Breaking News
Home / ತಾಲ್ಲೂಕು (page 234)

ತಾಲ್ಲೂಕು

ಬನವಾಸಿ ಗ್ರಾಮ ಪಂಚಾಯಿತಿ ಚುನಾವಣೆಗೆ 80 ನಾಮಪತ್ರ ಸಲ್ಲಿಕೆ

ಬನವಾಸಿ ಗ್ರಾಮ ಪಂಚಾಯಿತಿ ಚುನಾವಣೆಗೆ 80 ನಾಮಪತ್ರ ಸಲ್ಲಿಕೆ ಬನವಾಸಿ: ಬನವಾಸಿ ಗ್ರಾಮ ಪಂಚಾಯಿತಿಯ 5ವಾರ್ಡ್‍ಗಳ 18ಸ್ಥಾನಕ್ಕೆ 80 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬನವಾಸಿ ಗ್ರಾಮ ಪಂಚಾಯಿತಿಯ ಚುನಾವಣಾ ಅಧಿಕಾರಿ ದತ್ತತ್ರೇ ಭಟ್ಟ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರದಂದು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬನವಾಸಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 1ರಲ್ಲಿ 17 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 2ರಲ್ಲಿ 10 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ …

Read More »

ಡಿ. 19ರಿಂದ ಉಚಿತ ಯೋಗ ಶಿಬಿರ

ಡಿ. 19ರಿಂದ ಉಚಿತ ಯೋಗ ಶಿಬಿರ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮಹಾಲಿಂಗಪೂರದ ಮೈಂಡ್ ಸೈನ್ಸ್ ಫೌಂಡೇಶನ ಇವರ ಸಹಯೋಗದಲ್ಲಿ ದೇಹ, ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಪುರುಷ ಮತ್ತು ಮಹಿಳೆಯರಿಗೆ ‘ಬಸವ ಚೈತನ್ಯ ಉಚಿತ ಯೋಗ ಶಿಬಿರ’ವನ್ನು ಡಿ. 19ರಿಂದ ಡಿ. 23ರ ವರೆಗೆ 5 ದಿನಗಳ ಬೆಳಿಗ್ಗೆ 6ರಿಂದ ಬೆಳಿಗ್ಗೆ 8 ಗಂಟೆ ವರೆಗೆ ಸ್ಥಳೀಯ ಶ್ರೀ ಶಿವಬೋಧರಂಗ ಕೋ.ಆಪ್.ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಏರ್ಪಡಿಸಿರುವರು. ಅಧಿಕ ರಕ್ತದೊತ್ತಡ, …

Read More »

ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಪ್ರಥಮ

ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಪ್ರಥಮ ಮೂಡಲಗಿ : ನವೆಂಬರ್ 1 ರಾಜ್ಯೋತ್ಸವ ದಿನದ ನಿಮಿತ್ತವಾಗಿ ಖಾಸಗಿ ಸುದ್ದಿ ವಾಹಿನಿಯಾದ ವಿಜಯ ಟೈಮ್ಸ್ ಆಯೋಜಿಸಿದ್ದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಅವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ವಿಜಯ ಟೈಮ್ಸ್ ಮುಖ್ಯಸ್ಥರಾದ ವಿಜಯಲಕ್ಷ್ಮೀ ಶಿಬರೂರ ಮಂಜುನಾಥ ಅವರಿಗೆ ಬಹುಮಾನ ವಿತರಿಸಿ ಶುಭ ಕೋರಿದ್ದಾರೆ.

Read More »

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ ಮೂಡಲಗಿ: ಮೂಡಲಗಿಯ ಶಿವಾನಂದ ಜಿ. ಮುರಗೋಡ ಅವರನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಸದಸ್ಯರನ್ನಾಗಿ ರಾಜ್ಯ ಸಂಚಾಲಕ ಭಗವಂತ ಖೂಬಾ ಅವರು ನೇಮಕ ಮಡಿದ್ದಾರೆ. ಬೆಳಗಾವಿ ವಿಭಾಗದ 5 ಜಿಲ್ಲೆಗಳ ಜವಾಬ್ದಾರಿಯನ್ನು ಮುರಗೋಡ ಅವರಿಗೆ ನೀಡಲಾಗಿದೆ ಎಂದು ಅವರ ನೇಮಕ ಆದೇಶದಲ್ಲಿ ತಿಳಿಸಿದ್ದಾರೆ.

Read More »

ಅಂಗವಿಕಲರು ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ – ಸಿದ್ದಣ್ಣ ದುರದುಂಡಿ

ಮೂಡಲಗಿ: ಅಂಗವಿಕಲರು ಈ ಸಮಾಜದಲ್ಲಿ ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಅವರಿಗೆ ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ  ನೆಹರು ಯುವ ಕೇಂದ್ರ ಬೆಳಗಾವಿ, ಜನನಿ ಸಮಗ್ರ ಅಭಿವ್ರದ್ದಿ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕರ ಗ್ರಾಮಿಣ ಅಭಿವ್ರದ್ದಿ ಸಂಘ ಹಳ್ಳೂರ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಇವುಗಳ …

Read More »

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು:ಶಾಸಕ ಬಾಲಚಂದ್ರ ಜಾರಕಿಹೊಳಿ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು:ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ …

Read More »

ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಸುರೇಶ ನಾಯ್ಕ ಆಯ್ಕೆ

ಮೂಡಲಗಿ: ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಸಮೀಪದ ಪಟಗುಂದಿ ಗ್ರಾಮದ ಸುರೇಶ ಕಲ್ಲಪ್ಪ ನಾಯ್ಕ ಅವರನ್ನು ಆಯ್ಕೆಗೋಳಿಸಿ ರಾಜ್ಯಾಧ್ಯಕ್ಷ ಗುಡ್ಡೆಗೌಡರು ನೇಮಕಗೋಳಿಸಿ ಆದೇಶ ಹೊರಡಿಸಿದ್ದಾರೆ. ಗುರುತರವಾಗಿ ಜವಾಬ್ದಾರಿ ವಹಿಸಿಕೊಂಡು ಸಂಘಟನೆಯ ಎಲ್ಲ ಮುಖಂಡರನ್ನು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು. ರೈತರ ಏಳ್ಗೆಗಾಗಿ ನಿಸ್ಪಕ್ಷಪಾಥವಾಗಿ ಶ್ರಮವಹಿಸಬೇಕು. ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ನಂಬಿಕೆಯ ರೀತಿಯಲ್ಲಿ ಕಾರ್ಯನಿರ್ವಹಿಸ ಬೇಕು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

Read More »

ಶಿಕ್ಷಕರು ಮತ್ತು ಇಲಾಖೆಯ ಸಂಪರ್ಕದ ಕೊಂಡಿಯಾಗಿ ಶಿಕ್ಷಕರ ಸಂಘ ಶ್ರಮಿಸಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಶಿಕ್ಷಕರು ಮತ್ತು ಇಲಾಖೆಯ ಸಂಪರ್ಕದ ಕೊಂಡಿಯಾಗಿ ಶಿಕ್ಷಕರ ಸಂಘ ಶ್ರಮಿಸಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಕೊಂಡಿಯಾಗಿ ಶಿಕ್ಷಕರ ಸಂಘದ ಪ್ರತಿನಿಧಿಗಳು ಕರ್ತವ್ಯನಿರ್ವಹಿಸುವಂತೆ ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ …

Read More »

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣ ಗಂಗಾನಗರದ ಡಾ: ಅಂಬೇಡ್ಕರ ಭವನದಲ್ಲಿ ಶನಿವಾರದಂದು ಜರುಗಿತು ಪದಾಧಿಕಾರಿಗಳ ಆಯ್ಕೆ: ತಾಲೂಕಾ ಗೌರವಾಧ್ಯಕ್ಷ-ಮರೇಪ್ಪ ವಾಯ್.ಮರೆಪ್ಪಗೋಳ, ಸಂಚಾಲಕ-ಯಲ್ಲಪ್ಪ ಸಂ.ಸಣ್ಣಕ್ಕಿ, ಸಂಘಟನಾ ಸಂಚಾಲಕರು- ಲಕ್ಕಪ್ಪ ಯ.ತೆಳಗಡೆ, ಸುರೇಶ ದೇ.ಸಣ್ಣಕ್ಕಿ, ಸಹ ಸಂಚಾಲಕರು-ಸಿದ್ದಪ್ಪ ಯ.ಹಾದಿಮನಿ, …

Read More »

ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮ

ಗೋಶಾಲೆಯ ಗೋವುಗಳಿಗೆ ಪೂಜೆ,ಸಂಭ್ರಮ ಮೂಡಲಗಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಅರಭಾಂವಿ ಮಂಡಲ ಬಿಜೆಪಿ ಹಾಗೂ ವಿಶ್ವ ಹಿಂದು ಪರಷತ್ ವತಿಯಿಂದ ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿರುವ ಗೋಶಾಲೆಯ ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತನ ತಾಲೂಕಾ ಅಧ್ಯಕ್ಷ ಪ್ರಕಾಶ ಮಾದರ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ಮಾಡಿದ್ದ ಮಸೂಧೆಯನ್ನು ಕಾಂಗ್ರೇಸ ಸರಕಾರ ತಗೆದು ಹಾಕಿತ್ತು ಈಗ …

Read More »