Breaking News
Home / ತಾಲ್ಲೂಕು / ಶ್ರೀ ಗಳ ಅಗಲಿಕೆಗೆ ಸಂತಾಪ ಸೂಚಿಸಿದ ಶ್ರೀನಾಥ ಕರಿಹೋಳಿ

ಶ್ರೀ ಗಳ ಅಗಲಿಕೆಗೆ ಸಂತಾಪ ಸೂಚಿಸಿದ ಶ್ರೀನಾಥ ಕರಿಹೋಳಿ

Spread the love

ಮೂಡಲಗಿ ಶ್ರೀ ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರು ರವಿವಾರ ರಾತ್ರಿ ನಿಧನರಾದರು.

ಶ್ರೀ ಮಠದ ಏಳ್ಗೆ ಹಾಗೂ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದರು. ಜೊತೆಗೆ ಶ್ರೀ ಮಠದ ಭಾವೈಕ್ಯತೆ ಮತ್ತು ಪರಂಪರೆಯನ್ನು ಪೂಜ್ಯರು ಯಥಾವತ್ತಾಗಿ ನಡೆಸಿಕೊಂಡು ಬಂದಿದ್ದರು. ಎಲ್ಲ ಸಮುದಾಯದವರನ್ನು ಒಂದೇ ಭಾವದಿಂದ ನೋಡಿಕೊಳ್ಳುತ್ತಿದ್ದರು.

ಸರಳ, ಸಜ್ಜನದ ಸಾಕಾರಮೂರ್ತಿಗೆ ಹೆಸರಾಗಿದ್ದರು. ಪೂಜ್ಯರ ಐಕ್ಯಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ. ಪೂಜ್ಯರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುವುದಾಗಿ ಶ್ರೀ ಡಿ ಕೆ ಶಿವಕುಮಾರ್ ಅಸೋಸಿಯೇಷನ್ ಬೆಳಗಾವಿ ಜಿಲ್ಲಾಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರಾದ ಶ್ರೀನಾಥ ಕರಿಹೋಳಿ ಅವರು ಶ್ರೀ ಗಳ ಅಗಲಿಕೆಗೆ ಸಂತಾಪ ಸೂಚಿಸಿದರು.


Spread the love

About inmudalgi

Check Also

‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

Spread the loveಮೂಡಲಗಿ: ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ