Breaking News
Home / ತಾಲ್ಲೂಕು (page 269)

ತಾಲ್ಲೂಕು

ರವಿವಾರದ ಸಂತೆಯನ್ನು ಸಂಪೂರ್ಣ ರದ್ದು- ಈಶ್ವರ ಬಳಿಗಾರ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆ.2, ಆ.9, ಆ.16, ಆ.23, ಆ30ರ ದಿನಗಳ ರವಿವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ. ಶನಿವಾರ ಆ.1 ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಬೆಟಗೇರಿ ಗ್ರಾಮದ ಹಿರಿಯ ನಾಗರಿಕರ …

Read More »

ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ

ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ   ಗೋಕಾಕ: ಸಾಂಸ್ಕೃತಿಕ ಇತಿಹಾಸಕ್ಕೆ ಸ್ಥಳೀಯ ನೆಲದ ಹೆಸರುಗಳನ್ನು ಅರ್ಥೈಸುವಲ್ಲಿ ಅಧ್ಯಯನದ ಅಗತ್ಯವಿದೆ. ಒಂದು ಪ್ರದೇಶದ ಜನರ ನೆಲೆ, ಜಾಗ, ಸ್ಥಳ ಹೆಸರುಗಳಿಗೆ ಊರು, ಕೇರಿ, ಹಳ್ಳಿ, ಗ್ರಾಮ ಎಂದು ಕರೆಯಲಾಗಿದೆ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಯರಿಯಪ್ಪ ಬೆಳಗುರ್ಕಿ ಅಭಿಪ್ರಾಯ ಪಟ್ಟರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ …

Read More »

ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ.

ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ 2020ನ್ನು ತಾವು ಹಾರ್ದಿಕವಾಗಿ ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತಿಳಿಸಿದ್ದಾರೆ. ಭಾರತದ ಭವ್ಯ ಪರಂಪರೆ ಮತ್ತು …

Read More »

ಕಹಾಮ ನೌಕರರಿಗೆ ಕೊರೋನಾ ವಿಮೆ ಜಾರಿ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಾಲಚಂದ್ರ ಜಾರಕಿಹೊಳಿ

ಕಹಾಮ ನೌಕರರಿಗೆ ಕೊರೋನಾ ವಿಮೆ ಜಾರಿ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು : ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, …

Read More »

ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್!

ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್! ಮೂಡಲಗಿ :  ಎಷ್ಟೋ ಮಂದಿ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಿ, ಕಿರಿ ರಾಜಕಾರಣಿಗಳು ತಮ್ಮ ವಾಹನ(ಕಾರ, ಜೀಪ್, ಇತ್ಯಾದಿ)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ನಿಷ್ಟಾವಂತ ಪೋಲಿಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ …

Read More »

ಮೂಡಲಗಿ ಪುರಸಭೆ ಕಚೇರಿಯಲ್ಲಿ ಮತ್ತೊಂದು ಸೋಂಕು ಪತ್ತೆ

ಮೂಡಲಗಿ : ಪಟ್ಟಣದ ತಾಲೂಕು ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರದ ಎದುರಿಗೆ ಇರುವ ಪುಟ್ಟ ಹೋಟೆಲ್ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಮತ್ತೆ ಪುರಸಭೆ ಕಚೇರಿಯಲ್ಲಿ ಇನ್ನೋರ್ವ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ ಇಂದು ಒಂದೇ ದಿನ ಮೂಡಲಗಿ ಪಟ್ಟಣದಲ್ಲಿ ಒಟ್ಟು 4 ಸೋಂಕು ಪತ್ತೆಯಾಗಿವೆ.

Read More »

ಮೂಡಲಗಿ ಪಟ್ಟದಲ್ಲಿ ಒಂದೇ ದಿನ 3 ಕೊರೋನಾ ಸೋಂಕು ಪತ್ತೆ

ಮೂಡಲಗಿ – ಪಟ್ಟಣದ ಪುರಸಭೆ ಕಚೇರಿಯ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ ಬುದುವಾರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಮೂಡಲಗಿ ಮಾತ್ರ ಕೊರೋನಾ ಹೆಮ್ಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರರೂಪವನ್ನು ತೋರಿಸುತ್ತದೆ. ಹೌದು ಇಂದು ಮೂಡಲಗಿ ಪಟ್ಟದಲ್ಲಿ ಒಂದೇ ದಿನ 3 ಕೊರೋನಾ ಸೋಂಕು ಪತ್ತೆಯಾಗಿವೆ. ಪಟ್ಟಣದ ಆರೋಗ್ಯ ಇಲಾಖೆಯ ಓರ್ವ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದ ಹಿನ್ನೆಲೆ ತಾಲೂಕಾ ಆರೋಗ್ಯ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು …

Read More »

ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ

*ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ* ಮೂಡಲಗಿ : ಮೂಡಲಗಿಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಒಂದು ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ  ವಾಡ೯ 11 ರಲ್ಲಿ ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ ಅವರು ಸಸಿಗೆ ನೀರು ಹನಿಸುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹನುಮಂತ ಸತರೆಡ್ಡಿ , ಕುಮಾರ ಗಿರಡ್ಡಿ, ಅಡಿವೇಪ್ಪಾ ಕೋಳವಿ , ಪ್ರಶಾಂತ ಹಿರೇಮಠ, ಶ್ರೀಶೈಲ ಖಾನಾಪುರ,ಕೆ ಗಜಾನನ ಮತ್ತಿತರರು ಇದ್ದರು.

Read More »

ಮೂಡಲಗಿ ಪಟ್ಟಣದ 9 ನೇ ವಾರ್ಡಿನಲ್ಲಿ ಸಸಿ ನೆಡುವ ಕಾರ್ಯಕ್ರಮ

ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಯಶಸ್ವಿ ಸಾಧನೆ ಪ್ರಯುಕ್ತ ಪರಿಸರ ಜಾಗೃತಿಗಾಗಿ ಸಸಿ ನೆಡುವ ಅಭಿಯಾನ ಕಾರ್ಯಕ್ರಮ ನಡೆಯುತ್ತದೆ ಅದರಿಂದ ಮೂಡಲಗಿ ಪಟ್ಟಣದ 9 ನೇ ವಾರ್ಡಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 5 ಸಸಿ ನೆಡುವ ಮೂಲಕ ಅಂದಾಜು 3ಲಕ್ಷ ಸಸಿಗಳನ್ನು ನೇಡಲಾಗುತ್ತಿದೆ ಎಂದು ಡಾ ಅನೀಲ ಪಾಟೀಲ ಇವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. …

Read More »

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ ಮೂಡಲಗಿ: ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯದಿಂದ ಮೂಡಲಗಿ ಪುರಸಬೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಗುತ್ತಿದೆ ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಹೇಳಿದರು. ಅವರು ಸ್ಥಳೀಯ ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ …

Read More »