Breaking News
Home / ಬೆಳಗಾವಿ / *ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the love

ಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.!
*ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತ
*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ
ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

ಬೆಟಗೇರಿ: ವರದಿ: ಅಡಿವೇಶ ಮುಧೋಳ.
ಬೆಟಗೇರಿ: ರಾಜ್ಯಾದ್ಯಂತ ಜೂನ್ 1ರಂದು 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳು ಪುನರಾರಂಭಗೊಳ್ಳಿರುವ ಹಿನ್ನಲೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಹಿರಿಯ ಮತ್ತು ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಮೇ.30 ಮತ್ತು ಮೇ.31ರಂದು ಶಾಲಾ ಮಕ್ಕಳ ಬರಮಾಡಿಕೊಳ್ಳಲು ಸ್ವಚ್ಛತಾ ಕಾರ್ಯ ಸೇರಿದಂತೆ ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ ನಡೆದಿದೆ
ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಬೆಟಗೇರಿ, ಬಿಲಕುಂದಿ, ತಪಸಿ, ಕೆಮ್ಮನಕೋಲ, ನಿಂಗಾಪೂರ, ಬಗರನಾಳ ಸೇರಿದಂತೆ ಎಲ್ಲ ಸರ್ಕಾರಿ ಹಿರಿಯ ಹಾಗೂ ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ,
ಬಿಸಿಯೂಟದ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಚಗೊಳಿಸುವ ಕಾರ್ಯ ನಡೆದಿದೆ. ಶಾಲಾ ಮಕ್ಕಳ ಬರಮಾಡಿಕೊಳ್ಳುವ ಹಾಗೂ ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ದತೆ ಜರುಗಿದೆ.
ಶಾಲೆಯ ಪ್ರವೇಶ ದ್ವಾರ, ತರಗತಿ ಕೊಠಡಿಗಳ ಅಲಂಕಾಲ ಸೇರಿದಂತೆ ಶಾಲಾ ಆವರಣದ ಪ್ರಮುಖ ಸ್ಥಳಗಳಲ್ಲಿ ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಕೆಲಸ ಭರದಿಂದ ಸಾಗಿದೆ. ಶಾಲಾ ಮಕ್ಕಳಿಗೆ ಹೂ ನೀಡಿ ಸಿಹಿ ಹಂಚುವ ಮೂಲಕ ಶಾಲೆಗೆ ಶಿಕ್ಷಕರು ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆದ ಬಳಿಕ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಿದ್ದಾರೆ ಎಂದು ಬೆಟಗೇರಿ ಸಿಆರ್‍ಸಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಎಮ್.ಬಿ.ನಾಯ್ಕರ ತಿಳಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ

Spread the loveಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ