಗಿದ್ದು, ಜತ್ತ ಜಾಂಬೋಟ ರಾಜ್ಯ ಹೆದ್ದಾರಿ-31 ರಲ್ಲಿ ಕಿ.ಮೀ 101.30 ರಲ್ಲಿ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಸಿದ ಸೇತುವೆಯು ಅತ್ಯಂತ ಪುರಾತನ ಸೇತುವೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸುರಿದ ಬಾರಿ ಮಳೆ ಹಾಗೂ ಪ್ರವಾಹದಿಂದಾಗಿ ಈ ಸೇತುವೆಯು ಶೀಥಿಲಗೊಂಡಿರುತ್ತದೆ. ಸೇತುವೆಯ ಮೇಲಿನಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ವಾಹನ ಸಂಚಾರ ಹೆಚ್ಚಳವಾಗಿದ್ದು, ಪ್ರಯಾಣಿಕರ ಹಿತದೃಷ್ಠಿಯಿಂದ ಆದಷ್ಟು ಬೇಗ ಲೋಳಸೂರ ಗ್ರಾಮದ ಹತ್ತಿರ ಹೊಸÀ ಸೇತುವೆ ನಿರ್ಮಿಸುವಂತೆ ಒತ್ತಾಯಿಸಲಾಯಿತು.

ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮುಖ್ಯಮಂತ್ರಿಗಳಿಗೆ ನೆನಪಿಸಿದರು. ಈ ಸಂದರ್ಭದಲ್ಲಿ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಧನಾತ್ಮಕವಾಗಿ ಸ್ಪಂಧಿಸಿದ್ದು ಅವರ ಜನ ಸಮಾನ್ಯರ ಕಾಳಜಿ ವೈಯಕ್ತಿವಾಗಿ ನನಗೆ ಸಂತಸ ಉಂಟು ಮಾಡಿದೆ ಎಂದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ