Breaking News
Home / ಬೆಳಗಾವಿ / ಬೆಟಗೇರಿಯಲ್ಲಿ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆ

ಬೆಟಗೇರಿಯಲ್ಲಿ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ತ್ಯಾಗ ಬಲಿದಾನ ಹಾಗೂ ಸಹೋದರತ್ವದ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವನ್ನು ಮೇ.28ರಂದು ಸ್ಥಳೀಯ ಮುಸ್ಲಿಂ ಸಮುದಾಯದವರು ಭಕ್ತಿಭಾವ, ಸಂಭ್ರಮದಿಂದ ಆಚರಿಸಿದರು.

ಇಲ್ಲಿಯ ಮುಸ್ಲಿಂ ಸಮಾಜದವರು ಬಕ್ರೀದ್ ಹಬ್ಬದ ಪ್ರಯುಕ್ತ ಮೇ.28ರಂದು ಮುಂಜಾನೆ 8:30 ಗಂಟೆಗೆ ಅಲ್ಲಾನ ನಾಮಸ್ಮರಣೆ ಮಾಡುತ್ತಾ ಸ್ಥಳೀಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸರ್ವರಿಗೂ ಶಾಂತಿ, ಸೌಹಾರ್ದತೆ ಹಾಗೂ ನೆಮ್ಮದಿ ಮತ್ತು ಸಮೃದ್ಧಿ ದಯಪಾಲಿಸಲಿ ಎಂದು ಬೇಡಿಕೊಂಡ ಬಳಿಕ ಒಬ್ಬರಿಗೊಬ್ಬರೂ ಪರಸ್ಪರ ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಬಕ್ರೀದ್ ಹಬ್ಬದ ಪ್ರಯುಕ್ತ ಬೆಟಗೇರಿ ಗ್ರಾಮದ ಮುಸ್ಲಿಂ
ಸಮಾಜದ ಹಿರಿಯರು, ಯುವಕರು ಮತ್ತು ಮಕ್ಕಳು ಹೊಸ ವಸ್ತ್ರ ಧರಿಸಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಮೌಲಾನಾ ನಿಯಾಜ್ ರಾಜೇಖಾನ್, ರಫೀಕ ಮಿರ್ಜಾನಾಯ್ಕ, ಕುತುಬುಸಾಬ ಮಿರ್ಜಾನಾಯ್ಕ, ಜಬ್ಬರ್‍ಸಾಬ ನದಾಫ್, ಬಾಬುಸಾಬ ಮಿರ್ಜಾನಾಯ್ಕ, ಮೀರಾಸಾಬ ನದಾಫ್, ಹಜರತ್ ಮಿರ್ಜಾನಾಯ್ಕ, ಮಲಿಕಸಾಬ ಮಿರ್ಜಾನಾಯ್ಕ, ಶ್ಯಾನೂರ ಮಿರ್ಜಾನಾಯ್ಕ ಸೇರಿದಂತೆ ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡರು, ಹಿರಿಯರು, ಯುವಕರು, ಮಕ್ಕಳು ಇದ್ದರು.


Spread the love

About inmudalgi

Check Also

ರಕ್ಷಾ ಬಂಧನ ಹಬ್ಬದ ಸಡಗರ ಸಂಭ್ರಮ

Spread the loveಬೆಟಗೇರಿ: ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಶುಕ್ರವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ