Breaking News
Home / ತಾಲ್ಲೂಕು (page 195)

ತಾಲ್ಲೂಕು

ಲಾಕ್ ಡೌನ್ ಕೆಲಸದಿಂದ ವಂಚಿತ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಮೂಡಲಗಿ: ರಾಜ್ಯವು ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದು,ಸೇವೆಯೇ ಸಂಘಟನೆ ಅಡಿಯಲ್ಲಿ ಕೊರೊನಾ ಪೀಡಿತ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಲಾಕ್ ಡೌನ್ ಕೆಲಸದಿಂದ ವಂಚಿತ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ್ ಪಾಟೀಲ್ ಹೇಳಿದರು. ಅವರು ರವಿವಾರದಂದು ಮೂಡಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕೋವಿಡ್ ಸೊಂಕಿತ ಹಣ್ಣು ಹಂಪಲು ವಿತರಿಸಲು ಆಸ್ಪತ್ರೆಯ ಸಿಬ್ಬಂದಿಗೆ ಹಣ್ಣುಗಳನ್ನು ಹಸ್ತಾ0ತರಿಸುತ್ತ ಮಾತನಾಡಿ, ದೇಶದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ …

Read More »

ಬನವಾಸಿ ಬಿಜೆಪಿ ರೈತ ಮೋರ್ಚಾದಿಂದ ಸೇವಾ ದಿವಸ್ ಆಚರಣೆ

ಬನವಾಸಿ ಬಿಜೆಪಿ ರೈತ ಮೋರ್ಚಾದಿಂದ ಸೇವಾ ದಿವಸ್ ಆಚರಣೆ ಬನವಾಸಿ: ಕೇಂದ್ರ ಸರ್ಕಾರ ಎರಡನೇ ಅವಧಿ ಅಧಿಕಾರ ಹಿಡಿದು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಬನವಾಸಿ ಬಿಜೆಪಿ ರೈತ ಮೋರ್ಚಾದಿಂದ ಭಾನುವಾರ ಸೇವಾ ದಿವಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿಮಿತ್ಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ವನಮಹೋತ್ಸವ ಹಾಗೂ ಕೊರೊನಾ ವಾರಿಯರ್ಸ್‍ಗೆ ಮಾಸ್ಕ್ ಹ್ಯಾಂಡ್ ಸ್ಯಾನಿಟೈಜರ್ ವಿತರಿಸಲಾಯಿತು. ಬನವಾಸಿ ಪೊಲೀಸ್ ಠಾಣೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷೆ …

Read More »

ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4. ಲಕ್ಷ ರೂ ವಿಮೆ

ಮೂಡಲಗಿ: ವಿಶ್ವಮಾನ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡನೆಯ ಅವಧಿಯ ಎರಡು ವರ್ಷಗಳನ್ನು ಪೂರೈಸಿದ ಈ ಸಮಯದಲ್ಲಿ ಕರೋನಾ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಪಂಚಾಯತ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4. ಲಕ್ಷ ರೂ ವಿಮೆಗೆ ಒಳಪಡಿಸುವ …

Read More »

ಜನತೆಯ ಕಷ್ಟಕ್ಕಾಗದ ವಿಧಾನ ಪರಿಷತನ ಸದಸ್ಯರು ತಾಲೂಕಿಗೆ ಭೇಟಿ ನೀಡದ ಹಿನ್ನೆಲೆ ಬೇಸರ ವ್ಯಕ್ತಪಡಿಸುತ್ತಿರುವ ಜನರು

ಮೂಡಲಗಿ : ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಎರಡನೇ ಅಲೆಯ ಆರ್ಭಟ ಮುಂದುವರೆದಿದ್ದು, ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರ ಜೂನ್ 7 ರವರೆಗೂ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಒಂದು ಕಡೆ ಕೊರೋನಾ ಸೋಂಕಿನಿಂದ ಅನೇಕರು ಬಲಿಯಾಗುತ್ತಿದ್ದು, ಸೋಂಕಿತ ಬಡಪಾಯಿಗಳು ಸರಿಯಾದ ವ್ಯಾಪಾರ, ವೈಹಿವಾಟು ಸ್ಥಗಿತದಿಂದಾಗಿ ತೀವೃ ಆರ್ಥಿಕ ಸಂಕಷ್ಟವನ್ನು ಜನ ಸಾಮಾನ್ಯರು ಎದುರಿಸುತ್ತಿದ್ದಾರೆ. ಮೂಡಲಗಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ …

Read More »

ವಿಡಿಯೋ ಸಂವಾದ ಭಾಗವಹಿಸಿ ಮಾತನಾಡಿದ ಈರಣ್ಣ ಕಡಾಡಿ

ಗೋಕಾಕ: ಕರೋನಾ ಸೊಂಕಿಗೆ ತುತ್ತಾದ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಆಸ್ಪತ್ರೆಗಳು ಸಂಬಂಧಿಸಿದವರಿಂದ ಚಿಕಿತ್ಸೆ ವೆಚ್ಚವನ್ನು ಬರಿಸಿಕೊಂಡಿದ್ದಾರೆ. ಸದರಿ ಹಣವನ್ನು ಆಯುಷ್ಯಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸಂದಾಯ ಮಾಡಬೇಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ, ಇದರಿಂದ ಬಡಜನರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶನಿವಾರ ಮೇ 29 …

Read More »

ಕೃಷಿ ಕಾಯಕ ಮಾತ್ರ ನಿಂತಿಲ್ಲ, ನಿಜಕ್ಕೂ ರೈತರು ಅಭಿನಂದನಾರ್ಹರು – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ: ಕಳೆದ ಒಂದು ವರ್ಷದಿಂದ ಕರೋನಾ ಮಹಾಮಾರಿಯ ಅಟ್ಟಹಾಸಕ್ಕೆ ನಲುಗಿದ ದೇಶ ಅನಿವಾರ್ಯವಾಗಿ 2 ಭಾರಿ ಲಾಕ್‍ಡೌನ್ ಮಾಡಬೇಕಾಯಿತು. ಇದರ ಪರಿಣಾಮ ಉದ್ಯಮಗಳು, ವಿಮಾನ, ರೈಲು, ಬಸ್, ಟ್ರಕ್ ಸೇರಿದಂತೆ ಸಾರಿಗೆ ವ್ಯವಸ್ಥೆ, ಹೊಟೇಲ್‍ಗಳು, ಚಿತ್ರಮಂದಿರಗಳು, ಮಾಲ್‍ಗಳು, ಮದುವೆ, ಜಾತ್ರೆ ಒಟ್ಟಿನಲ್ಲಿ ದೇಶದ ಎಲ್ಲಾ ವ್ಯವಹಾರಗಳು ನಿಂತು ಹೋದವು, ಆದರೆ ಕರೋನಾ ಹಿಮ್ಮೆಟ್ಟಿಸಿ ಪ್ರತಿ ವರ್ಷಕ್ಕಿಂತ ಶೇ 10 ರಷ್ಟು ಹೆಚ್ಚು ಉತ್ಪಾದನೆ ಮಾಡಿದ ಅನ್ನದಾತನ ಕೃಷಿ ಕಾಯಕ ಮಾತ್ರ …

Read More »

ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ

ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ ಗೋಕಾಕ: ನಗರದ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರಗಳಾದ ಗೋಕಾಕ, ಅರಭಾವಿ, ಕೌಜಲಗಿ ಹಾಗೂ ಬೀಜ ಮಾರಾಟ ಕೇಂದ್ರಗಳ ಜೊತೆಗೆ …

Read More »

ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರಿಂದ ರಕ್ತದಾನ-ಸಂಸದ ಈರಣ್ಣ ಕಡಾಡಿ ಚಾಲನೆ

ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರಿಂದ ರಕ್ತದಾನ-ಸಂಸದ ಈರಣ್ಣ ಕಡಾಡಿ ಚಾಲನೆ ಗೋಕಾಕ: ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಗೋಕಾಕ ನಗರದ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದಾನ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಚಾಲನೆ ನೀಡಿದರು. ಶನಿವಾರ ಮೇ 29 ರಂದು ನಗರದ ರೋಟರಿ ಕ್ಲಬ್‍ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು …

Read More »

ವಡೇರಹಟ್ಟಿ ಗ್ರಾಮದಲ್ಲಿ ಕೊರೋನಾ ಪರೀಕ್ಷೆ

ವಡೇರಹಟ್ಟಿ ಗ್ರಾಮದಲ್ಲಿ ಕೊರೋನಾ ಪರೀಕ್ಷೆ ಜರುಗಿತು. ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೊರೋನಾ ಪರೀಕ್ಷೆ ಜರುಗಿತು. ಆರೋಗ್ಯ ಇಲಾಖೆಯ ಮಹಿಳಾ ಕಿರಿಯ ಸಹಾಯಕಿ ಪಿ.ಎಫ್.ಕೋಲಕಾರ ಮಾತನಾಡಿ, ಕೋರೋನ ಮಹಾಮಾರಿ ರೋಗಕ್ಕೆ ಹೇದುರುವ ಅವಶ್ಯಕತೆ ಇಲ್ಲ, ಕೊರೋನಾ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮನೆಯಲ್ಲಿ ಅನುಸರಿಸಬೇಕು, ಒಂದು ವೇಳೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಕ್ಷಣಗಳ ಅನುಗನವಾಗಿ ವೈಧ್ಯಕೀಯ …

Read More »

ಯಾದವಾಡ ಕೋವಿಡ್ ಆರೈಕೆ ಕೇಂದ್ರಕ್ಕೆ ಆಹಾರ ಸಾಮಗ್ರಿ ವಿತರಣೆ

ಯಾದವಾಡ ಕೋವಿಡ್ ಆರೈಕೆ ಕೇಂದ್ರಕ್ಕೆ ಆಹಾರ ಸಾಮಗ್ರಿ ವಿತರಣೆ ಮೂಡಲಗಿ: ತಾಲೂಕಿನ ಯಾದವಾಡ ಕೋವಿಡ್ ಆರೈಕೆ ಕೆಂದ್ರಕ್ಕೆ ಯಾದವಾಡ ಜಿ.ಪಂ ಸದಸ್ಯ ಗೊವಿಂದ ಕೊಪ್ಪದ ಮತ್ತು ಭಾರತ ಫೌಂಡೇಶ್‍ನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯಿಂದ ಆಹಾರ ಉಪಹಾರ ಮತ್ತು ಊಟದ ಸಾಮಗ್ರಿಗಳನ್ನು ಕೇಂದ್ರದ ಸಿಬ್ಬಂದಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಯಲ್ಲಪ್ಪಗೌಡ ನ್ಯಾಮಗೌಡ, ರಾಜುಗೌಡ ಪಾಟೀಲ, ಕುಬೇರ ದಾಸರ, ಬಸವರಾಜ ಭೂತಾಳಿ, ಶಿವನಗೌಡ ಪಾಟೀಲ್, …

Read More »