ಬೆಟಗೇರಿ ಕ್ಲಸ್ಟರ್ ವಲಯದ ಸರ್ಕಾರಿ ಪ್ರೌಢ
ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ರಾಜ್ಯಾದ್ಯಂತ ಜೂನ್ 1ರಂದು 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳು
ಪುನರಾರಂಭಗೊಳ್ಳಿರುವ ಹಿನ್ನಲೆಯಲ್ಲಿ ಮೂಡಲಗಿ
ಶೈಕ್ಷಣಿಕ ವಲಯದ ಬೆಟಗೇರಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮೇ.30 ಮತ್ತು ಮೇ.31ರಂದು ಶಾಲಾ ಮಕ್ಕಳ ಬರಮಾಡಿಕೊಳ್ಳಲು ಸ್ವಚ್ಛತಾ ಕಾರ್ಯ ಸೇರಿದಂತೆ ಸಕಲ ಸಿದ್ಧತೆ ನಡೆದಿದೆ.
ಬೆಟಗೇರಿ ಕ್ಲಸ್ಟರ್ ವ್ಯಾಪ್ತಿಯ ಬೆಟಗೇರಿ, ಬಿಲಕುಂದಿ, ಗೋಸಬಾಳ ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟದ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಚಗೊಳಿಸುವ ಕಾರ್ಯ ನಡೆದು ಶಾಲಾ ಮಕ್ಕಳ ಬರಮಾಡಿಕೊಳ್ಳಲು ಸಕಲ ಸಿದ್ಧತೆ ಜರುಗಿದೆ.
ಶಾಲೆಯ ಪ್ರವೇಶ ದ್ವಾರ, ತರಗತಿ ಕೊಠಡಿಗಳ ಅಲಂಕಾಲ ಸೇರಿದಂತೆ ಶಾಲಾ ಆವರಣದ ಪ್ರಮುಖ ಸ್ಥಳಗಳಲ್ಲಿ ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಕೆಲಸ ಭರದಿಂದ ಸಾಗಿದೆ. ಶಾಲಾ ಮಕ್ಕಳಿಗೆ ಹೂ ನೀಡಿ ಮತ್ತು ಸಿಹಿ ಹಂಚುವ ಮೂಲಕ ಶಾಲೆಗೆ ಶಿಕ್ಷಕರು ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಸೇರಿದಂತೆ ಶಾಲೆಯ ಸಮಗ್ರ ಪ್ರಗತಿಗೆ ಹಲವು ವಿಷಯಗಳ ಕುರಿತು ಶಾಲೆಯ ಶಿಕ್ಷಕರೊಂದಿಗೆ ಮುಖ್ಯೋಪಾಧ್ಯಯರು ಮೇ.30 ರಂದು ಶಾಲೆಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಚರ್ಚಿಸಲಾಗಿz.É ಪ್ರಸಕ್ತ ಸಾಲಿನ ಶಾಲೆಯ ಎಲ್ಲ ಮಕ್ಕಳಿಗೆಮತ್ತು ಪಾಲಕರಿಗೆ ಮಾವಿನ ಹಣ್ಣು ಸಿಕರಣೆ ವಿಶೇಷ ಊಟದವ್ಯವಸ್ಥೆಯೊಂದಿಗೆ ಪ್ರಸಕ್ತ ಶಾಲಾ ಪ್ರಾರಂಭೋತ್ಸವವನ್ನುಅದ್ಧೂರಿಯಾಗಿ ಮಾಡಲಾಗುವುದು ಎಂದು ಬೆಟಗೇರಿ ವಿವಿಡಿ
ಸರ್ಕಾರಿಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ
ಅಳಗುಂಡಿ ತಿಳಿಸಿದ್ದಾರೆ.
.
IN MUDALGI Latest Kannada News