ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಸಂಘದ ಅಧ್ಯಕ್ಷ ಮಹಾದೇವ ಕಂಬಿ ಅವರ ಅಧ್ಯಕ್ಷತೆಯಲ್ಲಿ ಸೆ.10ರಂದು ಮುಂಜಾನೆ 11ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ಕಾರ್ಯ ಚಟುವಟಿಕೆ, ವಾರ್ಷಿಕ ವರದಿ, ಸನ್ 2024-25ನೇ ಸಾಲಿನ ನಿವ್ಹಳ ಲಾಭದ ವಿಭಾಗಣೆ, ಇತರೆ ಸಹಕಾರ ಸಂಘಗಳಲ್ಲಿ ಸಂಘದ ಸದಸ್ಯತ್ವದ ಅನುಮೋದನೆ ಸೇರಿದಂತೆ 27 ವಿಷಯಗಳ …
Read More »ಗುರುವಿನ ಮಾತಿನ ಶಕ್ತಿಯಿಂದ ಮನುಷ್ಯನ ದು:ಖ ದೂರ: ಅಸುಂಡಿ ಡಾ.ನೀಲಮ್ಮ ತಾಯಿ ಬೆಟಗೇರಿಯಲ್ಲಿ 41ನೇ ಸತ್ಸಂಗ ಸಮ್ಮೇಳನ ಸಮಾರೂಪ *
ಬೆಟಗೇರಿ:ಮನುಷ್ಯನ ಮನಸಿನ ತಾಪವನ್ನು ಕಡಿಮೆ ಶಕ್ತಿ ಗುರುವಿನ ಮಾತಿನಿಂದ ಸಾಧ್ಯ. ಮಾನವ ಸದ್ಗುರುವಿನ ಮಾತನ್ನು ಸದಾ ಪಾಲಿಸಿ ತನ್ನ ಬದುಕಿನಲ್ಲಿ ನಡೆದರೆ ಒಳ್ಳೆಯದಾಗುತ್ತದೆ ಎಂದು ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ) ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 41ನೇ ಸತ್ಸಂಗ ಸಮ್ಮೇಳನದ ಪ್ರಯುಕ್ತ ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಆ.28ರಂದು ನಡೆದ ಸಮಾರೂಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ …
Read More »ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು: ಡಾ.ಶಿವಾನಂದ ಭಾರತಿ ಶ್ರೀಗಳು
ಬೆಟಗೇರಿ:ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು. ತಮ್ಮ ಗಳಿಕೆಯ ಸಾಮಥ್ರ್ಯಕ್ಕೆ ಅನುಗುಣವಾಗಿ ಸತ್ಕಾರ್ಯಗಳಿಗೆ ದಾನ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಆ.27ರಂದು ನಡೆದ 41ನೇ ಸತ್ಸಂಗ ಸಮ್ಮೇಳನÀದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗೆ ಇದೆ. ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕಾದರೆ …
Read More »ಬೆಟಗೇರಿ ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ
ಬೆಟಗೇರಿ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಶ್ರೀವಿನಾಯಕ ಮಿತ್ರ ಮಂಡಳಿಯವರು ಇಲ್ಲಿಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಇಲ್ಲಿಯ ಗ್ರಾಮದೇವÀತೆ ದ್ಯಾಮವ್ವದೇವಿ ದೇವಾಲಯ ಹತ್ತಿರ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು. ಶ್ರೀ ವಿನಾಯಕ ಮಿತ್ರ ಮಂಡಳಿಯವರು ಸ್ಥಳೀಯ ಪ್ರಮುಖ ಬೀದಿಗಳ ಮೂಲಕ ಗಣಪತಿ …
Read More »ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ
ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿ(ಪೇಟೆ ಗಣಪತಿ)ಯವರು ಇಲ್ಲಿಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಗ್ರಾಮದ ಮಾರುಕಟ್ಟೆ ಜಾಗೆಯಲ್ಲಿರುವ ಗಜಾನನ ವೇದಿಕೆಯ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು. ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಗಣಪತಿ ಮೂರ್ತಿಗೆ ಪೂಜೆ-ಪುನಸ್ಕಾರ …
Read More »ಮಲ್ಲಪ್ಪ ತಿಪ್ಪಣ್ಣ ಬೋಳಿ ನಿಧನ
ಮೂಡಲಗಿ: ಸ್ಥಳೀಯ ಚೆನ್ನಮ್ಮ ನಗರದ ನಿವಾಸಿ ಹಾಗೂ ಜೈನ್ ಸಮಾಜದ ಹಿರಿಯರಾದ ಮಲ್ಲಪ್ಪ ತಿಪ್ಪಣ್ಣ ಬೋಳಿ (72) ಇವರು ಬುಧವಾರ ಆ.27ರಂದು ನಿಧನರಾದರು. ಮೃತರು ಇಬ್ಬರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು ಬಳಗವನ್ನಗಲಿದ್ದಾರೆ.
Read More »‘ಅಕ್ಕಮಹಾದೇವಿ ವೈರಾಗ್ಯ, ಭಕ್ತಿಗೆ ಹೊಸ ಭಾಷೆ ಬರೆದ ಶರಣೆ’- ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ
ಮೂಡಲಗಿ: ‘ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಶರಣ ಚಳುವಳಿಯ ದಿಟ್ಟ ಶರಣೆಯಾಗಿ ಗುರುತಿಸಿಕೊಂಡಿದ್ದಳು’ ಎಂದು ಹಿಡಕಲ್‍ದ ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ ಹೇಳಿದರು. ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ಮಾಸಿಕ ಶಿವಾನುಭವ ಗೋಷ್ಠಿಂiÀಲ್ಲಿ ಅಕ್ಕಮಹಾದೇವಿ ಜೀವನ ಕುರಿತು ಉಪನ್ಯಾಸ ನೀಡಿದ ಅವರು ಲೌಕಿಕ ಜಗತ್ತನ್ನು ದಿಕ್ಕರಿಸಿ ವೈರಾಗ್ಯ ಮತ್ತು ಭಕ್ತಿಗೆ ಹೊಸ ಭಾಷೆ ಬರೆದ ಶರಣೆ ಎಂದರು. .ಸಾನ್ನಿಧ್ಯವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ …
Read More »ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳು
ಮೂಡಲಗಿ:- ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ2025-26ನೇ ಸಾಲಿನ ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟದ ಸ್ಪರ್ಧೆಗಳನ್ನು ಸೆ.29ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಜರುಗಿಸಲು ನಿರ್ಧರಿಸಲಾಗಿದ್ದು, ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.29ರಂದು ಬೆಳಿಗ್ಗೆ 9.00ಗಂಟೆಗೆ ಹಾಜರಿದ್ದು ವಿವಿದ ಸ್ಪರ್ದೆಯಲ್ಲಿ ಭಾಗವಹಿಸುವವರು ಕ್ಯೂ ಆರ್ ಕೋಡ್ ಅಥವಾ ವೆಬ್ ಸೈಟ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ ಎಂದು …
Read More »ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ
ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ ಬೆಟಗೇರಿ:ಮನುಷ್ಯನು ತಮಗೆ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಶರಣೆ ಕಸ್ತೂರೆವ್ವ ಸಂಗಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.26ರಂದು ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಹಬ್ಬ-ಹರಿದಿನಗಳು, ಜಾತ್ರಾಮಹೋತ್ಸವ, ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ. ಸ್ಥಳೀಯರು ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ …
Read More »ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳಿವೆ:ಈರಯ್ಯ ಹಿರೇಮಠ
ಬೆಟಗೇರಿ:ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆ.26ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ …
Read More »