ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿ(ಪೇಟೆ ಗಣಪತಿ)ಯವರು ಇಲ್ಲಿಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಗ್ರಾಮದ ಮಾರುಕಟ್ಟೆ ಜಾಗೆಯಲ್ಲಿರುವ ಗಜಾನನ ವೇದಿಕೆಯ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು. ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಗಣಪತಿ ಮೂರ್ತಿಗೆ ಪೂಜೆ-ಪುನಸ್ಕಾರ …
Read More »ಮಲ್ಲಪ್ಪ ತಿಪ್ಪಣ್ಣ ಬೋಳಿ ನಿಧನ
ಮೂಡಲಗಿ: ಸ್ಥಳೀಯ ಚೆನ್ನಮ್ಮ ನಗರದ ನಿವಾಸಿ ಹಾಗೂ ಜೈನ್ ಸಮಾಜದ ಹಿರಿಯರಾದ ಮಲ್ಲಪ್ಪ ತಿಪ್ಪಣ್ಣ ಬೋಳಿ (72) ಇವರು ಬುಧವಾರ ಆ.27ರಂದು ನಿಧನರಾದರು. ಮೃತರು ಇಬ್ಬರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು ಬಳಗವನ್ನಗಲಿದ್ದಾರೆ.
Read More »‘ಅಕ್ಕಮಹಾದೇವಿ ವೈರಾಗ್ಯ, ಭಕ್ತಿಗೆ ಹೊಸ ಭಾಷೆ ಬರೆದ ಶರಣೆ’- ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ
ಮೂಡಲಗಿ: ‘ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಶರಣ ಚಳುವಳಿಯ ದಿಟ್ಟ ಶರಣೆಯಾಗಿ ಗುರುತಿಸಿಕೊಂಡಿದ್ದಳು’ ಎಂದು ಹಿಡಕಲ್ದ ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ ಹೇಳಿದರು. ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ಮಾಸಿಕ ಶಿವಾನುಭವ ಗೋಷ್ಠಿಂiÀಲ್ಲಿ ಅಕ್ಕಮಹಾದೇವಿ ಜೀವನ ಕುರಿತು ಉಪನ್ಯಾಸ ನೀಡಿದ ಅವರು ಲೌಕಿಕ ಜಗತ್ತನ್ನು ದಿಕ್ಕರಿಸಿ ವೈರಾಗ್ಯ ಮತ್ತು ಭಕ್ತಿಗೆ ಹೊಸ ಭಾಷೆ ಬರೆದ ಶರಣೆ ಎಂದರು. .ಸಾನ್ನಿಧ್ಯವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ …
Read More »ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳು
ಮೂಡಲಗಿ:- ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ2025-26ನೇ ಸಾಲಿನ ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟದ ಸ್ಪರ್ಧೆಗಳನ್ನು ಸೆ.29ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಜರುಗಿಸಲು ನಿರ್ಧರಿಸಲಾಗಿದ್ದು, ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.29ರಂದು ಬೆಳಿಗ್ಗೆ 9.00ಗಂಟೆಗೆ ಹಾಜರಿದ್ದು ವಿವಿದ ಸ್ಪರ್ದೆಯಲ್ಲಿ ಭಾಗವಹಿಸುವವರು ಕ್ಯೂ ಆರ್ ಕೋಡ್ ಅಥವಾ ವೆಬ್ ಸೈಟ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ ಎಂದು …
Read More »ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ
ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ ಬೆಟಗೇರಿ:ಮನುಷ್ಯನು ತಮಗೆ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಶರಣೆ ಕಸ್ತೂರೆವ್ವ ಸಂಗಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.26ರಂದು ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಹಬ್ಬ-ಹರಿದಿನಗಳು, ಜಾತ್ರಾಮಹೋತ್ಸವ, ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ. ಸ್ಥಳೀಯರು ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ …
Read More »ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳಿವೆ:ಈರಯ್ಯ ಹಿರೇಮಠ
ಬೆಟಗೇರಿ:ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆ.26ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ …
Read More »‘ರಕ್ತದಾನದಿಂದ ಜೀವ ಉಳಿಸಿದ ಸಾರ್ಥಕತೆ ಪ್ರಾಪ್ತಿ”- ರೇಖಾ ಅಕ್ಕನವರು
ಮೂಡಲಗಿ: ರಕ್ತದಾನವು ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ ಸಾರ್ಥಕತೆ ಪ್ರಾಪ್ತವಾಗುತ್ತದೆ” ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಸ್ಮರಣಾರ್ಥ ವಿಶ್ವ ಬಂದುತ್ವ ವಿಕಾಸ ಅಂಗವಾಗಿ ಮಹಾಲಿಂಗಪೂರದ ಡಾ. ವಿ.ಪಿ. ಕಣಕರಡ್ಡಿ ಮೆಮೊರಿಯಲ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಚ್ಚಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ …
Read More »ಸಿ.ಎಸ್.ನಿಂಗೇಗೌಡ. ನಿಧನ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಮಂಜುನಾಥ ನ್ಯೂ ಬೆಂಗಳೂರು ಅಯ್ಯಂಗಾರ ಬೇಕರಿ-ಸ್ವೀಟ್ಸ್ ಅಂಗಡಿ ಮಾಲೀಕ, ಹಾಸನ ಜಿಲ್ಲೆಯ ಚಿಕ್ಕಕಡಲೂರು ಮೂಲದ ಸಿ.ಎಸ್.ನಿಂಗೇಗೌಡ (74) ಇವರು ಶುಕ್ರವಾರ ಆ.22ರಂದು ನಿಧನರಾದರು. ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.
Read More »ಕನ್ನಡ ಸಾಹಿತ್ಯಕ್ಕೆ ಪ್ರೋ. ಜಿ ವೆಂಕಟಸುಬ್ಬಯ್ಯನವರ ಕೊಡುಗೆ ಅಪಾರ-ಶಿವಲಿಂಗ ದಾನನ್ನವರ
ಮುಡಲಗಿ : ಪ್ರೋ .ಜಿ ವೆಂಕಟಸುಬ್ಬಯ್ಯನವರು ಕನ್ನಡ ನಾಡಿಗೆ ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು. ಅವರು ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಲಯದಲ್ಲಿ ಸಿರಿ ಸಂಗಮ ಕನ್ನಡ ಸಾಹಿತ್ಯ ಬಳಗದಿಂದ ನಡೆದ ಪ್ರೋ .ಜಿ ವೆಂಕಟಸುಬ್ಬಯ್ಯನವರ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ನಡಕ್ಕಾಗಿ ದುಡಿದು ಮಡಿದವರ ಕಾರ್ಯಕ್ರದಲ್ಲಿ ಮಾತನಾಡಿ, ಪ್ರೋ. .ಜಿ ವೆಂಕಟಸುಬ್ಬಯ್ಯನವರು …
Read More »ಸಾಮಾಜಿಕವಾಗಿ ಕಾನೂನಾತ್ಮಕವಾಗಿ ಸಾಕಷ್ಟು ನ್ಯಾಯ ಮಹಿಳೆಯರಿಗೆ ಸಿಗವಂತಾಗಬೇಕಾಗಿದೆ : ಮುಖ್ಯೋಪಾದ್ಯಾಯಿನಿ ಗೀತಾ ಕರಗಣ್ಣಿ
ಮೂಡಲಗಿ : ಮಹಿಳೆಯರು ಸಮಾಜದಲ್ಲಿವಿರುವ ಅವಕಾಶಗಳನ್ನು ಸದುಪಯೋಗಪಡೆದುಕೊಳ್ಳಬೇಕು ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಿದ್ದು ಅವುಗಳ ಅರಿವು ಹೊಂದಿ ಸಾಮಾಜಿಕ ನ್ಯಾಯವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿ ಮಹಿಳಾ ಸಮಾಜ ಗುರ್ತಿಸಿಕೊಳ್ಳುವುದು ಅವಶ್ಯಕವಿದ್ದು ಇಂದು ಭಾರತೀಯ ಸಂವಿಧಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಆಧ್ಯತೆಗಳನ್ನು ನೀಡಿದ್ದು ಅವುಗಳ ಸದುಪಯೋಗ ಇಂದಿನ ಯುವಸಮುದಾಯದ ಮಹಿಳೆಯರು ಪಡೆದುಕೊಳ್ಳುವುದು ಅವಶ್ಯಕವಿದೆ ಎಂದು ಗುರ್ಲಾಪೂರದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಕರಗಣ್ಣಿ ಹೇಳಿದರು. ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, …
Read More »